32 C
Mumbai
March 7, 2026
Mumbai News Kannada
ಪ್ರಕಟಣೆ

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯಿಂದ ಮಾ. 23 ಕ್ಕೆ ಅರ್ಜಿ ವಿತರಣೆ





ಮೀರಾ ರೋಡ್ : ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಕರ ಶೆಟ್ಟಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊಡಲ್ಪಡುವ ಧನ ಸಹಾಯವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮಾಜದ ಬಂಟ ಬಂಧುಗಳ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು,  ವಾರ್ಷಿಕ ವಿಧವಾ ವೇತನ,  ಮತ್ತು ಮಾನಸಿಕ ಅಸ್ವಸ್ಥೆಯಲ್ಲಿರುವ ಯಾ ವಿಕಲಾಂಗ ಚೇತನರಿಗೆ  ಆರ್ಥಿಕ ಧನ ಸಹಾಯ ವಿತರಣೆಯು ಜೂನ್  ತಿಂಗಳಲ್ಲಿ ನಡೆಯಲಿದೆ

ಈ ಪ್ರಯುಕ್ತ ಅರ್ಜಿ ವಿತರಣೆಯು ಬಂಟರ ಸಂಘ ಮುಂಬಯಿ ಇದರ  ಮೀರಾಭಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿಯವರ ಸಮಕ್ಷಮದಲ್ಲಿ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು ಇವರ ಮುಂದಾಳತ್ವದಲ್ಲಿ ಇದೇ ಬರುವ ಮಾ. 23ರ ಶನಿವಾರದಂದು  

 ಹೋಟೆಲ್ ಕ್ರೌನ್ ಬಿಸಿನೆಸ್ , ಗೋಲ್ಡನ್ ನೆಸ್ಟ್ ಸರ್ಕಲ್ ಬಳಿ , ಮೀರಾ – ಭಾಯಂದರ್ ರೋಡ್ ಇಲ್ಲಿ ಸಂಜೆ 6:00 ರಿಂದ  ಗಂ. 7:00 ತನಕ  ನಡೆಯಲಿರುವುದು.

ಈ ಪ್ರಯುಕ್ತ 

ಇದರ ಲಾಭವನ್ನು ಪಡೆಯಲಿಚ್ಛಿಸುವ ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಹಾಜರಿದ್ದು ಸಹಾಯ ಧನ ವಿತರಣೆಯ ಲಾಭವನ್ನು ಪಡೆದುಕೊಳ್ಳಬಹುದು. ಅರ್ಜಿಯನ್ನು ಪಡೆಯಲಿಚ್ಚಿಸುವ ಸಮಾಜ ಬಾಂಧವರು ತಮ್ಮ ಗುರುತು ಪತ್ರ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮನೆಯ ವಿದ್ಯುತ್ ಬಿಲ್ ಪ್ರತಿ, ಮಕ್ಕಳ ಇತ್ತೀಚಿನ ಶಾಲಾ ದಾಖಲೆ (ಮಾರ್ಕ್ಸ್ ಕಾರ್ಡ್), ಭಾವ ಚಿತ್ರ, ವಿಧವಾ ವೇತನ ಮತ್ತು ವಿಕಲಾಂಗ ಚೇತನದ ಲಾಭ ಪಡೆಯಲಿಚ್ಚಿಸುವ ಸಮಾಜ ಬಾಂಧವರು ಸಂಭಂದ ಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಲಗ್ತೀಕರಿಸರಬೇಕು. ಅರ್ಜಿ ಪಡೆಯಲಿಚ್ಚಿಸುವ ಅರ್ಜಿದಾರರು ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವವನ್ನು ಹೊಂದಿರಬೇಕು. ಮಾತ್ರವಲ್ಲದೆ ಸದಸ್ಯತನದ ಪ್ರತಿಯನ್ನು ಅರ್ಜಿಯಲ್ಲಿ ಲಗ್ತೀಕರಿಸ ತಕ್ಕದ್ದು. ಅರ್ಜಿಯನ್ನು ಕೇವಲ ವಿದ್ಯಾರ್ಥಿಗಳಿಗೆ, ವಿಧವೆಯವರಿಗೆ, ವಿಕಲಾಂಗ ಚೇತನರಿಗೆ ಸ್ವತಃ ಯಾ ಅವರವರ ಮಾತಾ ಪಿತೃರ ಯಾ ಪೋಷಕರಿಗೆ ಮಾತ್ರ ನೀಡಲಾಗುವುದು. 

ಹೆಚ್ಚಿನ ವಿವರಗಳಿಗಾಗಿ ಮೀರಾಭಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ( 99673 25878) , ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು ( 9223481670) ,  ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು (9819200707) ಇವರುಗಳನ್ನು ಸಂಪರ್ಕಿಸಬಹುದು.



Related posts

ಜ.27 ರಂದು ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ‘ಅರಿಶಿನ ಕುಂಕುಮ’: ಜಾನಪದ ಸಮೂಹ ಗೀತೆ ಸ್ಪರ್ಧೆ ಗೆ ಅರ್ಜಿ ಆಹ್ವಾನ

Mumbai News Desk

ಜು. 7 ರಂದು ಗೊರೆಗಾಂವ್ ಕರ್ನಾಟಕ ಸಂಘದ 66ನೇ ವಾರ್ಷಿಕ ಮಹಾಸಭೆ

Mumbai News Desk

ಜ. 6 ರಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ , ಮಹಿಳಾ ವಿಭಾಗ: ಜು 28ರಂದು ಆಶಾಡ ಹಬ್ಬ ಆಚರಣೆ,

Mumbai News Desk

ಫೆ.25 : ಗೋರೆಗಾಂವ್ ಕರ್ನಾಟಕ ಸಂಘ 63ನೇ ನಾಡಹಬ್ಬ, ವಿಚಾರ ಗೋಷ್ಠಿ.

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk