
ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸೋಣ – ನ್ಯಾಯವಾದಿ ಸುಧಾ ಎಸ್ ಜೋಶಿ.
ವರದಿ : ಸವಿತಾ ಆರ್ ಕುಲಕರ್ಣಿ
ಕಲ್ಯಾಣ್ ಪರಿಸರದ ಕನ್ನಡಿಗರ ಪ್ರತಿಷ್ಟಿತ ಸಂಸ್ಥೆ ಕರ್ನಾಟಕ ಸಂಘ ಕಲ್ಯಾಣ್ ನ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾರ್ಚ್ 10ರಂದು ಸಂಜೆ ಕಲ್ಯಾಣ್ ಪಶ್ಚಿಮ ಬ್ರಾಹ್ಮಣ ಸೊಸೈಟಿ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡ ಸಮಾಜ ಸೇವಕಿ, ನ್ಯಾಯವಾದಿ ಸುಧಾ ಸುಧಾಕರ ಜೋಶಿ ಸಂಸ್ಥೆಯ ಗೌರವ ಸ್ವೀಕರಿಸಿ ಮಾತನಾಡುತ್ತಾ “ಮೊದಲು ಮಹಿಳೆಯರು ಮಹಿಳೆಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ, ತೊಡಗಿಕೊಂಡು, ಯಶಸ್ವಿ ಜೀವನ ನಡೆಸುತ್ತಿದ್ದಾಳೆ.ಇದು ಹೆಮ್ಮೆಯ ವಿಷಯವಾದರೂ ಮಹಿಳೆಯರು ಅಂಹಕಾರ, ಮತ್ತು ಸ್ವಾತಂತ್ರ್ಯದ ದುರ್ಬಳಕೆಯಿಂದ,ತಪ್ಪು ದಾರಿಯಲ್ಲಿ ನಡೆಯುತಿರುವುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಇಂದಿನ ಯುವತಿಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ, ಕೊನೆಗೆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿ ಕೊಳ್ಳುವ ಎಷ್ಟೋ ನಿರ್ದೇಶನಗಳು ನಮ್ಮ ಮುಂದಿದೆ. ಹಾಗಾಗಿ ಪಾಲಕರು ಮಕ್ಕಳಿಗೆ ಕೇವಲ ಉತ್ತಮ ಶಿಕ್ಷಣ ನೀಡಿದರೆ ಸಾಲದು, ಅವರಿಗೆ ಹಿಂದೂ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ, ಎಂದು ನುಡಿದರು.

ಮುಖ್ಯ ಅತಿಥಿ ಸಮಾಜ ಸೇವಕಿ, ಸಂಘಟಕಿ ಶ್ರೀದೇವಿ ಸಿ ರಾವ್ ತನ್ನ ಅನಿಸಿಕೆ ವ್ಯಕ್ತಪಡಿಸುತ್ತಾ “ಮಹಿಳೆಯರು ತಮ್ಮ ಹಕ್ಕು ಮತ್ತು ಸಮಾನತೆಗಾಗಿ ಹೋರಾಡುವ ಅವಶ್ಯಕತೆ ಇದೆಯಾದರೂ, ಮೊದಲು ತಮ್ಮಲ್ಲಿ ಸಾಮರಸ್ಯ, ಸಮಾನತೆ ಬೆಳೆಸಿಕೊಳ್ಳಬೇಕು. ತಮ್ಮ ಸಂಸಾರವನ್ನು ಸುಸೂತ್ರವಾಗಿ ಮುನ್ನಡೆಸಲು ಮಹಿಳೆಯರು ಪುರುಷರೊಂದಿಗೆ ಹೊಂದಾಣಿಕೆ ಮಾಡಬೇಕು ಎಂದು ನುಡಿದರು.
ಸಂಘದ ಅಧ್ಯಕ್ಷರಾದ ಕೆ. ಎನ್. ಸತೀಶ್ ಅವರು ಸಂಘದ ಮಾಜಿ ಅಧ್ಯಕ್ಷರುಗಳು,ಸಲಹೆಗಾರರು, ಪದಾಧಿಕಾರಿಗಳು ಸಂಘಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಳ್ಳುತ್ತಾ, ಮಹಿಳಾ ದಿನಾಚರಣೆಯಂತಹ ಕಾರ್ಯಕ್ರಮಗಳ ಮೂಲಕ ಸಂಘದ ಮಹಿಳೆಯರು ಕಾರ್ಯನಿರತರಾಗುತ್ತಾರೆ. ಮಹಿಳೆಯರ ಎಲ್ಲಾ ಕಾರ್ಯ-ಚಟುವಟಿಕೆಗಳಿಗೆ ಸಂಘ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವೀಣಾ ಕಾಮತ್ ಅವರು ಸಂಘದ ಪ್ರಥಮ ಮಹಿಳಾ ವಿಭಾಗದ ಅಧ್ಯಕ್ಷೆ ದಿ. ಶಾರದ ಭಾಸ್ಕರ ಶೆಟ್ಟಿ ಅವರನ್ನು ಸ್ಮರಿಸುತ್ತ, ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಈ ಶುಭ ಅವಸರದಲ್ಲಿ ಸಂಘದ ಮಹಿಳಾ ವಿಭಾಗದ ದ್ವಿತೀಯ ಅಧ್ಯಕ್ಷೆ ಹಾಗೂ ಕಲ್ಯಾಣ್ ಪರಿಸರದ ಸಮಾಜ ಸೇವಕಿ ಅಹಲ್ಯ ರಮೇಶ್ ಶೆಟ್ಟಿ ಅವರನ್ನು ಮಹಿಳಾ ವಿಭಾಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅಹಲ್ಯ ಶೆಟ್ಟಿ ಸನ್ಮಾನಕ್ಕೆ ಕ್ರತಜ್ಞತೆ ಸಲ್ಲಿಸಿದರು.
ಅತಿಥಿಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಸ್ವರ ಕಲಾ ವಿಭಾಗದ ಸದಸ್ಯೆಯರು ಪ್ರಾಥಿಸಿದರು.
ವಿಭಾ ದೇಶಮುಖ್, ವೀಣಾ ನಾಯಕ್ ಅತಿಥಿಗಳನ್ನು, ಪ್ರಸನ್ನ ಡಿ. ಹೆಗ್ಡೆ ಸನ್ಮಾನಿತರನ್ನು ಪರಿಚಿಯಿಸಿದರು.
ಸಂಘದ ಪದಾಧಿಕಾರಿ ಜಯಂತ್ ದೇಶಮುಖ್ , ಸದಸ್ಯರಾದ ಶ್ರೀಧರ್ ಹಿಂದೂಪುರ್, ಗಣೇಶ್ ಪೈ, ಸುಹಾಸ್ ಕುಲಕರ್ಣಿ, ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಹಾಗೂ ಸದಸ್ಯೆಯರಾದ ವೀಣಾ ನಾಯಕ್, ವಿಭಾ ದೇಶಮುಖ್, ಇಂದಿರಾ ಕುಲಕರ್ಣಿ, ಆಶಾ ನಾಯಕ್ ಸಹಕರಿಸಿದರು. ಸಂಘದ ಮಾಜಿ ಅಧ್ಯಕ್ಷ ಗೋಪಾಲ ಹೆಗ್ಡೆ, ಹಿರಿಯ ವಾಗ್ಮಿ ಪ್ರತಿಭಾ ವೈದ್ಯ ಮತ್ತು ವಿವಧ ಸಂಘ-ಸಂಸ್ಥೆ ಗಳ ಪದಾಧಿಕಾರಿಗಳು, ಮಹಿಳೆಯರು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಸದಸ್ಯೆ ಪ್ರಸನ್ನ ಧೀರಜ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರೆ, ಆಶಾ ನಾಯಕ್ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಫದ ಸದಸ್ಯರು, ಮಹಿಳಾ ವಿಭಾಗವರು, ಮಕ್ಕಳು, ವೈವಿದ್ಯಮಯ ಮನರಂಜನೆಯ ಮೂಲಕ ರಂಜಿಸಿದರು. ವಸಂತಾ ಚಂದ್ರಶೇಖರ ಮತ್ತು ಬಳಗದವರು ಪ್ರಸ್ತುತ ಪಡಿಸಿದ ಕಿರು ನಾಟಕ ಎಲ್ಲರ ಗಮನ ಸೆಳೆಯಿತು.