
ಮಹಿಳೆ ಪ್ರಕೃತಿಯ ಹಲವು ರೂಪಗಳು: ನ್ಯಾ. ಜಗದೀಶ್ ಎಸ್ ಹೆಗ್ಡೆ
ಚಿತ್ರ, ವರದಿ: ರಮೇಶ್ ಉದ್ಯಾವರ
ಮಲಾಡ್ ಮಾ. 11: ಮಲಾಡ್ ಕನ್ನಡ ಸಂಘವು ಆಯೋಜಿಸಿದ ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮಾರ್ಚ್ 10ರಂದು ಮಾರ್ವೆ ರೋಡಿನ ಯುನಿಟಿ ಅಪಾರ್ಟ್ಮೆಂಟ್ ಸಂಘದ ಕಚೇರಿಯ ರಮಾನಾಥ್ ಪಯ್ಯಡೆ ಸ್ಮಾರಕರ ಮಿನಿ ಸಭಾಗೃಹದಲ್ಲಿ ಸಂಘದ ಸರ್ವ ಮಹಿಳಾ ಸದಸ್ಯರ ಒಕ್ಕೂಟದಲ್ಲಿ ವಿವಿಧ ಮನೋರಂಜನೆ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ ಅಧ್ಯಕ್ಷರಾದ ನ್ಯಾl. ಜಗದೀಶ್ ಎಸ್ ಹೆಗ್ಡೆ ದೀಪ ಪಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಸಂಘದ ಮಹಿಳಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ತಿಳಿಯುವ ಮಹಿಳಾ ದಿನವಾಗಿದ್ದು ಪ್ರಸಕ್ತ ಪ್ರಪಂಚದಾದ್ಯಂತ ಪ್ರತಿಯೊಂದು ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನಗಳನ್ನು ಕಲ್ಪಿಸಿಕೊಳ್ಳುವ ಮೂಲಕ ಆಧುನಿಕ ಬದುಕಿನಲ್ಲಿ ಗುಣಮಟ್ಟ ಹಾಗೂ ಸಂಸ್ಕಾರಯುತ ಜೀವನ ಮಹಿಳೆಯರು ನಡೆಸುತ್ತಿದ್ದಾರೆ ಎಂದು ಹೇಳಿದ ಅವರು ಮಹಿಳೆ ಪ್ರಕೃತಿಯ ಹಲವು ರೂಪಗಳಿದ್ದಂತೆ ಪ್ರತಿಯೊಂದು ಕುಟುಂಬದಲ್ಲಿ ತನ್ನ ಸಮಸ್ಯೆಯ ಜೊತೆಗೆ ಕೌಟುಂಬಿಕ ಜವಾಬ್ದಾರಿ ನಿಭಾಯಿಸುವ ಶಕ್ತಿ ಹೊಂದುವ ಮೂಲಕ, ಸಾಮಾಜಿಕ ಕ್ರೀಡೆ ರಾಜಕೀಯ
ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಯಲ್ಲೂ ಮಹಿಳೆ ಇಂದು ಸಶಕ್ತವಾಗಿ ಬೆಳೆದಿದ್ದಾಳೆ. ಸಂಘ ಜೀವನದಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಸಂಘದ ಬೆಳವಣಿಗೆಯಲ್ಲಿ ತಾವೆಲ್ಲರೂ ಸಾಕಾರ ಮೂರ್ತಿಗಳಾಗಬೇಕು. ಸಂಘದ ಸಮಸ್ಯೆಯನ್ನು ಚರ್ಚಿಸಿ ನೇರವಾಗಿ ಪರಿಹಾರ ಕಂಡುಕೊಳ್ಳುವ ಮೂಲಕ ಸುಮಾರು 22 ವರ್ಷಗಳ ಪ್ರತಿಷ್ಠಿತ ಸಂಘದ ಗೌರವಕ್ಕೆ ಧಕ್ಕೆಯಾಗದೆ ಸಂಘವನ್ನು ಬೆಳೆಸಿ ಉಳಿಸಿದವರ ಗೌರವಕ್ಕೆ ಪಾತ್ರರಾಗೋಣ ಎಂದು ಹೇಳಿದರು.

ಬಳಿಕ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳಾ ಸದಸ್ಯರು ಪ್ರಾರ್ಥನೆ ಹಾಡಿದರು. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಲಲಿತ ವಿ ಭಂಡಾರಿ ಸ್ವಾಗತಿಸಿ ಸಾಂಘಿಕವಾದ ಮಹಿಳೆ ಸಂಘಟನೆಯಿಂದ ಸಾಮಾಜಿಕವಾಗಿ ಒಂದೇ ಕ್ಷೇತ್ರದಲ್ಲಿ ಮೀಸಲಾಗಿರದೆ ಮಹಿಳಾ ಶಕ್ತಿಯ ವಿವಿಧ ಕ್ಷೇತ್ರದ ಕೊಡುಗೆಯನ್ನು ನಾವು ನೆನಪಿಸುವ ದಿನವಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಸ್ತ ಮಹಿಳಾ ಸದಸ್ಯರನ್ನೆಲ್ಲಾ ಅಭಿನಂಧಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಆಶಾಲತ ಎಸ್ ಕೋಟ್ಯಾನ್ ಮಹಿಳೆಯರ ಸಾಧನೆ ಕೊಡುಗೆ ಸ್ಥಾನಮಾನದ ಜೊತೆಗೆ ಕುಟುಂಬ ಏಳಿಗೆಗಾಗಿ ಶ್ರಮಿಸುತ್ತಿರುವ ಮಹಿಳೆ ಇಂದು ದೇಶ ಹಾಗೂ ಅಂತ ರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ. ಮಲಾಡ್ ಕನ್ನಡ ಸಂಘವು ಪ್ರಾರಂಭದ ದಿನದಿಂದಲೂ ಸಂಘದ ಮಹಿಳಾ ಕಾರ್ಯ ಚಟುವಟಿಕೆಗಳನ್ನು ಬೆಂಬಲಿಸುತ್ತಾ ಬಂದಿದೆ. ಸಂಘದ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ರೈ ಮಹಿಳಾ ದಿನಾಚರಣೆ ಮಹತ್ವ ವನ್ನು ತಿಳಿಸಿದರೆ, ಮಹಿಳಾ ವಿಭಾಗದ ಸದಸ್ಯೆ ವಿಜಯಲಕ್ಷ್ಮಿ ಶೆಟ್ಟಿ ಆಧುನಿಕ ಸಾಮಾಜಿಕ ಬದುಕಿನಲ್ಲಿ ಮಹಿಳೆಯ ಪಾತ್ರದ ಬಗ್ಗೆ ಮಾತನಾಡಿದರು. ಬಳಿಕ ಮಹಿಳಾ ಸದಸ್ಯರಿಂದ ಹಾಡು ಇನ್ನಿತರ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಜರಗಿದವು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಶೆಟ್ಟಿ ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಸಾಲ್ಯಾನ್ ಸದಸ್ಯ ನೊಂದಣಿ ಉಪ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ಆರ್ ಶೆಟ್ಟಿ ಟ್ರಸ್ಟಿ ಪ್ರಕಾಶ ಎಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಮಹಿಳಾ ವಿಭಾಗದ ಪದಾಧಿಕಾರಿಗಳು ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಗೌರವ ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ ಧನ್ಯವಾದವಿತ್ತರು.