
ಮಹಿಳೆಯರ ಸೌಭಾಗ್ಯದ ಸಂಕೇತ ಅರಸಿನ ಕುಂಕುಮ: ಸಿಎ ಸುರೇಂದ್ರ ಕೆ. ಶೆಟ್ಟಿ
ಚಿತ್ರ ವರದಿ : ದಿನೇಶ್ ಕುಲಾಲ್,
ನವಿಮುಂಬಯಿ, ಮಾ. 15. ಬಾಂಬೆ ಬಂಟ್ ಅಸೋಸಿಯೇಶನ್ ಮಹಿಳಾ ವಿಭಾಗದ ವತಿಯಿಂದ ಆರಸಿನ ಕುಂಕುಮ ಕಾಠ್ಯಕ್ರಮವು ಜೂಯಿ ನಗರದಲ್ಲಿರುವ ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ನಡೆಯಿತು.
ಕಾಠ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಮಾತನಾಡಿ, ಸನಾತನ ಧರ್ಮದಲ್ಲಿ ಅರಸಿನ ಕುಂಕುಮಕ್ಕೆ ವಿಶೇಷ ಮಾನ್ಯತೆಯಿದೆ. ಅರಸಿನ ಕುಂಕುಮ ಮಹಿಳೆಯರ ಸೌಭಾಗ್ಯದ ಸಂಕೇತವೇ . ಕುಂಕುಮವನ್ನು ಹಚ್ಚುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಮಹಿಳಾ ಯಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ನಮ್ಮ ಪರಂಪರೆ ಜತೆಗೆ ಆಧುನಿಕತೆಯನ್ನೂ ಅಳವಡಿಸಿಕೊಂಡು ತಮ್ಮ ಪ್ರತಿಭೆ ಮೂಲಕ ಅಸೋಸಿಯೇಷನ್ ನಲ್ಲಿ ಮಹಿಳಾ ವಿಭಾಗದಲ್ಲಿ ಸಕ್ರಿಯ ರಾಗಿರುವುದು ಅಭಿನಂದನೆಯ ವೆಂದು ನುಡಿದರು,
ಅಧ್ಯಕ್ಷ ಸಿ ಎ ಸುರೇಂದ್ರ ಕೆ. ಶೆಟ್ಟಿ ಮತ್ತು ಪ್ರಭಾ ಎಸ್. ಶೆಟ್ಟಿ ದಂಪತಿ, ಗೌರವ ಪ್ರಧಾನ ಕಾವ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಶೆಟ್ಟಿ ದೀಪಪ್ರಜ್ವಲಿಸಿ ಕಾಠ್ಯಕ್ರಮಕ್ಕೆ ಚಾಲನೆ ನೀಡಿದರು.

ತೇಜಾಕ್ಷಿ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿ, ಮಹಿಳಾ ವಿಭಾಗದ ಕಾವ್ಯವೈಖರಿಯನ್ನು ವಿವರಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತಾ ಎನ್ ಶೆಟ್ಟಿ ಕಾರ್ಯದರ್ಶಿ ಸಹಾನಿ ವಾಮನ್ ಶೆಟ್ಟಿ, ಕೋಶಾಧಿಕಾರಿ ಉಷಾ ಶೆಟ್ಟಿ ಜತೆ ಕಾಯದರ್ಶಿ ಲಲಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಸೋಸಿಯೇಷನ್ನ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಗೌರವ ಪ್ರಧಾನ ಕಾರೈದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ ಉಪಸ್ಥಿತಿಯಲ್ಲಿ ಅಸೋಸಿಯೇಶನ್ನ ಮಹಿಳಾ ವಿಭಾಗದ ಹಿರಿಯ ಸಾಧಕಿ ಜಯಂತಿ ಎಸ್. ಶೆಟ್ಟಿ ಅವರನ್ನು ಮಹಿಳಾ ವಿಭಾಗದ ವತಿಯಿಂದ ಗೌರವಿಸಲಾಯಿತು.

ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್ ಕೆ. ಶೆಟ್ಟಿ ಮಾತನಾಡಿ, ಮಕ್ಕಳನ್ನು ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾಠ್ಯಕ್ರಮಗಳಿಗೆ ಕರೆ ತಂದಲ್ಲಿ ಅವರು ಸಂಸ್ಕಾರವಂತರಾಗಿ ಬೆಳೆಯಲು ಸಾಧ್ಯವಿದೆ. ಹಣೆಯ ಮೇಲೆ ಅರಸಿನ ಕುಂಕುಮವನ್ನು ಹಚ್ಚಿದರೆ ದೇಹದ ಅರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಎಂದು ತಿಳಿಸಿದರು.

ಕಾಠ್ಯಕ್ರಮದಲ್ಲಿ ಪದಾಧಿಕಾರಿಗಳು, ಕಾಠ್ಯಕಾರಿ ಸಮಿತಿಯ ಸದಸ್ಯರು, వివిధ ಉಪಸಮಿತಿಗಳ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾಠ್ಯಕಾರಿ ಸಮಿತಿಯ ಸದಸ್ಯೆಯರು, ಮಾಜಿ ಕಾರಾಧ್ಯಕ್ಷೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಠ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಹನಿ ವಾಮನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಮದಿಸಿದರು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು.
——
ಅರಸಿನ ಕುಂಕುಮ ಸೌಭಾಗ್ಯ ಮತ್ತು ಸಂಭ್ರಮದ ಸಂಕೇತ. ಕರ್ನಾಟಕದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ ಪದ್ಧತಿ ಇಲ್ಲದಿದ್ದರೂ ನಾವು ನಮ್ಮೆಲ್ಲರ ಕರ್ಮಭೂಮಿಯಾದ ಈ ಮಹಾರಾಷ್ಟ್ರದ ಈ ಸಂಭ್ರಮದ ಪದ್ಧತಿಯನ್ನು ಅಳವಡಿಸಿಕೊಂಡು ಕಳೆದ ಹಲವಾರು ವರ್ಷಗಳಿಂದ ಕಾಠ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮೆಲ್ಲ ಮಹಿಳಾ ಸದಸ್ಯೆಯರು ಮುಂದೆಯೂ ಇದೇ ರೀತಿ ನಮಗೆ ಪ್ರೋತ್ಸಾಹ, ಸಲಹೆ ನೀಡಬೇಕು. ಇಂತಹ ಕಾಠ್ಯಕ್ರಮಗಳಿಂದ ಮಹಿಳೆಯರಲ್ಲಿ ಪರಸ್ಪರ ಪರಿಚಯ ಬೆಳೆಯುವುದಲ್ಲದೆ, ಧಾರ್ಮಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ. ನಾವೆಲ್ಲರೂ ಒಂದಾಗಿ ಸಂಘಟನಾತ್ಮಕವಾಗಿ ಸಮಾಜಪರ ಕಾವ್ಯಗಳಲ್ಲಿ ತೊಡಗೋಣ.
-ತೇಜಾಕ್ಷಿಶೆಟ್ಟಿ, ಕಾರಾಧ್ಯಕ್ಷೆ ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ