
ಮಹಿಳೆಯರು ಉತ್ತಮ ಸಮಾಜದ ಪರಿಕಲ್ಪನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು- ಪ್ರಿಯಾ ರಾಜೇಂದ್ರ ಶೆಟ್ಟಿ.
ಮೀರಾ ರೋಡ್ ಮಾ. ಮಹಿಳೆಯರು ಪ್ರಸ್ತುತ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾದಾರ್ಪಣೆ ಮಾಡಿರುತ್ತಾರೆ ಇದು ನಮಗೆಲ್ಲರಿಗೂ ಸಂತೋಷದ ಸಂಗತಿ ಆದರೆ ಶ್ರಮಿಸುವುದರ ಜೊತೆಗೆ ತಮ್ಮ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರೊಂದಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ಕುಟುಂಬ ಸಂಸಾರ, ಧಾರ್ಮಿಕ ಶ್ರದ್ಧೆ ಇವುಗಳ ಬೀಜವನ್ನು ಮಕ್ಕಳಲ್ಲಿ ಬಿತ್ತಲು. ಒಂದು ಉತ್ತಮ ಸಂಸಾರ, ಶ್ರೇಷ್ಠ ನಾಗರಿಕತೆ ,ಶ್ರೇಷ್ಠ ರಾಜ್ಯ ,ಉತ್ತಮ ದೇಶದ ಪರಿಕಲ್ಪನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಮಹಾಮಂಡಲ ದ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮೀರಾ ಡ ಹಣು ಬಂಟ್ಸ್ ಮೀರಾ ಬೈಂದರ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಪ್ರಿಯಾ ರಾಜೇಂದ್ರ ಶೆಟ್ಟಿ ಅವರು ನುಡಿದರು,
ಮಾ 16. ಶನಿವಾರ ಭಯಂದರ್ ನ ಪ್ರಥಮೇಶ್ ಹಾಲ್ ಆರ್ ಎನ್ ಪಿ ಪಾರ್ಕ್ ಇಲ್ಲಿ ನಡೆದ ಕರ್ನಾಟಕ ಮಹಾಮಂಡಲ ದ ಮಹಿಳಾ ವಿಭಾಗದ ವತಿಯಿಂದ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಅರಸಿನ ಕುಂಕುಮ ಕಾರ್ಯಕ್ರಮದ ಗೌರವ ಅತಿಥಿಯಾಗಿ ಮಾತನಾಡಿದರು

. ಮುಖ್ಯ ಅತಿಥಿಯಾಗಿ ಆಗಮಿಸಿದ ಮೀರಾ ಡಹಾಣೂ ಬಂಟ್ಸ್ ನೈಗಾವ್ ವಿರಾರ್ ವಲಯದ ಕಾರ್ಯಕ್ರಮ ಸಮಿತಿಯ ಕಾರ್ಯಧ್ಯಕ್ಷರಾದ ಯಶೋದ ನಾಗರಾಜ್ ಶೆಟ್ಟಿ ಅವರು ಮಾತನಾಡಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮ ಮಹಿಳೆಯರು ಬಾರಿ ಸಂಖ್ಯೆಯಲ್ಲಿ ಒಗ್ಗಟ್ಟಾಗಿದ್ದಾರೆ ಪ್ರತಿ ಮಹಿಳೆಯರಲ್ಲಿರುವ ಸಂಘಟನಾ ಶಕ್ತಿ ಸಮಾಜದಲ್ಲಿ ಗುರುತಿಸುವಂತಾಗಲು ಸಮಾಜದ ಸಂಘಟನೆಯಲ್ಲಿ ಸಕ್ರಿಯರಾಗಿ ಸೇವಕರ್ತರಾಗಬೇಕು ಎಂದು ಶುಭ ಹಾರೈಸಿದರು.
ಇನ್ನೋರ್ವ ಗೌರವ ಅತಿಥಿ ಬಂಟರ ಸಂಘ ಮುಂಬೈ ವಸಾಯಿ ಡಹಾನು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷರಾದ
ಅರುಣಾ ಅಪ್ಪಣ್ಣ ಶೆಟ್ಟಿ ಅವರು ಮಾತನಾಡುತ್ತಾ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ ನಿಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಇನ್ನೋರ್ವ ಗೌರವ ಅತಿಥಿ ಪ್ರೇಮ ಹೆಗ್ಡೆ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬೈ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಕೊಟ್ರಪಾ ಡಿ ಗುತ್ತು ಮತ್ತು ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯದ ವಸಂತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರತಿ ವರ್ಷದಂತೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜದ ಹಿರಿಯ ಮಹಿಳೆಯರ ಗೌರವ, ಸನ್ಮಾನವನ್ನು ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷರಾದ ಹಿರಿಯ ಸಂಧ್ಯಾ ಡಿ ಶೆಟ್ಟಿ ಅವರಿಗೆ ನೀಡಲಾಯಿತು. ಸನ್ಮಾನವನ್ನು ಸ್ವೀಕರಿಸಿ ಸಂಧ್ಯಾ ಶೆಟ್ಟಿ ಅವರು ಈ ಗೌರವ ಸನ್ಮಾನ ನಿಜವಾಗಿಯೂ ಸಂತೋಷವನ್ನು ಉಂಟು ಮಾಡಿದೆ. ಸಂಘದಲ್ಲಿ ಹಲವಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುವುದರಿಂದ ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡುವ ಮಹಿಳೆಯರ ಮನೋಭಾವನೆಗೆ ಬೆಂಬಲ ನೀಡಿದಂತಾಗುತ್ತದೆ. ಈ ಸನ್ಮಾನವನ್ನು ನನ್ನ ಮಾತಾಪಿತರಿಗೆ ಸಮರ್ಪಿಸುತ್ತೇನೆ ಎಂದರು.
ವೇದಿಕೆಯಲ್ಲಿ ಅಧ್ಯಕ್ಷರಾದ ರವಿಕಾಂತ್ ಶೆಟ್ಟಿ ಇನ್ನ, ಉಪಾಧ್ಯಕ್ಷರಾದ ಶಂಕರ್ ಕೆ ಶೆಟ್ಟಿ ಬೋಳ, ಸಂಚಾಲಕಿ ಆಶಾ ಆರ್ ಶೆಟ್ಟಿ ಉಪಾಧ್ಯಕ್ಷರಾದ ಶೀಲಾ ಎಂ ಶೆಟ್ಟಿ, ಸಂಧ್ಯಾ ಡಿ ಶೆಟ್ಟಿ, ಕಾರ್ಯದರ್ಶಿ ನಯನ ಆರ್ ಶೆಟ್ಟಿ, ಕೋಶಾಧಿಕಾರಿ ಅನುಷಾ ಶೆಟ್ಟಿ, ಜೊತೆ ಕಾರ್ಯದರ್ಶಿ ಹೇಮಾವತಿ ಹೆಗಡೆ, ಜೊತೆ ಕೌಶಾಧಿಕಾರಿ ಯಶವಂತಿ ಶೆಟ್ಟಿ, ಭಜನಾ ಸಮಿತಿಯ ಕಾರ್ಯಧ್ಯಕ್ಷರಾದ ಸುಮತಿ ಶೆಟ್ಟಿ ಉಪಸ್ಥಿತರಿದ್ದರು.
ನಯನ ಆರ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಮಧ್ಯದಲ್ಲಿ ಸಮಾಜದ ಅನಾರೋಗ್ಯ ಪೀಡಿತ ಎರಡು ಕುಟುಂಬಗಳಿಗೆ ಧನ ಸಹಾಯ ನೀಡಲಾಯಿತು. ಅದರಂತೆ ಕಳೆದ 12 ವರ್ಷದ ಮೊದಲು ಧರ್ಮಸ್ಥಳದ ಪಾಂಗಳ ಕ್ಷೇತ್ರದಲ್ಲಿ ಅಮಾಯಕಳಾಗಿ ಕಾಮುಕರ ಕ್ರೂರಕ್ಕೆ ಬಲಿಯಾದ 17 ವರ್ಷದ ಕುಮಾರಿ ಸೌಜನ್ಯಲಿಗೆ ನ್ಯಾಯ ಸಿಗಲೆಂದು ಹಾಗೂ ನ್ಯಾಯಾಂಗ ಹೋರಾಟಗಾರರ ಹೋರಾಟ ಯಶಸ್ವಿಯಾಗಲೆಂದು ಎಲ್ಲಾ ತುಳು ಕನ್ನಡಿಗರು ದೇವರಲ್ಲಿ ಪ್ರಾರ್ಥನೆ ಗೈದರು. ಮಹಿಳಾ ಸದಸ್ಯರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸುಮತಿ ಶೆಟ್ಟಿ, ಅನುಷಾ ಶೆಟ್ಟಿ, ಸುಜಯ ಶೆಟ್ಟಿ ಯವರು ಪ್ರಾರ್ಥನೆ ಗೈದರು. ಸೇರಿದ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರಿಗೆ ಗೌರವ ನೀಡುತ್ತಾ ಕಾರ್ಯಕ್ರಮದ ಯಶಸ್ವಿಗೆ ತನು ಮನ ಧನದಿಂದ ಸಹಕರಿಸಿದ ಮತ್ತು ಪ್ರೀತಿ ಭೋಜನ ನೀಡಿದ ಮಾಜಿ ನಗರಸೇವಕರಾದ ಗಣೇಶ ಶೆಟ್ಟಿ ಅವರಿಗೆ ಧನ್ಯವಾದ ಸಮರ್ಪಣೆ ಗೈಯುತ್ತ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಚಂದ್ರಶೇಖರ್ ವಿ ಶೆಟ್ಟಿ ಯವರು ನಡೆಸಿದರು,. ಕೂನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು..
——————
ಮಹಿಳಾ ಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಾಗ ಮಾನಸಿಕ ಹಾಗೂ ದೈಹಿಕವಾಗಿ ಬಲಾಢ್ಯರಾಗುತ್ತೇವೆ; ಸುಮಂಗಳ ಅಶೋಕ್ ಕಣಂಜಾರ
ಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಾದ ಸುಮಂಗಳ ಅಶೋಕ್ ಕಣಂಜಾರ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲಾ ಮಹಿಳಾ ಸದಸ್ಯರಿಗೆ,ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಾ, ಪ್ರತಿ ಮಹಿಳೆಯರು ಮನೆ ಕೆಲಸ ದೊಂದಿಗೆ ಸಮಾಜದ ಸೇವಾ ಕಾರ್ಯಗಳಲ್ಲೂ ಕೂಡ ಭಾಗಿಗಳಾಗಬೇಕು, ತಮ್ಮೊಳಗೆ ಇರುವ ಪ್ರತಿಭೆಯನ್ನು ಗುರುತಿಸುವಂತಾಗಲು ಸಂಘ ಸಂಸ್ಥೆಗಳು ಸಹಕಾರಿಯಾಗುತ್ತದೆ ಆದ್ದರಿಂದ ಎಲ್ಲರೂ ಸಂಘ-ಸಂಸ್ಥೆಗಳಲ್ಲಿ ತೊಡಗಿಕೊಳ್ಳಬೇಕು, ಸಾಮಾಜಿಕ ಸೇವಾ ಕಾರ್ಯಗಳ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ಮಾನಸಿಕ ಹಾಗೂ ದೈಹಿಕವಾಗಿ ಬಲಾಢ್ಯರಾಗುತ್ತೇವೆ ಎಂದು ನುಡಿದರು ,
————-
ಮೀರಾ ಭಾಯಂದರ್ ನ ಸಮಸ್ತ ತುಳು ಕನ್ನಡಿಗರು ನನ್ನ ಪರಿವಾರವಿದ್ದಂತೆ ಅವರ ಕಷ್ಟ ಸುಖದಲ್ಲಿ ಸದಾ ನಾನಿರುತ್ತೇನೆ : ಗುತ್ತಿನಾರ್ ರವೀಂದ್ರ ಶೆಟ್ಟಿ. ಕೊಟ್ರಪಾಡಿ ಗುತ್ತು
ಸನ್ಮಾನ ಸ್ವೀಕರಿಸಿದ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಮಾತನಾಡುತ್ತಾ ನಿಮ್ಮ ಗೌರವ, ಸನ್ಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಸಮಾಜ ಬಾಂಧವರೋಡನೆ ಕೂಡಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಪ್ರಸ್ತುತ ಸಮಯದಲ್ಲಿ ಬಂಟರ ಸಂಘ ಮುಂಬೈ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷನಾಗಿ ಬಂಟ ಸಮಾಜದ ಸೇವೆಯನ್ನು ಮಾಡಲು ಕ್ರಿಯಾಶೀಲನಾಗಿದ್ದೇನೆ, ನನ್ನ ಸಮಾಜ ಸೇವೆಗೆ ಸನ್ಮಾನ ಸ್ಪೂರ್ತಿ ನೀಡಿದೆ, ನನ್ನಿಂದ ಯಾವುದೇ ಸೇವಾ ಕಾರ್ಯಗಳು ಸಮಾಜಕ್ಕೆ ನೀಡಲು ಅಗತ್ಯ ಬೇಕಿದ್ದಾಗ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ,ಮೀರಾ ಭಾಯಂದರ್ ನ ಸಮಸ್ತ ತುಳು ಕನ್ನಡಿಗರು ನನ್ನ ಪರಿವಾರವಿದ್ದಂತೆ ಅವರ ಕಷ್ಟ ಸುಖದಲ್ಲಿ ಸದಾ ನಾನಿರುತ್ತೇನೆ ಎಂದು ನುಡಿದರು,
————-
ನಿಸ್ವಾರ್ಥ ಸಮಾಜ ಸೇವೆ ನಮ್ಮದಾದಾಗ ,ಸನ್ಮಾನಗಳು ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ: ವಸಂತಿ ಶೆಟ್ಟಿ,
ಸನ್ಮಾನಿತರಾದ ವಸಂತಿ ಶೆಟ್ಟಿಯವರು ಮಾತನಾಡುತ್ತಾ ನನ್ನ ಈ ಸನ್ಮಾನ ಸಮಾಜದ ಇನ್ನಿತರ ಮಹಿಳೆಯರಿಗೆ ಒಂದು ಉದಾಹರಣೆಯಾಗಬೇಕು, ನಿಸ್ವಾರ್ಥ ಸೇವೆ, ಆತ್ಮೀಯತೆಯ ಪೂರಕವಾಗಿ ಈ ಸನ್ಮಾನ ದೊರೆತಿದೆ. ಇಂದು ಸನ್ಮಾನಕ್ಕೆ ನಾನು ಪಾತ್ರ ಳಾದೆ. ನಾಳೆ ನೀವು ಪಾತ್ರರಾಗಬೇಕೆಂಬುದೇ ನನ್ನ ಆಸೆ , ನಿಸ್ವಾರ್ಥ ಸಮಾಜ ಸೇವೆ ನಮ್ಮದಾದಾಗ ,ಸನ್ಮಾನಗಳು ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಎಂದು ನುಡಿದರು,
_________