
ಮಂಜೇಶ್ವರ : ತುಳುನಾಡಿನ ಮಹಾದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಮಾತೃಶ್ರೀ ಕನ್ಯಾನ ಶ್ರೀಮತಿ ಲೀಲಾವತಿ ಶೆಟ್ಟಿ (90) ಇಂದು ಬೆಳಿಗ್ಗೆ ಸ್ವರ್ಗಸ್ತರಾಗಿದ್ದಾರೆ. ಕನ್ಯಾನ ದಿ.ಪಕೀರ ಶೆಟ್ಟಿಯವರ ಧರ್ಮಪತ್ನಿಯಾಗಿರುವ ಇವರು ಮಕ್ಕಳಾದ ಸದಾಶಿವ ಶೆಟ್ಟಿ, ಚಂದ್ರಹಾಸ ಶೆಟ್ಟಿ,ರಘರಾಮ ಶೆಟ್ಟಿ,ರವೀಂದ್ರ ಶೆಟ್ಟಿ, ವಿಜಯಲಕ್ಷ್ಮಿ ಶೆಟ್ಟಿ,ದಿವಾಕರ ಶೆಟ್ಟಿ ನಿತ್ಯಾನಂದ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಸದಾಶಿವ ಶೆಟ್ಟಿಯವರ ಕೊಡುಗೈದಾನದಂತಹ ಸಾಮಾಜಿಕ ಕಾರ್ಯಗಳಿಗೆ ಸದಾ ಸ್ಪೂರ್ತಿಯಾಗಿದ್ದ ಇವರು ಊರಿನಲ್ಲಿ ನಡೆಯುವ ಮಹತ್ಕಾರ್ಯಗಳಲ್ಲಿ ಮಕ್ಕಳೊಡನೆ ಪಾಲ್ಗೊಳ್ಳುತ್ತಿದ್ದರು.
ಲೀಲಾವತಿ ಶೆಟ್ಟಿ ನಿಧನ ಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನೆರೆ ವಿಶ್ವನಾಥ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಮತ್ತು ಪದಾಧಿಕಾರಿಗಳು, ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ ಎ ಸುರೇಂದ್ರ ಕೆ ಶೆಟ್ಟಿ, ಮತ್ತು ಪದಾಧಿಕಾರಿಗಳು, ತುಳುಕೂಟ ಫೌಂಡೇಶನ್ ನಾಲಸಪುರ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಮತ್ತು ಪದಾಧಿಕಾರಿಗಳು, ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷರುದ ಮೋಹನ್ ದಾಸ್ ಶೆಟ್ಟಿ ಉಳ್ತೂರು ಮತ್ತಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ದುಃಖ ಸಂತಾಪ ಸೂಚಿಸಿರುವರು