
ಮುಂಬಯಿ ಮಾ 13. ಮಲಾಡ್ ಪೂರ್ವದ ಇರಾನಿ ಕೊಲನಿಯ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ‘ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ’ಆಡಳಿತದ ಶ್ರೀ ಶನಿಮಂದಿರದಲ್ಲಿ 69ನೇ ವಾರ್ಷಿಕ ಮಹಾಪೂಜೆ ಮಾರ್ಚ್ 16ರಂದು ಶನಿವಾರ ಬೆಳಗ್ಗಿನಿಂದ ರಾತ್ರಿವರೆಗೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ,
ಬೆಳಿಗ್ಗೆ 8:00 ಗಂಟೆಗೆ ಗಣ ಹೋಮ ,ಆನಂತರ ಅಶ್ವಥ ಪೂಜಾ ,ಫಲ್ಲ ಪೂಜಾ ಮಧ್ಯಾಹ್ನ 12 ಗಂಟೆಗೆ
ಮಹಾ ಆರತಿ ಆ ಬಳಿಕ ಮಹಾಪ್ರಸಾದ ಅನ್ನದಾನ ನಡೆಯಲಿದೆ,
ಮಧ್ಯಾಹ್ನ 2:30 ರಿಂದ ಕಲಶ ಪ್ರತಿಷ್ಠೆ, ಬಲಿಮೂರ್ತಿ ಮೆರವಣಿಗೆ, ಶನಿ ಗ್ರಂಥ ಪಾರಾಯಣ, ಸಮಿತಿಯ ಸದಸ್ಯರಿಂದ ಭಜನೆ, ಬಳಿಕ ರಾತ್ರಿಮಹಾ ಮಂಗಳಾರತಿ ,
ತೀರ್ಥ ಪ್ರಸಾದ ವಿತರಣೆ,
ರಾತ್ರಿ 7:30ಕ್ಕೆ ಬಿಲ್ಲವರ ಅಸೋಸಿಯೇಷನ್ ಶ್ರೀ
ಗುರು ನಾರಾಯಣ ಯಕ್ಷಗಾನ ಮಂಡಳಿ ಕಲಾವಿದ ರಿಂದ
“ತುಳುನಾಡ ಸಿರಿ” ಯಕ್ಷಗಾನ ಪ್ರದರ್ಶನ ನಡೆಯಲಿದೆ,
ಭಗತ್ ಭಕರು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು, ಶನಿ ದೇವರು ಮಹಾಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿಸುವ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ (ರಿ.) ಅಧ್ಯಕ್ಷ ಮೋಹನ್ ಜಿ ಬಂಗೇರ,ಗೌರವ ಕಾರ್ಯದರ್ಶಿಗಳುಎಚ್.ಎಸ್.ಕರ್ಕೇರ,
,ಎಂ.ಎನ್.ಸುವರ್ಣ, ಗೌರವ ಕೋಶ ಅಧಿಕಾರಿಗಳಾದ ಕೆ ಎಂ ಸಾಲಿಯಾನ್ , ಅತುಲ್ ಎಂ. ಓಜಾ,
, ಭುವಾಜಿ ಕೆ.ಎನ್.ಸಿ. ಸಾಲಿಯಾನ್,.ಪೂಜಾ ಅರ್ಚಕರಾದ ಸುಧಾಕರ ಎಮ್ .ಶೆಟ್ಟಿ, ಮತ್ತಿತರ ಸದಸ್ಯರು ವಿನಂತಿಸಿಕೊಂಡಿದ್ದಾರೆ,
ಈ ಧಾರ್ಮಿಕ ಕ್ಷೇತ್ರ ಸುಮಾರು 69 ವರ್ಷದ ಹಿಂದೆ ಗೋರೆಗಾಂವ್ ಉಪನಗರ ಪೂರ್ವದಲ್ಲಿ ಇರಾನಿ ಕೊಲನಿ ಎಂಬ ಸ್ಥಳದಲ್ಲಿ ‘ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ’ ಎಂಬ ನಾಮಕರಣದೊಂದಿಗೆ ಜನ್ಮ ತಾಳಿತು. ಅಂದಿನಿಂದ ಭಜನೆ, ವಾರ್ಷಿಕ ಮಹಾಪೂಜೆ, ಶನಿಗ್ರಂಥ ಪಾರಾಯಣ ಹಾಗೂ ಇನ್ನಿತರ ಧಾರ್ಮಿಕ ಕಾಠ್ಯಕ್ರಮಗಳು ಜರಗಿಕೊಂಡು ಬರುತ್ತಲಿದೆ. ಬಡ ಜನರ ಚಿಕಿತ್ಸೆಗಾಗಿ ಆರ್ಥಿಕ ಸಹಾಯ, ವೈದ್ಯಕೀಯ ಶಿಬಿರ, ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಸಾಮಾಜಿಕ ಕಾಠ್ಯಕ್ರಮಗಳನ್ನು ಸುಸಾಂಗವಾಗಿ ನಡೆಸಿಕೊಂಡು ಬರುತ್ತಲಿದೆ.
ಇರಾನಿ ಕೊಲನಿಯ ಊರಮಂದಿಯ ಮನೆ-ಮನಗಳಲ್ಲಿ ಬಂಧುತ್ವವನ್ನು ಸ್ಥಾಪಿಸಲು ಅವರ ಬಳಿ ಇದ್ದ ಆಸ್ತ್ರವೆಂದರೆ ಸಂಘಟನೆ ಅದನ್ನು ಶಾಶ್ವತವಾಗಿರಿಸಲು ಅದಕ್ಕೆ ಧಾರ್ಮಿಕತೆಯ ಲೇಪನ ಆ ಲೇಪನವೇ ಶನಿಮಹಾತ್ಮ ಪೂಜಾ ಸಮಿತಿ,
ಪ್ರಥಮದಲ್ಲಿ ಶನಿವಾರ ಭಜನೆಯನ್ನು ಓರ್ವ ಸದಸ್ಯನ ಮನೆಯಲ್ಲಿ ಪ್ರಾರಂಭಿಸಿ, ತದ ನಂತರ ಶನಿ ದೇವರ ಕೃಪೆಯೆಂಬಂತೆ ಮತ್ತು ಭಕ್ತರ ಬೆಂಬಲದಿಂದ ಕೊಲನಿಯ ಪರಿಸರದಲ್ಲಿ ಪೂಜಾ ಸಮಿತಿಗಾಗಿ ಪ್ರತ್ಯೇಕ ಕೊಠಡಿಯೊಂದನ್ನು 1963ರಲ್ಲಿ ಖರೀದಿಸಿ ಅಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಿಕೊಂಡು ಬಂದರು. ಇದರಿಂದಾಗಿ ಸಂಘಟನೆಯ ಮಾನವೀಯ ಕೈಂಕರ್ಯದ ಹಂಬಲಕ್ಕೆ ಹೊಸ ಆಯಾಮ ದೊರೆಯಿತು. ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗ ತೊಡಗಿ, ದಿನಂಪ್ರತಿ ಪೂಜಿಸುವ ಶನಿ ದೇವರ ಭಾವಚಿತ್ರದ ಬದಲಾಗಿ 1965ರಲ್ಲಿ ದೇವರ ಅನುಗ್ರಹದೊಂದಿಗೆ ಶ್ರೀ ಶನಿದೇವರ ರಜತ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅದೇ ವರ್ಷದಲ್ಲಿ ಈ ಧಾರ್ಮಿಕ ಸಂಸ್ಥೆಯು ಮಹಾರಾಷ್ಟ್ರ ಸರಕಾರಿ ಕಾನೂನಿನನ್ವಯ ನೊಂದಣಿಗೊಂಡಿತು. ಈ ಸಂಸ್ಥೆಯು ಬರೇ ಧಾರ್ಮಿಕ ಕಾವ್ಯಗಳಿಗಾಗಿಯೇ ಮೀಸಲಾಗಿರಿಸಿಲ್ಲ. ಬದಲಾಗಿ ಸಾಮಾಜಿಕ
ಕಾರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ. ತಿಂಗಳಿಗೊಮ್ಮೆ ವೈದ್ಯಕೀಯ ಶಿಬಿರ, ವಿದ್ಯಾಭ್ಯಾಸಕ್ಕೆ
ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪರಿಸರದ ವಿದ್ಯಾರ್ಥಿಗಳಿಗೆ ಉಚಿತ ಟಿಪ್ಪಣಿ ಪುಸ್ತಕ ವಿತರಣೆ, ಶಾಲಾ ಬ್ಯಾಗ್
ವಿತರಣಾ ಕಾಠ್ಯಕ್ರಮಗಳು ಪ್ರತೀ ವರ್ಷ ಜರಗುತ್ತಿರುವುದು ಶ್ಲಾಘನೀಯ. ವಾರ್ಷಿಕ ಮಹಾ ಪೂಜೆಯ ದಿನದಂದು ಒಂದನೇ ತರಗತಿಯಿಂದ Post Graduation ತವಕದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗುವ ಸದಸ್ಯರ ಮಕ್ಕಳಿಗೆ ನಗದು ಬಹುಮಾನದೊಂದಿಗೆ ಪುರಸ್ಕರಿಸುವ ಪರಿಪಾಠವನ್ನು ಅಳವಡಿಸಿಕೊಂಡಿದ್ದೇವೆ. ಬಾಲ್ಮಾಡಿ ಹಾಗೂ ವಾಚನಾಲಯದ ವ್ಯವಸ್ಥೆಯೂ ಇದೆ..
ಶ್ರೀ ಸತ್ಯನಾರಾಯಣ ಪೂಜೆ (26 ಜನವರಿ), ಶಿವರಾತ್ರಿ, ವಾರ್ಷಿಕ ಮಹಾಪೂಜೆ, ಶ್ರೀ ಶನಿದೇವರ ಜನ್ಮ ದಿನಾಚರಣೆ (ವೈಶಾಖ ಅಮವಾಸ್ಯೆ) ಗೋಕುಲಾಷ್ಟಮಿ, ಗಣೇಶ ಚತುರ್ಥಿ, ಶಾರದಾ ಪೂಜೆ (ದಸರಾ), ನವದುರ್ಗಾ ಪೂಜೆ, ತುಳಸೀ ಪೂಜೆ ಮುಂತಾದ ಧಾರ್ಮಿಕ ಪರ್ವಗಳನ್ನು ವಿಧಿವತ್ತಾಗಿ ಆಚರಿಸುತ್ತಾ ಬಂದಿದ್ದೇವೆ