
ಕಾರ್ಕಳದ ಕುಕ್ಕುಂದೂರು ನಿವಾಸಿ ಸದಾನಂದ ಪೂಜಾರಿ (40) ಅವರು ಮಾ.16ರಂದು ರಾತ್ರಿ ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಮೃತಪಟ್ಟ ಅಘಾತಕಾರಿ ಘಟನೆ ತಡವಾಗಿ ತಿಳಿದು ಬಂದಿದೆ.
ರಾತ್ರಿ ಮನೆಯಲ್ಲಿ ಮಲಗಿದ್ದ ಅವರ ಮೃತ ದೇಹ ಮರುದಿನ ಬೆಳ್ಳಿಗೆ ತೆರೆದ ಬಾವಿಯಲ್ಲಿ ಪತ್ತೆಯಾಗಿತ್ತು.
ಭಾರತ್ ಬ್ಯಾಂಕ್ ನ ಉದ್ಯೋಗಿಯಾಗಿದ್ದ ಅವರು ಬೆಂಗಳೂರು ಶಾಖೆಯಲ್ಲಿ ಸೇವೆಗೈಯ್ಯುತಿದ್ದರು. ಸಮಾಜ ಮುಖಿ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದ ಅವರು ಮುಂಬಯಿ ಹಾಗೂ ಬೆಂಗಳೂರಿನ ಕೆಲವು ಸಂಘಟನೆಗಳಲ್ಲಿ ತೊಡಗಿಕೊಂಡು ಸೇವಾ ನಿರತರಾಗಿದ್ದರು.ಅವರು ಸೇವಾಲಯ ಸೇವಾ ಸಮಿತಿ ಟ್ರಸ್ಟ್ ಎಂಬ ಸಂಸ್ಥೆಯ ಮೂಲಕ ಹಲವಾರು ಜನಪರ ಕಾರ್ಯಗಳನ್ನು ಹಮ್ಮಿಕೊಂಡು ಜನಪ್ರಿಯರಾಗಿದ್ದರು.
ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿರುವರು.