September 6, 2026
Mumbai News Kannada
ಮುಂಬಯಿ

ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ವತಿಯಿಂದ ಪ್ರತಿಭಟನೆ , ಹೋಟೆಲ್ ಬಂದ್





ಪಾಲ್ಘರ್ ತಾ: 14.07.2025


ಸುದ್ದಿ ವಿವರ :ಪಿ.ಆರ್.ರವಿಶಂಕರ್
ವ್ಯಾಟ್ ಮತ್ತು ಅಬಕಾರಿ ಪರವಾನಗಿ ತೆರಿಗೆಯಲ್ಲಿ ಹೆಚ್ಚಳ ಹಾಗೂ ಉದ್ಯಮದಲ್ಲಿ ಆಗುವ ವ್ಯತಿರಿಕ್ತ ಪರಿಣಾಮವನ್ನು ಸರಕಾರದ ಗಮನಕ್ಕೆ ತರುತ್ತಾ ಇಂಡಿಯನ್ ಹೋಟೆಲ್ಸ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ( ಆಹಾರ್) ಮಹಾರಾಷ್ಟ್ರದಾದ್ಯಂತ ಒಂದು ದಿನದ ಬಂದ್ ಗೆ ಕರೆ ನೀಡಿದ್ದು ಇಂದು ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ಸದಸ್ಯರು ಇಲ್ಲಿನ ಹುತಾತ್ಮ ಚೌಕ್ ಪರಿಸರದಲ್ಲಿ ಜಮಾಯಿಸಿ ತಮ್ಮವಿರೋಧವನ್ನು ಘೋಷಣೆಗಳೊಂದಿಗೆ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಪರಿಸರದ ಎಲ್ಲಾ ಬಾರ್ ಮತ್ತು ಪರ್ಮಿಟ್ ರೂಮ್ ಗಳನ್ನು ಬಂದ್ ಮಾಡಿದ್ದು , ಒಂದೇ ವರ್ಷದ ಅವ ಧಿಯಲ್ಲಿ ಮೂರನೆಯ ಬಾರಿಗೆ ತೆರಿಗೆ ಹೆಚ್ಚಳದಿಂದ ಹೋಟೆಲ್ ಉದ್ಯಮದ ಮೇಲೆ ಉಂಟಾಗುವ ಅತೀ ತೊಂದರೆ ಹಾಗೂ ಹಿನ್ನಡೆ ಕುರಿತು ಗಮನಕ್ಕೆ ತರುವಲ್ಲಿ ಪ್ರತಿಭಟನಾ ರೂಪದಲ್ಲಿ ಒಂದು ದಿನದ ಬಂದ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ನ ನಿತಾಂತ್ ಚವ್ಹಾಣ್ , ಸತೀಶ್ ಶೆಟ್ಟಿ , ಗಿರೀಶ್ ಶೆಟ್ಟಿ , ಮಂಗೇಶ್ ಆವಸ್ಥಿ , ಸಿದ್ದೇಶ್ ಶೆಟ್ಟಿ , ಅಭಿ ಷೇಕ್ ಶೆಟ್ಟಿ , ಕೌಶಿಕ್ ಶೆಟ್ಟಿ , ಪ್ರವೀಣ್ ಶೆಟ್ಟಿ , ಮ್ಯಾಕ್ಸಿ ಡಿಸಿಲ್ವ ಮತ್ತು ರಮೇಶ್‌ ಪೂಜಾರಿ ಹಾಗೂ ಹೋಟೆಲ್ ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .
ಆ ಬಳಿಕ ಹೋಟೆಲ್ ಅಸೋಸಿಯೇಶನ್ ಸದಸ್ಯರು ಉಪಜಿಲ್ಲಾಧಿಕಾರಿ ಕಛೇರಿಗೆ ತೆರಳಿ ತಮ್ಮ ಅಹವಾಲು ಪತ್ರವನ್ನು ಸಮರ್ಪಿಸಿದರು
ಸುದ್ದಿ ವಿವರ : ಪಿ.ಆರ್.ರವಿಶಂಕರ್
Cell No. 8483980035



Related posts

ಕೊಂಕಣಿ ವೆಲ್ಫೇರ್ ಅಸೋಸಿಯೇಷನ್ ಸಯನ್ : ಕನ್ಯಾ ಮರಿಯಮ್ಮನವರ ಜನ್ಮದಿನೋತ್ಸವ ಮೋಂತಿ ಪೆಸ್ತ್

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಭಜನಾ ಮಂಡಳಿಯ ವರ್ಷಾಚರಣೆ

Mumbai News Desk

ಜಾನ್ಹವಿ ಶೆಟ್ಟಿಗೆ ಶೇ.86.40 ಅಂಕ.

Mumbai News Desk

ಬಂಟರ ಸಂಘ, ಮುಂಬಯಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಆರೋಪ ಪಟ್ಟಿ ಸಲ್ಲಿಕೆ

Mumbai News Desk