
ಮಂಗಳೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಜಗನ್ನಾಥ ಚೌಟ ಬದಿಗುಡ್ಡೆ ಅವರು ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಯವರು ಅಧ್ಯಕ್ಷರು ಹಾಗೂ ಸಹಾಯಕ ಆಯುಕ್ತರು ಕಾರ್ಯದರ್ಶಿಯಾಗಿರುವ ಜಗನ್ನಾಥ ಚೌಟ ಬದಿಗುಡ್ಡೆ ಅವರು ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ಮುಂದಿನ 4 ವರ್ಷಗಳವರೆಗೆ ಕರ್ನಾಟಕ ಸರಕಾರದಿಂದ ನೇಮಕಗೊಂಡಿದ್ದಾರೆ.
ಇವರು ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿ ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷರಾಗಿದ್ದಾರೆ. ಮಾತ್ರವಲ್ಲದೆ ಬಿ.ಸಿ.ರೋಡು ಪೊಲೀಸ್ ಲೈನ್ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಆಡಳಿತ ಸೇವಾ ಟ್ರಸ್ಟ್ (ರಿ.) ನ ಗೌರವ ಅಧ್ಯಕ್ಷರಾಗಿದ್ದಾರೆ.
ಜಗನ್ನಾಥ ಚೌಟ ಆಯ್ಕೆಗೆ ಬಂಟರ ಸಂಘ ಮುಂಬಯಿ ಯ ಕ್ರೀಡಾ ವಿಭಾಗದ ಕಾರ್ಯಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಆರ್ ಶೆಟ್ಟಿ,
ಕಲ್ಲಾಜೆ ಗುತ್ತು ಸುಹಾಸ್ ಆರ್ ರೈ ದಾಣಾ, ಬಂಟರ ಸಂಘ ಮುಂಬೈ ಯಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ