
ಏಪ್ರಿಲ್ 7 ರಂದು ಥಾಣೆ ಯಲ್ಲಿ ದಕ್ಷಿಣ ಕನ್ನಡ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳೊಂದಿಗೆ ತುಳು ಕನ್ನಡಿಗರ ಸಭೆ
ಸಂಸದ ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿವಂತೆ ಮನವಿ.
ಮುಂಬಯಿ : ಮುಂಬೈ, ಥಾಣೆ ಜಿಲ್ಲೆ, ಮತ್ತು ನವಿ ಮುಂಬಯಿಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ , ದಕ್ಷಿಣ ಕನ್ನಡ ಮತ್ತು ಉಡುಪಿ -ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯವರೊಂದಿಗೆ ವಿಶೇಷ ಸಭೆಯೊಂದನ್ನು ಎಪ್ರಿಲ್ 7ರಂದು ಥಾಣೆಯಲ್ಲಿ ಆಯೋಜಿಸಿಕೊಂಡಿದ್ದು ಈ ಬಗ್ಗೆ ಮಾ 27 ರಂದು ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ ಶೆಟ್ಟಿ ಅವರನ್ನು ಅವರ ನಿವಾಸದಲ್ಲಿ ಪನ್ವೇಲ್ ಮಹಾನಗರ ಪಾಲಿಕೆಯ ನಗರಸೇವಕ ಸಂತೋಷ್ ಜಿ ಶೆಟ್ಟಿ ಭೇಟಿಯಾಗಿ ಏಪ್ರಿಲ್ 7 ರಂದು ಥಾಣೆ ಯಲ್ಲಿ ನಡೆಯಲಿರುವ ತುಳು ಕನ್ನಡಿಗರ ಸಭೆಯ ಅಧ್ಯಕ್ಷತೆಯನ್ನು ವಹಿಸುವಂತೆ ವಿನಂತಿಸಿ, ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ನೀಡಿದರು,
ಈ ಸಂದರ್ಭದಲ್ಲಿ ಎರ್ಮಾಳ್ ಹರೀಶ್ ಶೆಟ್ಟಿ, ಪನ್ವೇಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಪದ್ಮ, ಹಾಗೂ ಪನ್ವಲ್ ,ಥಾಣೆ ಪರಿಸರದ ತುಳು ಕನ್ನಡಿಗರು ಪಾಲ್ಗೊಂಡಿದ್ದರು.