September 6, 2026
Mumbai News Kannada
ಪ್ರಕಟಣೆ

ಮಾ. 29 ರಂದು ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ್ ನ ವತಿಯಿಂದ ಮಹಿಳಾ ದಿನಾಚರಣೆ





ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) ಇದರ ಆಡಳಿತ ಸಮಿತಿಯ ಮಾರ್ಗದರ್ಶನದೊಂದಿಗೆ ಮಹಿಳಾ ವಿಭಾಗದ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ದಿನಾಂಕ : 29-3-2024ರ ಶುಕ್ರವಾರ ಅಪರಾಹ್ನ 3.00 ರಿಂದ ಮಾತೋಶ್ರಿ ಹವಾನಿಯಂತ್ರಿತ ಹಾಲ್, ಮೆಕ್ಸಿ ಗ್ರಾಂಡ್ ಎದುರುಗಡೆ, ಪಟೇಲ್ ಮಾರ್ಟ್ ಮೇಲ್ಗಡೆ, ಸಂತೋಷಿ ಮಾತಾ ರೋಡ್, ಕಲ್ಯಾಣ್ ಪಶ್ಚಿಮ ಇಲ್ಲಿ ನಡೆಯಲಿದೆ.

ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ್ ನ ಅದ್ಯಕ್ಷಿ ಜ್ಯೋತಿ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಶ್ರೀಮತಿ ರೇವತಿ ಸದಾನಂದ ಶೆಟ್ಟಿ, (ಮಾಜಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಥಾಣೆ ಬಂಟ್ಸ್ ಅಸೋಸಿಯೇಶನ್, ಥಾಣೆ) ಗೌರವ ಅತಿಥಿಯಾಗಿ ಶ್ರೀಮತಿ ಮಂಜುಳಾ ಶೇಖರ್ ಶೆಟ್ಟಿ (ಮಾಜಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿ) ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯೆ, ಸಾಹಿತಿ, ಲೇಖಕಿ ಡಾ. ದಾಕ್ಷಾಯಿಣಿ ಯಡಹಳ್ಳಿ ಯವರನ್ನು ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಕನ್ನಡ ಕಲಾ ತಂಡಗಳಿಂದ ಕನ್ನಡ ಜನಪದ ನೃತ್ಯ ಸ್ಪರ್ಧೆ ಮತ್ತು ಸಂಸ್ಥೆಯ ಸದಸ್ಯೆಯರಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜ್ಯೋತಿ ಪ್ರಕಾಶ್‌ ಹೆಗ್ಡೆ (ಅಧ್ಯಕ್ಷರು) ಮತ್ತು ಪದಾಧಿಕಾರಿಗಳು, ಗೌರವ ಅಧ್ಯಕ್ಷರು, ಸಲಹೆಗಾರರು, ಆಡಳಿತ ಸಮಿತಿ ಸದಸ್ಯರು ಹಾಗೂ
ಭಾರತಿ ಬಿ. ಶೆಟ್ಟಿ (ಕಾರ್ಯಾಧ್ಯಕ್ಷೆ : ಮಹಿಳಾ ವಿಭಾಗ)
ಮತ್ತು ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯೆಯರು ಪ್ರಕಟಣೆಯಲ್ಲಿ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.



Related posts

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಮಾರ್ಚ್ 8ರಂದು ಇತಿಹಾಸ ಪ್ರಸಿದ್ಧ ಗಂಗಾರತಿ ವೈಭವ

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk

ಕರ್ನಿರೆ ಶ್ರೀ ದೈವರಾಜ ಕೋರ್ದಬ್ಬು ದೇವಸ್ಥಾನ: ಮಾರ್ಚ್ 25 ರಿಂದ 29 ರವರೆಗೆ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

Mumbai News Desk

ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಮತ್ತು ಕವಿತಾ ಸ್ಪರ್ಧೆ – 2025

Mumbai News Desk

ನ. 19 ರಂದು ಶ್ಲೋಕಾ ಸಂತೋಷ್ ಶೆಟ್ಟಿ  ಪನ್ವೆಲ್ ಯವರಿಂದ ಭರತನಾಟ್ಯ ಆರಂಗೇಟ್ರಂ

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಡಾ. ಸದಾನಂದ ಶೆಟ್ಟಿ ಯವರ ಮುಂದಾಳತ್ವದಲ್ಲಿ 08/02/2025 ರಂದು ಮುಂಬಯಿಯಲ್ಲಿ ಪ್ರಥಮ ಬಾರಿಗೆ ಬೃಹತ್‌ ಉಚಿತ ವೈದ್ಯಕೀಯ ಶಿಬಿರ

Mumbai News Desk