April 2, 2025
ಕರಾವಳಿ

ಶ್ರೀ ದ್ವಾರಕಾಮಾಯಿ ಮಠ ಶಂಕರಪುರ : ಅರ್ಥಪೂರ್ಣವಾಗಿ ಜರಗಿದ ವಿಶ್ವ ಪ್ರಾಣಿ, ಪಕ್ಷಿಗಳ ಮೋಕ್ಷ ದಿನಾಚರಣೆ

ಶ್ರೀ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶ್ರೀ ಕ್ಷೇತ್ರ ಶಂಕರಪುರ ಇದರ ವತಿಯಿಂದ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ದಿನಾಚರಣೆ ಕಾರ್ಯಕ್ರಮ ಮಾರ್ಚ್ 16ರಂದು ದೇವಾಲಯದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೋಕ್ಷಕಟ್ಟೆಯಲ್ಲಿ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದ ಶ್ರೀ ಸಾಯಿ ಈಶ್ವರ ಗುರೂಜಿ ಮುಂದಿನ ದಿನಗಳಲ್ಲಿ ಪ್ರಾಣಿ-ಪಕ್ಷಿಗಳ ಮೋಕ್ಷ ದಿನಾಚರಣೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ದಿನಕ್ಕೆ ಮಾನ್ಯತೆ ದೊರೆಯುವಂತೆ ಸಂತ ಸಮಿತಿಯ ವತಿಯಿಂದ ಲೋಕಸಭಾ ಸದಸ್ಯರ ನೆರವಿನೊಂದಿಗೆ ಪ್ರಧಾನಿಗಳೊಂದಿಗೆ ಈ ಕುರಿತು ಚರ್ಚಿಸುವ ಉದ್ದೇಶವಿದೆ ಎಂದು ತಿಳಿಸಿದರು .
ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಕೂಡ ಆತ್ಮವಿದೆ ಈ ಆತ್ಮಕ್ಕೆ ಅವುಗಳು ಸತ್ತ ಬಳಿಕ ಮೋಕ್ಷ ದೊರಕುವ ನಿಟ್ಟಿನಲ್ಲಿ ಈ ರೀತಿಯ ವಿಭಿನ್ನವಾದ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಸ್ತೆ ಬದಿಯಲ್ಲಿ ಸತ್ತ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡುವ ಕಾಯಕವನ್ನು ಮಾಡುತ್ತಿರುವ ಅಜಯ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಸಾಮಾಜಿಕ ಮುಂದಾಳು ಸತೀಶ್ ವೇಣೂರು, ಮಹಿಳಾ ಸಂಚಾಲಕಿ ವಾರಿಜಾ ಕಲ್ಮಾಡಿ , ವಿಜಯ್ ಕುಂದರ್, ಸತೀಶ್ ದೇವಾಡಿಗ ,ವಿಘ್ನೇಶ್, ಸುಪ್ರೀತಾ, ಲಕ್ಷ್ಮಿ, ನೀಲೇಶ್ ಪ್ರದೀಪ್ ಮುಂತಾದವರಿದ್ದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು ಈ ಸಂದರ್ಭದಲ್ಲಿ ಮೋಕ್ಷ ಕಟ್ಟೆಯಲ್ಲಿ ಅಭಿಷೇಕ ನೆರವೇರಿಸಲಾಯಿತು.

Related posts

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾದಿ ಶಕ್ತಿ ಕ್ಷೇತ್ರ ಸಂಭ್ರಮದ ನಿಧಿಕುಂಬ ಪ್ರತಿಷ್ಠಾಪನೆ.. ರುದ್ರ ಯಾಗ 

Mumbai News Desk

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ ಅಭಿನಂದನಾ ಕಾರ್ಯಕ್ರಮ – ಸಿರಿತುಪ್ಪೆ

Mumbai News Desk

ಕುಲಾಲ  ಸಂಘ ಮುಂಬೈ ಯ  ಕುಲಾಲ ಭವನ ಮಂಗಳೂರು ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ,

Mumbai News Desk

ಜ 5 ರಂದು ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ21ನೇ ವರ್ಷದಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk