
ಮುಂಬಯಿ ಮಾ 21.ವರ್ಲಿ ಮಧುಸೂದನ್ ಮಿಲ್ ಕಾಂಪೌಂಡಿನಲ್ಲಿ ಪಡುಬಿದ್ರೆ ಬೆಂಗ್ರೆ ರಮೇಶ್ ಗುರುಸ್ವಾಮಿ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಅಪ್ಪಾಜಿ ಬೀಡು ಫೌಂಡೇಶನ್ ಆಡಳಿತದ ಶ್ರೀ ಸಿದ್ದೇಶ್ವರ (ಅಪ್ಪಾಜಿ )ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆ ಬೆಳಕಿನಿಂದ ಮರುದಿನ ಮುಂಜಾನೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಜನೆ ನಡೆದವು




ಶಿವರಾತ್ರಿಯಂದು ಬೆಳಿಗ್ಗೆ ದೇವಸ್ಥಾನದಲ್ಲಿ ತುಲಾಭಾರಸಂಜೆ ರುದ್ರಾಭಿಷೇಕ ಮತ್ತು ಸಿಯಾಳ ಅಭಿಷೇಕ ರಾತ್ರಿ ಯಿಂದ ಮರುದಿನ ಬೆಳಿಗ್ಗೆ ತನಕ: ಭಜನಾ ಕಾರ್ಯಕ್ರಮ ವಿವಿಧ ಬಜನ ಮಂಡಳಿ ಮತ್ತು ಅಪ್ಪಾಜಿ ಬಿಡಿನ ಮಹಿಳಾ ಸದಸ್ಯರಿಂದ ಭಜನೆ ಬಳಿಕ
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು,
ಪೂಜಾ ಕಾರ್ಯಗಳು ಅಪ್ಪಾಜಿ ಬೀಡು ಫೌಂಡೇಶನ್ ಸಂಸ್ಥಾಪಕರಾದ ರಮೇಶ್ ಗುರುಸ್ವಾಮಿ ಆಡಳಿತ ಟ್ರಸ್ಟ್ ಶಾಂಭವಿ ರಮೇಶ್ ಗುರುಸ್ವಾಮಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಕವಿತಾ ಶೆಟ್ಟಿ ಮತ್ತಿತರ ಪದಾಧಿಕಾರಿಗಳು
ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಿತು
ಸದಸ್ಯರು ಭಕ್ತರು ತುಲಾಬಾರ ಮತ್ತು ವಿವಿಧ ರೀತಿಯ ಸೇವೆಗಳನ್ನು ನೀಡಿದರು,
ಎರಡು ದಿನಗಳು ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿದರು,