September 6, 2026
Mumbai News Kannada
ಸುದ್ದಿ

​ತಿರುವನಂತಪುರದಲ್ಲಿ ಜ್ಞಾನದೀಪ ‘ಗುರುದರ್ಶನ’ ಕೃತಿ ಬಿಡುಗಡೆ: ಗಡಿನಾಡಲ್ಲಿ ಕನ್ನಡ ಸಾಹಿತ್ಯದ ಬೆಳಕು!





ತಿರುವನಂತಪುರ: ಕನ್ನಡ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ವೇದಿಕೆಯಾದ ಕೇರಳದ ರಾಜಧಾನಿ ತಿರುವನಂತಪುರದಲ್ಲಿ, ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ರಚಿಸಿದ ‘ಗುರುದರ್ಶನ’ ಎಂಬ ಮಹತ್ವಪೂರ್ಣ ಕೃತಿಯು ಗಡಿನಾಡ ಸಾಹಿತ್ಯೋತ್ಸವದ ವೈಭವದಲ್ಲಿ ಬಿಡುಗಡೆಯಾಗಿ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿತು. ನಾರಾಯಣ ಗುರುಗಳ ತತ್ವದ ಆಳವನ್ನು ಅನಾವರಣಗೊಳಿಸುವ ಈ ಕೃತಿಯು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾರತ್ ಭವನ, ತಿರುವನಂತಪುರ, ಕೇರಳ ಸರ್ಕಾರದ ಆಶ್ರಯದಲ್ಲಿ ನಡೆದ ‘ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 2025’ರ ಸಮಾರೋಪ ಸಮಾರಂಭಕ್ಕೆ ವಿಶೇಷ ಮೆರಗು ನೀಡಿತು.

​ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಅವರು, “ಸಮಾಜ ಸುಧಾರಕ ನಾರಾಯಣ ಗುರುಗಳ ತತ್ವಾದರ್ಶಗಳು ಸಾರ್ವಕಾಲಿಕ. ಈ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಸುಂದರ ಶಬ್ದಗಳ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಿದ ಲೇಖಕ ಶಿವಾನಂದ ಕೋಟ್ಯಾನ್ ಅವರ ಶ್ರಮ ಶ್ಲಾಘನೀಯ. ಇಂತಹ ಸಾಹಿತ್ಯದ ಸೃಜನಶೀಲ ಕಾರ್ಯಗಳು ಎರಡು ರಾಜ್ಯಗಳ ನಡುವಿನ ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ” ಎಂದು ಪ್ರಶಂಸಿಸಿದರು.

​ಈ ಭವ್ಯ ಸಮಾರಂಭದಲ್ಲಿ ಕೃತಿಯ ಕರ್ತೃ ಶಿವಾನಂದ ಕೋಟ್ಯಾನ್ ಕಟಪಾಡಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು ಇದರ ಸಂಸ್ಥಾಪಕರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ತಿರುವನಂತಪುರ ಕನ್ನಡ ಸಂಘದ ಅಧ್ಯಕ್ಷರಾದ ಭಾನುಮತಿ ಶೆಟ್ಟಿ ಮತ್ತು ಮುಟ್ಟಮ್‌ನ ಶ್ರೀಧರ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಕಾಸರಗೋಡು, ಸಮಾಜಸೇವಕ ಮಂಜುನಾಥ ಆಳ್ವ ಮಡ್ವ, ನಿವೃತ್ತ ಅಂಡರ್ ಸೆಕ್ರೆಟರಿ ಕೇರಳ ಲೋಕಸೇವಾ ಆಯೋಗದ ಗಣೇಶ್ ಪ್ರಸಾದ್ ಪಾಣೂರು, ಅನಂತಪುರಿ ಗಡಿನಾಡ ಸಾಂಸ್ಕೃತಿಕ ಉತ್ಸವದ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯ ಕಟ್ಟೆ, ತಿರುವನಂತಪುರ ತೆಲುಗು ಸಾಂಸ್ಕೃತಿಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಜಿ.ಕೆ. ಕಿಶೋರ್, ಸಂಘಟಕ ಸರಿನ್ ಮೊಹಮ್ಮದ್, ಡಾ. ಮಲ್ಲಿಕಾರ್ಜುನ ನಾಸಿ (ಎರ್ನಾಕುಲಂ), ಪ್ರೊಫೆಸರ್ ವೀರಣ್ಣ ತುಪ್ಪದ (ಬೀದರ್), ಪ್ರೊ. ಶ್ರೀನಾಥ್, ವಕೀಲ ಎಂ.ಎಸ್. ಥೋಮಸ್ ಡಿ.ಸೋಜ, ಝಡ್.ಎ. ಕಯ್ಯಾರು, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮುಂತಾದವರು ಪಾಲ್ಗೊಂಡು ಕಾರ್ಯಕ್ರಮದ ಗಾಂಭೀರ್ಯವನ್ನು ಹೆಚ್ಚಿಸಿದರು.

​ಇಡೀ ಸಮಾರಂಭವನ್ನು ತಮ್ಮ ಶಬ್ಧಗಳ ಮೂಲಕ ರವಿ ನಾಯ್ಕಾಪು, ಲೇಖಕ ಮತ್ತು ಪತ್ರಕರ್ತರು, ಸುಂದರವಾಗಿ ನಿರೂಪಣೆ ಮಾಡಿದರು. ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ ಅವರು ವಂದನಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ತೆರೆ ಎಳೆದರು. ಕನ್ನಡ ಸಾಹಿತ್ಯದ ಹೊಸ ದಿಗಂತವನ್ನು ತೆರೆದಿಟ್ಟ ಈ ಕಾರ್ಯಕ್ರಮ, ಸಾಂಸ್ಕೃತಿಕ ಲೋಕದಲ್ಲಿ ಹೊಸ ಅಧ್ಯಾಯ ಬರೆಯಿತು.



Related posts

ಶಿಕ್ಷಣತಜ್ಞ ಶ್ರೀಧರ್ ಸುವರ್ಣರಿಗೆ ‘ಭಾರತ ರತ್ನ ಐಕಾನಿಕ್ ಪ್ರಶಸ್ತಿ 2025’

Mumbai News Desk

ಉಡುಪಿ : ಕೋಡಿಬೆಂಗ್ರೆ ಮಗುಚಿ ಬಿದ್ದ ಟೂರಿಸ್ಟ್ ಬೋಟ್, ಇಬ್ಬರು ಸಾವು

Mumbai News Desk

ಯುವ ಪ್ರತಿಭೆ ಆಶಿಕಿ (Aashiqui) ಸಾಹಿತ್ಯ ಬರೆದು ಸ್ವರ ನೀಡಿದ ಆಲ್ಬಮ್ ಸಾಂಗ್ ಬಿಡುಗಡೆ

Mumbai News Desk

ಎ.21,ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.

Mumbai News Desk

ಮುಂಬಯಿ : ಕರ್ನಾಟಕ ಬ್ಯಾಂಕ್ ನ ಹಿರಿಯ ಸಿಬ್ಬಂದಿ ನಾರಾಯಣ ಮೊಗವೀರ ಅವರ ಬೀಳ್ಕೊಡುವ ಸಮಾರಂಭ

Mumbai News Desk

ಎಸ್. ಎಸ್. ಸಿ. (CBSE) ಪರೀಕ್ಷೆ: ಶಮ ಸಂಜೀವ ಬಂಗೇರಗೆ 97.4% ಅಂಕ

Mumbai News Desk