September 6, 2026
Mumbai News Kannada
ಪ್ರಕಟಣೆ

ಜ. 26 ; ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಯ 15ನೇ ವಾರ್ಷಿಕೋತ್ಸವ





ಮುಂಬಯಿ : ವಿಶ್ವಕರ್ಮ ಸಮಾಜದ ಮಹಿಳೆಯರು ಸ್ಥಾಪಿಸಿರುವ ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಯ 15ನೇವಾರ್ಷಿಕೋತ್ಸವ ಸಮಾರಂಭವು ಜ. 26 ರಂದು ಮಧ್ಯಾಹ್ನ 2 ಗಂಟೆಯಿಂದ ಗೋರೆಗಾಂವ್ ಪಶ್ಚಿಮದ ಬಾಂಗೂರು ನಗರದ ಶ್ರೀ ರಾಮ ಮಂದಿರದ ರಾಮಕೃಷ್ಣ ಭಜನ್ ಸಮಾಜ ಇಲ್ಲಿ ನಡೆಯಲಿದೆ.  

ಪುರೋಹಿತರಾದ  ಗೋಪಾಲಕೃಷ್ಣ ಆಚಾರ್ಯ ಡೊಂಬಿವಲಿ ಇವರ  ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದಾರೆ,

ಬಳಿಕ ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯಿಂದ ವಿಶ್ವಕರ್ಮ, ಕಾಳಿಕಾಂಬಾ ಸ್ತೋತ್ರ ಪಠಣೆ ಮಧ್ಯಾಹ್ನ 2.30 ರಿಂದ ನಡೆಯುವ ಭಜನೆ ಯಲ್ಲಿ ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ, ಮುಂಬಯಿ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿ  ಮಹಿಳಾ ವಿಭಾಗ ,  ವಿಶ್ವಕರ್ಮ ಮಹಿಳಾ ವಿಭಾಗ ಡೊಂಬಿವಲಿ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ  ಮಹಿಳಾ ವಿಭಾಗ  ಪನ್ವೆಲ್,ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗ ಮಲಾಡ್,ತಂಡಗಳು ಭಾಗವಹಿಸಲಿದೆ. 

ಸಂಜೆ 5.30 ಕ್ಕೆ  ಜೈ ಶ್ರೀ ವಿಶ್ವಕರ್ಮ ಭಜನೆ ಮಂಡಳಿಯವರಿಂದ ಯಕ್ಷಗುರು ನಾಗೇಶ್ ಪೊಳಲಿ ನಿರ್ದೇಶನದಲ್ಲಿ ಯಕ್ಷಗಾನ ಶೈಲಿಯ ಕುಣಿತ ಭಜನೆ  ನಡೆಯಲಿದೆ,ತದನಂತರ ಭಜನೆ ಮಂಗಳ, ಆರತಿ ನೆರವೇರಲಿದೆ.

 ಸಂಜೆ 6.30 ಕ್ಕೆ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿಯ ಅಧ್ಯಕ್ಷರಾದ ರವೀಶ್ ಜಿ. ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ  ಪದ್ಮಾವತಿ ಬಿ. ಶೆಟ್ಟಿ ಕಾರ್ಯ ಧ್ಯಕ್ಷೆ  – ಮಹಿಳಾ ವಿಭಾಗ, ಚಾರ್ಕೋಪ್ ಕನ್ನಡಿಗರ ಬಳಗ, ಗೌರವ ಅತಿಥಿಗಳಾಗಿ   ಸುಜಾತ ಗೋಪಾಲ್ ಆಚಾರ್ಯ ಕಾರ್ಯಾಧ್ಯಕ್ಷೆ-ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮಹಿಳಾ ವಿಭಾಗ,ಸವಿತಾ ದಾಮೋದರ ಆಚಾರ್ಯ ಉಪಕಾರ್ಯಾಧ್ಯಕ್ಷೆ-ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಹಿಳಾ ವಿಭಾಗ,ಪನ್ವೆಲ್ ಆಗಮಿಸಲಿರುವರು, 

ಈ ಸಂದರ್ಭದಲ್ಲಿ ಹಿರಿಯ ಮುತೈದೆಯರಾದ ಪ್ರಪುಲ್ಲ ಜನಾರ್ದನ ಆಚಾರ್ಯ, ಗೋಕುಲಾನಂದ್ ಹೋಟೆಲ್ ನ ರಾಜೀವಿ ಕೃಷ್ಣ ಆಚಾರ್ಯ, 

ವಿಶ್ವಕರ್ಮ ಡೈಮಂಡ್ಸ್ ನ ವಸಂತಿ ಪದ್ಮನಾಭ ಆಚಾರ್ಯ, ಇವರನ್ನು ಗೌರವಿಸಲಾಗುತ್ತದೆ,ನಂತರ  ಸಾoಸ್ಕೃತಿಕ ಕಾರ್ಯಕ್ರಮ ದ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ,

ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ಮುಖ್ಯಸ್ಥರಾದ ಶ್ರೀಮತಿ.ಕೆ. ಆಚಾರ್ಯ, ಶೋಭಾ ಸನಾತನ ಆಚಾರ್ಯ, ಪುಷ್ಪಾ.ಜೆ. ಆಚಾರ್ಯ ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

———-*——



Related posts

ಆಗಸ್ಟ್ 2 ಥಾಣೆಯಲ್ಲಿ : ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನ.

Mumbai News Desk

ಸೆ.29 ರಂದು ಕೊಲಕಾಡಿ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ವಿಶೇಷ ಸಭೆ: ಶಾರದಾ ಪೂಜಾ ಮಹೋತ್ಸವ

Mumbai News Desk

ಡಿ.15 ರಿಂದ 21 ರ ವರಗೆ ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಮುಂಬಯಿ ಯಕ್ಷ ಸಪ್ತಾಹ 2023”

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ, ಫೆ. 1ರಂದು 18ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ

Mumbai News Desk

ಜ  5 :  ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಸಮಿತಿ,   47ನೇ ವಾರ್ಷಿಕ ಶ್ರೀ ಅಯ್ಯಪ್ಪ  ಮಹಾಪೂಜೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ: ಜು. 16ರಂದು ಮಾಸಿಕಸಂಕ್ರಮಣ ಪೂಜೆ

Mumbai News Desk