
ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಾಳೆ (ಮಾ.16) ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ.
ಮಾ.16: ಶ್ರೀ ಕ್ಷೇತ್ರ ಶಂಕರಪುರದ ಆವರಣದಲ್ಲಿ ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ ಶ್ರೀ ಸಾಯಿ ಈಶ್ವರ್ ಗುರೂಜಿ ರವರ ಪುಣ್ಯ ಮಹಾ ಸಂಕಲ್ಪದಂತೆ ಪ್ರತಿ ವರ್ಷ ಮಾರ್ಚ್ 16 ರಂದು ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ ಆಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಶಂಕರಪುರದ ಆವರಣದಲ್ಲಿ ಇರುವ ಪ್ರಾಣಿ ಪಕ್ಷಿ ಮೋಕ್ಷ ಕಟ್ಟೆಗೆ ನೀರು/ಹಾಲೆರೆದು ಗಂಟೆ ಕಟ್ಟಬಹುದು. ನಾವು ಸಾಕಿ ಬೆಳೆಸಿದ ಪ್ರಾಣಿ ಪಕ್ಷಿಗಳು ವೃತ್ತಪಟ್ಟಿದ್ದರೆ ಅವುಗಳ ನೆನಪು ಸದ್ಗತಿ-ಮೋಕ್ಷಕ್ಕಾಗಿ ಪ್ರಾರ್ಥಿಸಲು ಅವಕಾಶವಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.