
ಮಹಿಳೆಯರು ಸಮಾಜ ಸೇವೆಯಲ್ಲಿ ತೊಡಗಿ ಕೊಂಡಾಗ ಮನಸ್ಸಿಗೆ ನೆಮ್ಮದಿ ; ವಸಂತಿ ಸುರೇಶ್ ಹೆಗ್ಡೆ
ನವಿ ಮುಂಬಯಿ : ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ ಇದರ ಮಹಿಳಾ ವಿಭಾಗದ ವತಯಿಂದ ಜಾಗತಿಕ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾ 10 ರಂದು ಸರೋವರ ಅನೆಕ್ಸ್ ಬ್ಯಾಂಕ್ವೆಟ್ ಹಾಲ್ ಸೆಕ್ಟರ್ 6, ಕಮೋಟೆ ಇಲ್ಲಿಸಂಸ್ಥೆಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವಸಂತಿ ಸುರೇಶ್ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸುಜಿತ್ ವಿಠಲ ಪೂಜಾರಿ (ಲಕ್ಷ್ಮೀಶ) ಇವರ ಉಪಸ್ಥಿತಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು,

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುಪ್ರಿಯಾ ಅನಿಲ್ ಹೆಗ್ಡೆ, ಅದ್ಯಕ್ಷರು ಮಹಿಳಾ ವಿಭಾಗ, ಶ್ರೀ ಶನೀಶ್ವರ, ಅಯ್ಯಪ್ಪ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ನೇರುಳ್ , ಪೂರ್ಣಿಮಾ ದಯಾನಂದ್ ದೇವಾಡಿಗ (ಅದ್ಯಕ್ಷರು ಸಾಂಸ್ಕೃತಿಕ ವಿಭಾಗ ದೇವಾಡಿಗ ಸಂಘ ಮುಂಬೈ) ಸರೋಜಿನಿ ಜಯಕರ್ ಪೂಜಾರಿ (ಅದ್ಯಕ್ಷರು ಮಹಿಳಾ ವಿಭಾಗ, ಶ್ರೀ ಶನೀಶ್ವರ ಮಂದಿರ ನೆರೂಲ್) ವೀಣಾ ವಿಶ್ವನಾಥ್ ಪೂಜಾರಿ (ಮಾಜಿ ಮಹಿಳಾ ಅದ್ಯಕ್ಷರು ಶ್ರೀ ಶನೀಶ್ವರ ಅಯ್ಯಪ್ಪ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ನೇರೂಲ್) ರೇವತಿ ಬಾಬು ಪೂಜಾರಿ (ಅದ್ಯಕ್ಷರು ಮಹಿಳಾ ವಿಭಾಗ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ ಕಲಂಬೊಳಿ ) ಉಜ್ವಲಾ ಮೋಹನ್ ಕೋಟ್ಯಾನ್ ( ನಿವೃತ ಮುಖೋಪದ್ಯಾಯರು ಸಿ ಕೆ ಟಿ C K T ಅಂಗ್ಲ ಮಾದ್ಯಮ ಶಾಲೆ ನ್ಯೂ ಪನ್ವೆಲ್ ) ಇವರುಗಳ ಸಮ್ಮುಖದಲ್ಲಿ ನಡೆಯಿತು.
ಸುಪ್ರಿಯಾ ಅನಿಲ್ ಹೆಗ್ಡೆ ಮಾತನಾಡುತ್ತಾ ಇಂದಿನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿದ್ದಾರೆ. ಅವಕಾಶಗಳ ಸದುಪಯೋಗವನ್ನು ಎಲ್ಲಾ ಮಹಿಳೆಯರು ಪಡೆಯಬೇಕು ಎಂದರು.
ಪೂರ್ಣಿಮ ದಯಾನಂದ್ ದೇವಾಡಿಗ ತಾವು ತಮ್ಮ ಬಿಡುವಿಲ್ಲದ ಕೆಲಸದ ನಡುವೆ ಸಮಾಜಸೇವೆ ಮಾಡಲು ಹೇಗೆ ಸಾದ್ಯವಾಯಿತು ಎಂದು ವಿವರವಾಗಿ ತಿಳಿಸಿದರು.
ವೀಣಾ ವಿಶ್ವನಾಥ್ ಪೂಜಾರಿ ಮಾತನಾಡುತ್ತಾ ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಇದರ ಮಹಿಳೆಯರ ಕಾರ್ಯ ವೈಖರಿಯನ್ನು ಕಂಡು ತುಂಬಾ ಹೆಮ್ಮೆಯಾಗುತ್ತದೆ. ಮಹಿಳೆಯರು ತುಂಬಾ ಉತ್ಸಾಹದಿಂದ ಕೆಲಸ ಮಾಡಿದ್ದೀರಿ ಎಂದರು.
ಸರೋಜಿನಿ ಜಯಕರ ಪೂಜಾರಿ ನಾನು ಈ ಸಂಸ್ಥೆಯ ಮಾಜಿ ಕಾರ್ಯ ಧ್ಯಕ್ಷೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಹಾಗೂ ಸಂಸ್ಥೆಯ ಮಹಿಳೆಯರು ಮುಂದೆ ಬಂದು ಈ ಸಂಸ್ಥೆಯ ಉನ್ನತಿಗೆ ಶ್ರಮಿಸೋಣ ಎಂದರು.
ರೇವತಿ ಪೂಜಾರಿ ಸಂಸ್ಥೆಗಳು ಒಂದಕ್ಕೊಂದು ಅನ್ಯೋನ್ಯತೆಯಿಂದ ಇದ್ದು ಜನಪರ ಕಾರ್ಯಗಳಲ್ಲಿ ತೊಡಗಬೇಕು ಎಂದರು.

ಮಕ್ಕಳಿಗೆ ಯಾವ ರೀತಿ ಶಿಕ್ಷಣ ಒದಗಿಸಬೇಕು ಎಂದು ಉಜ್ವಲಾ ಮೋಹನ್ ಕೋಟ್ಯಾನ್ ವಿವರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಸುಜಿತ್ ಪೂಜಾರಿ ಯವರು ಮಾತನಾಡುತ್ತಾ ನಾವು ಮಕ್ಕಳಿಗೆ ಧರ್ಮದ ಬಗ್ಗೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿ ಜೀವನದಲ್ಲಿ ಒಳ್ಳೆಯ ರಸ್ತೆಯಲ್ಲಿ ನಡೆಯುವಂತೆ ಸಹಕರಿಸಬೇಕು ಎಂದು ಹೇಳಿದರು.
ಸಂಸ್ಥೆಯ ಮಹಿಳಾ ವಿಭಾಗದ ಸದಸ್ಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಒಳ್ಳೆಯರೀತಿಯಲ್ಲಿಮೂಡಿಬಂದವು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಹೆಗ್ಡೆ ಯವರೂ ಮಾತನಾಡುತ್ತಾ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಬರೆ ಮನೆಯ ಅಡುಗೆ ಕೋಣೆಗೆ ಮೀಸಲಿಡಬಾರದು ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ಕೂಡ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಸುಧಾಕರ್ ಪೂಜಾರಿ Kemthoor ಇವರು ನಿರೂಪಿಸಿ ಮಹಿಳಾ ದಿನಾಚರಣೆ ನಾವು ಯಾಕೆ ಆಚರಿಸುತ್ತೇವೆ ಅದು ಎಲ್ಲಿಂದ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದರು.
ಅಮಿತಾ ಶೆಟ್ಟಿ ಇವರು ಧನ್ಯವಾದ ನೀಡಿದರು . ಸುಜಿತ್ ಪೂಜಾರಿ ಬಳಗ ದರಿಂದ ಸುಮಧುರ ರಸಮಂಜರಿ ನಡೆಯಿತು , ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು ,