September 6, 2026
Mumbai News Kannada
ಮುಂಬಯಿ

ಕುಲಾಲ ಭವನದ ಆಹ್ವಾನ ಪತ್ರಿಕೆ ವಿತರಣೆ: ಕುಲಾಲ ಸಂಘ ಮುಂಬಯಿ-ಥಾಣೆ, ಕಾಸರ, ಖರ್ಜತ್, ಬಿವಂಡಿ ಸ್ಥಳೀಯ ಸಮಿತಿ





ಕುಲಾಲ ಭವನ ಸಮಾಜ ಬಾಂಧವರ ಸಾಮೂಹಿಕ ಶಕ್ತಿಯಾಗಿದೆ: ದೇವದಾಸ್ ಎಲ್. ಕುಲಾಲ್

ಕಲ್ಯಾಣ್, ಅಕ್ಟೋಬರ್ 30:

​ಕುಲಾಲ ಸಂಘ ಮುಂಬಯಿ, ಥಾಣೆ, ಕಾಸರ, ಖರ್ಜತ್, ಬಿವಂಡಿ ಸ್ಥಳೀಯ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ನಿರ್ಮಾಣವಾಗಿರುವ ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣಾ ಕಾರ್ಯಕ್ರಮವು ಆಗಸ್ಟ್ 26ರಂದು ಕಲ್ಯಾಣ್ (ಪಶ್ಚಿಮ)ದ ಪ್ರಿನ್ಸ್ ಬ್ಯಾಂಕ್ವೆಟ್ ಹಾಲ್, ನಾಲ್ಕನೇ ಮಹಡಿ, ಕೆ.ಇ. ಜೋಜ್ವಾಲ್ ಕಮರ್ಸಿಯಲ್ ಸೆಂಟರ್, ಕಲ್ಯಾಣ್ ರೈಲ್ವೆ ನಿಲ್ದಾಣದ ಸಮೀಪ, ಕೋರ್ಟ್ ಹತ್ತಿರದಲ್ಲಿ ಯಶಸ್ವಿಯಾಗಿ ನಡೆಯಿತು.

​ಸಭಾ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ರಘು ಎ. ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್, ಉಪಾಧ್ಯಕ್ಷರಾದ ಡಿ.ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಬಂಜನ್, ಹಾಗೂ ವೇದಿಕೆಯ ಅತಿಥಿ ಗಣ್ಯರು ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ, ಕಾರ್ಯಾಧ್ಯಕ್ಷರಾದ ಲಕ್ಷ್ಮಣ್ ಸಿ. ಮೂಲ್ಯ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಶಲ ಜಿ. ಬಂಗೇರ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

  • ರಘು ಮೂಲ್ಯ (ಅಧ್ಯಕ್ಷರು) ಮಾತನಾಡಿ, ಸಮಾಜದ ದಾನಿಗಳ ಸಹಕಾರದಿಂದ ಭವನ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. ಉಪಸ್ಥಿತರಿರುವ ಸಮಾಜ ಬಾಂಧವರ ಸಹಭಾಗಿತ್ವವೇ ಮುಖ್ಯ. ನಾವೆಲ್ಲರೂ ಒಟ್ಟಾಗಿ, ಒಮ್ಮತದಿಂದ ಮಂಗಳೂರಿನಲ್ಲಿ ನಡೆಯುವ ಸಂಭ್ರಮಕ್ಕೆ ಬಂದು ಶ್ರಮಿಸೋಣ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ನಮ್ಮ ನಡುವಿನ ಅಸಮಾನತೆಗಳನ್ನು ದೂರ ಮಾಡಿ, ನಮ್ಮ ಸಮಾಜ ಒಮ್ಮತದಿಂದ ಒಗ್ಗಟ್ಟಾಗಿ, ನಮ್ಮ ಭವನದ ಲೋಕಾರ್ಪಣೆಯ ದಿನದಂದು ಮಂಗಳಾದೇವಿ ದೇವಸ್ಥಾನದ ಹತ್ತಿರವಿರುವ ಕುಲಾಲ ಭವನದಲ್ಲಿ ಸೇರಿ, ಅಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದು ವಿನಂತಿಸಿದರು.
  • ದೇವದಾಸ್ ಕುಲಾಲ್ (ಗೌರವ ಅಧ್ಯಕ್ಷರು) ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ನಾವು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದರೂ, ದೇಶದ ಮೂಲೆ ಮೂಲೆಯಲ್ಲಿರುವ ನಮ್ಮ ಬಂಧು-ಬಾಂಧವರು ಹಾಗೂ ದಾನಿಗಳ ಸಹಾಯದಿಂದ ಬಹು ವೆಚ್ಚದ ಭವನವು ಲೋಕಾರ್ಪಣೆಯ ಸರ್ವ ಸಿದ್ಧತೆಯಲ್ಲಿದೆ. ಇದು ದೇವರ ದಯೆಯಿಂದ ನೋಡುವ ಭಾಗ್ಯ ನಮಗೆ ದೊರೆತಿದೆ, ಇದು ನಮ್ಮೆಲ್ಲರ ಭಾಗ್ಯ. ನಾವೆಲ್ಲರೂ ಮಂಗಳೂರಿಗೆ ಬಂದು ನಮ್ಮ ಇರುವಿಕೆಯನ್ನು ತೋರಿಸಬೇಕು. ಕುಲಾಲ ಭವನ ಸಮಾಜ ಬಾಂಧವರ ಸಾಮೂಹಿಕ ಶಕ್ತಿಯಾಗಿದೆ ಎಂದು ನುಡಿದರು.
  • ​ಉಪಾಧ್ಯಕ್ಷರಾದ ಡಿ.ಐ. ಮೂಲ್ಯ ಅವರು ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಸಭೆಗೆ ತಿಳಿಸಿದರು.
  • ​ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ. ಮೂಲ್ಯ ಮಾತನಾಡಿ, ಸಮಾಜ ಬಾಂಧವರು ಅತೀವ ಧೈಯದಿಂದ ಹಗಲಿರುಳು ಅಪಾರವಾಗಿ ಶ್ರಮಿಸಿ ಇಂದು ಭವನ ನಿರ್ಮಾಣಗೊಂಡಿದೆ. ನಮ್ಮ ಎಲ್ಲಾ ಬಂಧುಗಳು ಈ ಐತಿಹಾಸಿಕ ಭವನದ ಉದ್ಘಾಟನೆಗೆ ಬಂದು ಅಲ್ಲಿಯ ನಮ್ಮ ಇರುವಿಕೆಯನ್ನು ತೋರಿಸಬೇಕು. ಸಂಘವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಸಹಾಯ ಮಾಡುತ್ತಾ ಬಂದಿದೆ. ಜಗದೀಶ್ ಬಂಜನ್ ಅವರು ಉತ್ಸಾಹೀ ನಿರ್ಮಾಣ (ಕನ್ಸ್ಟ್ರಕ್ಷನ್) ಉದ್ಯಮಿಯಾಗಿ ಸಂಘಕ್ಕೆ ಬಹುಪಾಲು ಮೊತ್ತವನ್ನು ದಾನವಾಗಿ ನೀಡುತ್ತಿದ್ದಾರೆ. ನಮ್ಮ ಬಂಧು-ಬಾಂಧವರು ಸಮಯ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
  • ​ಮಹಿಳಾ ಕಾರ್ಯಾಧ್ಯಕ್ಷೆ ಸುಚಿತ ಬಂಜನ್ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮುಂಬಯಿ ಮಹಿಳಾ ಕುಲಾಲರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
  • ​ಸ್ಥಳೀಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಶಾಲ ಜಿ. ಬಂಗೇರ ಮಾತನಾಡಿ, ಈ ಪರಿಸರದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಗ್ಗಟ್ಟಿನಿಂದ ನಮ್ಮ ಕಾರ್ಯಕ್ರಮಕ್ಕೆ ಬೆಂಬಲ ನೀಡೋಣ ಎಂದರು.

​ಅತಿಥಿಯಾಗಿ ಆಗಮಿಸಿದ ಕರುಣಾಕರ್ ಜಿ.ಕೆ. ಹಾಗೂ ಕೇಂದ್ರ ಸಮಿತಿಯ ರಘು ಆರ್. ಮೂಲ್ಯ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

​ಅಮೂಲ್ಯ ತ್ರೈಮಾಸಿಕ ಪತ್ರಿಕೆಯ ಸಂಪಾದಕ ಆನಂದ್ ಬಿ. ಮೂಲ್ಯ, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಕುಲಾಲ್ ಉಪಸ್ಥಿತರಿದ್ದರು. ಮಹಿಳಾ ವಿಭಾಗ ಮತ್ತು ಯುವ ವಿಭಾಗದವರು ಸಹ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

​ಥಾಣೆ, ಕಾಸರ, ಖರ್ಜತ್, ಬಿವಂಡಿ ಸ್ಥಳೀಯ ಸಮಿತಿಯ ಗುರುವಂದನಾ ಭಜನಾ ಮಂಡಳಿಯವರಿಂದ ಭಜನೆ ಮತ್ತು ಸಂಕೀರ್ತನೆ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಚಿಂತನಾ ಮೂಲ್ಯ ಅವರು ಪೂಜಾ ನೃತ್ಯವನ್ನು ಪ್ರಸ್ತುತಪಡಿಸಿದರು.

​ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿ ಹರಿಯಪ್ಪ ಮೂಲ್ಯ ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ಗೀತಾ ಮೂಲ್ಯ ನಿರ್ವಹಿಸಿದರು. ಗೌರವಾರ್ಪಣೆಯನ್ನು ಕಾರ್ಯಾಧ್ಯಕ್ಷ ಲಕ್ಷ್ಮಣ್ ಮೂಲ್ಯ ಮಾಡಿದರು.

​ಮುಖ್ಯ ಅತಿಥಿಗಳಾದ ಜಗದೀಶ್ ಬಂಜನ್ ದಂಪತಿಯವರ ವ್ಯಕ್ತಿ ಪರಿಚಯವನ್ನು ಸುಗಂಧಿ ಎಸ್. ಮೂಲ್ಯ ಅವರು ಮಾಡಿದರು. ಕರುಣಾಕರ್ ಜಿ.ಕೆ. ಇವರ ಪರಿಚಯವನ್ನು ಆಶಾ ವಾಮನ್ ಹಾಗೂ ಸುಧಾಕರ ಎಸ್. ಮೂಲ್ಯ ಅವರ ಕಿರು ಪರಿಚಯವನ್ನು ಕವಿತಾ ಎಲ್. ಮೂಲ್ಯ ಅವರು ಮಾಡಿದರು. ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

​ಅಂತಿಮವಾಗಿ ಸುಧಾಕರ್ ಮೂಲ್ಯ ಅವರು ವಂದನಾರ್ಪಣೆ ಮಾಡಿದರು.



Related posts

ಹಟ್ಟಿಯಂಗಡಿ ಮೇಳದ ಮುಂಬಯಿ ಪ್ರವಾಸ: ಗಾಣೇಕರ್ ನಾಟ್ಯಾಲಯದಲ್ಲಿ ಉದ್ಘಾಟನೆ

Mumbai News Desk

ಬಂಟರ ಸಂಘ ಡೊಂಬಿವಲಿ ವತಿಯಿಂದ ನವರಾತ್ರಿ ಉತ್ಸವಕ್ಕೆ ಸಡಗರದ ‘ಹೊರೆ ಕಾಣಿಕೆ’ ಸಮರ್ಪಣೆ

Mumbai News Desk

ಬಂಟರ ಸಂಘ ಮುಂಬಯಿ ವಸಾಯಿ ದಹಾಣ ಪ್ರಾದೇಶಿಕ ಸಮಿತಿ ಯಿಂದ.ಸಮಾಜದ ಅರ್ಥಿಕವಾಗಿ ಹಿಂದುಳಿದ ಪರಿವಾರ ಮತ್ತು ವಿದ್ಯಾರ್ಥಿಗಳೀಗೆ 2025-26 ಸಾಲಿನ ಆರ್ಥಿಕ ಸಹಾಯ ವಿತರಣೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ )ಥಾಣೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್ ಆಯ್ಕೆ.

Mumbai News Desk

ಫಲಿಮಾರು ಮಠದೀಶರಿಗೆ ವಿಶ್ವ ಬಂಟರ ಕಾರ್ಯಕ್ರಮದ ಆಮಂತ್ರಣ.

Mumbai News Desk

ಎಸ್ ಎಸ್ ಸಿ ಯಲ್ಲಿ ಅನನ್ಯಾ ಹರೀಶ್ ಪೂಜಾರಿ ಶೇ 97.80 ಅಂಕ

Mumbai News Desk