
ಮುಂಬಯಿ: ತುಳು ಸಂಘ, ಬೊರಿವಲಿ ಯ 13ನೇ ವಾರ್ಷಿಕೋತ್ಸವ ಸಮಾರಂಭವು ಮಾ. 23 ಶನಿವಾರ ಸಂಜೆ 4.30 ರಿಂದ ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೋರಿವಲಿ ಸಂಸ್ಕೃತಿ ಕೇಂದ್ರ, ಬೋರಿವಲಿ (ಪ.) ಮುಂಬಯಿ ಇಲ್ಲಿ ಸಂಘದ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಮುಖ್ಯ ಅತಿಥಿಯಾಗಿ ಉದ್ಯಮಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರಾದ ಉಮಾ ಕೃಷ್ಣ ಶೆಟ್ಟಿ, ಉತ್ತರ ಮುಂಬಯಿಯ ಸಂಸದರಾದ ಗೋಪಾಲ್ ಸಿ. ಶೆಟ್ಟಿ, ಗೌರವ ಅತಿಥಿಗಳಾಗಿ ಕನ್ನಡ ಸಂಘ ಸೂರತ್ ಇದರ ಮಾಜಿ ಅದ್ಯಕ್ಷ, ಉದ್ಯಮಿ ರಾಧಾಕೃಷ್ಣ ಶೆಟ್ಟಿ ಮತ್ತು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಆಗಮಿಸಲಿರುವರು. ಬೋರಿವಲಿ ಪಶ್ಚಿಮ ಜಯರಾಜ್ ನಗರದ ಮಹಿಷ ಮರ್ಧಿನಿ ದೇವಸ್ಥಾನದ ಆಡಳಿತ ಟ್ರಷ್ಟಿ ಪ್ರದೀಪ್ ಸಿ. ಶೆಟ್ಟಿ ಮತ್ತು ಬಹುಬಾಷಾ ಸಾಹಿತಿ, ಕವಿ ಸೀಮಂತೂರು ಚಂದ್ರಹಾಸ ಸುವರ್ಣ ಇವರನ್ನು ಸನ್ಮಾನಿಸಲಾಗುವುದು.
ಮನೋರಂಜನೆಯ ಅಂಗವಾಗಿ ಅಭಿನಯ ಮಂಟಪದ ಕಲಾವಿದರಿಂದ, ಕರುಣಾಕರ ಕೆ. ಕಾಪು ನಿರ್ದೇಶನದ “ಕಲ್ಕುಡ – ಕಲ್ಲುರ್ಟಿ”, ತುಳು ನಾಟಕ, ಸಂಘದ ಮಹಿಳಾ ಸದಸ್ಯರಿಂದ, ಮಕ್ಕಳಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹಿಸಬೇಕಾಗಿ ತುಳು ಸಂಘ ಬೊರಿವಲಿ ಪರವಾಗಿ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ, ಉಪಾಧ್ಯಕ್ಷ ಹರೀಶ್ ಮೈಂದನ್, ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ, ಜೊತೆ ಕಾರ್ಯದರ್ಶಿ ಈಶ್ವರ ಎಂ. ಐಲ್, ಜೊತೆ ಕೋಶಾಧಿಕಾರಿ ಸವಿತ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ, ಉಪ ಕಾರ್ಯಾಧ್ಯಕ್ಷೆ ಶೋಭಾ ಎಸ್ ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ, ಕುಸುಮ ಬಿ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಕಸ್ತೂರಿ ಎಸ್. ಶೆಟ್ಟಿ, ಕಾರ್ಯದರ್ಶಿ ಸುನಂದ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಅರ್. ಶೆಟ್ಟಿ ಶಿಮಂತೂರು, ಸದಸ್ಯತನ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ, ಸಂಘದ ಸಲಹಾ ಸಮಿತಿಯ ಪರವಾಗಿ ಮುಂಡಪ್ಪ ಪಯ್ಯಡೆ, ಬಾಬು ಶಿವ ಪೂಜಾರಿ, ಶ್ರೀನಿವಾಸ ಸಾಫಲ್ಯ, ವಾಸು ಪುತ್ರನ್, ಪ್ರಕಾಶ್ ಶೆಟ್ಟಿ ಪೇಟೆಮನೆ, ಕಾರ್ಯಕಾರಿ ಸಮಿತಿಯ ಪರವಾಗಿ ಕೃಷ್ಣರಾಜ್ ಸುವರ್ಣ, ಎಂ. ಜಿ. ಶೆಟ್ಟಿ, ಪ್ರಭಾಕರ ಶೆಟ್ಟಿ, ನ್ಯಾ. ರಾಘವ ಎಂ. ದಿವಾಕರ ಕರ್ಕೇರ, ಯಶವಂತ ಪೂಜಾರಿ, ವಿಜಯಕುಮಾರ್ ಮೂಲ್ಕಿ, ಟಿ. ವಿ. ಪೂಜಾರಿ, ಅಶೋಕ್ ಪೂಜಾರಿ, ರಾಜೇಶ್ವರಿ ಸುವರ್ಣ, ಸರಸ್ವತಿ ರಾವ್, ಸುಮತಿ ಸಾಲ್ಯಾನ್, ವೇದ ಶೆಟ್ಟಿ, ಪೂರ್ಣಿಮ ಪೂಜಾರಿ, ವೇದಾ ಪೂಜಾರಿ, ಸುನಿತಾ ಶೆಟ್ಟಿ, ಉಷಾ ಶೆಟ್ಟಿ, ಹರಿಣಿ ಶೆಟ್ಟಿ ಮತ್ತು ಉಪಸಮಿತಿಗಳ ಸದಸ್ಯರುಗಳು ವಿನಂತಿಸಿದ್ದಾರೆ.