July 23, 2026
Mumbai News Kannada
ಸುದ್ದಿ

ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಭಜನಾ ಕಾರ್ಯಕ್ರಮ.







ಮುಂಬಯಿಯ ಪ್ರಸಿದ್ಧ ಭಜನಾ ಮಂಡಳಿಗಳಲ್ಲಿ ಒಂದಾಗಿರುವ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಜರಿಮರಿ ಇದರ ಸದಸ್ಯರು ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಹರಿನಾಮ ಸಂಕೀರ್ತನೆ ಭಜನೆ ಕಾರ್ಯಕ್ರಮ ವನ್ನು ನಡೆಸಿ ಕೊಟ್ಟರು.

ಡಿಸೆಂಬರ್ 17 ರಿಂದ 21 ರ ವರಗೆ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಶ್ರೀ ಕ್ಷೇತ್ರ ಕೊಡ್ಯಡ್ಕ, ಶ್ರೀ ಮಹಾ ವಿಷ್ಣು ಮಂದಿರ ಪುತ್ತೂರು, ಶ್ರೀ ಕ್ಷೇತ್ರ ಹನುಮಗಿರಿ, ಶ್ರೀ ಕ್ಷೇತ್ರ ಕಬತಾರ್, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ, ಶ್ರೀ ಮಾರಿಯಮ್ಮ ದೇವಸ್ಥಾನ ಕಾಪು, ಶ್ರೀ ಕೃಷ್ಣ ಮಠ ಉಡುಪಿ, ಶ್ರೀ ಕ್ಷೇತ್ರ ಅಂಬಲ್ಪಾಡಿ, ಶ್ರೀ ವಿಷ್ಣು ದೇವಸ್ಥಾನ ಶಕ್ತಿ ನಗರ ಮಂಗಳೂರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀ ಭಗವತಿ ದೇವಸ್ಥಾನ ಸಶಿಹಿತ್ಲು, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮಣಿಲ, ಮುಂತಾದ ಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಎಲ್ಲಾ ಕ್ಷೇತ್ರಗಳ ಆಡಳಿತ ಮುಕ್ತೆಸರು, ಅರ್ಚಕರು ಹಾಗೂ ಪದಾಧಿಕಾರಿಗಳು ಮಂಡಳಿಯನ್ನು ಸ್ವಾಗತಿಸಿ ಸತ್ಕರಿಸಿದರು.

ಉಮಾ ಮಹೇಶ್ವರಿ ಮಂದಿರದ ಆಡಳಿತ ಮೊಕ್ತೇಸರರಾದ ಶ್ರೀಮತಿ ಬಿ. ಕೆ. ಲಲಿತಾ ಶೀನ, ಹಿರಿಯರಾದ ಬಿ. ಎನ್. ಶೆಟ್ಟಿ, ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿ ಕೊಟ್ಟ ಭುವಾಜಿ ರವೀಂದ್ರ ಶಾಂತಿ ಹಾಗೂ ತಂಡವನ್ನು ಅಭಿನಂದಿಸಿದರು.



Related posts

ಭಾರತ್ ಬ್ಯಾಂಕ್ ಗೆ ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಹಣಾ ಪ್ರಶಸ್ತಿ ( Best HR Management Award )

Mumbai News Desk

ತ್ರಿಶಿಕಾ ನರೇಂದ್ರ ಶೆಟ್ಟಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk

ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ – 58 ನೇ ಆರ್ ಎನ್ ಉಚ್ಚಿಲ್ ಸ್ಮಾರಕ ವಾರ್ಷಿಕ ಅಥ್ಲೆಟಿಕ್ಸ್ ಮೀಟ್

Mumbai News Desk

ತೆಂಕು ತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ದಿನೇಶ್ ಅಮ್ಮಣ್ಣಾಯರು ಇನ್ನಿಲ್ಲ

Mumbai News Desk

ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ಚಿಕ್ಕಬಳ್ಳಾಪುರದ ಎಂಟು ಭಕ್ತರ ದುರ್ಮರಣ

Mumbai News Desk

“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ

Mumbai News Desk