23.5 C
Karnataka
April 4, 2025
ಮುಂಬಯಿ

ಬಂಟರ ಸಂಘ ವಸಯಿ ದಹಣು ಪ್ರಾದೇಶಿಕ ಸಮಿತಿ,ಹಾಗೂ ತುಳುಕೂಟ ಫೌಂಡೇಶನ್ ಇದರ ಜಂಟಿ ಅಶ್ರಯದಲ್ಲಿ ಶ್ರೀದೇವಿ ಯಕ್ಷ ಕಲಾ ನಿಲಯದ ಮಕ್ಕಳ ಸ್ನೇಹ ಸಮ್ಮಿಲನ



ಸದಸ್ಯರ ಒಗ್ಗಟ್ಟಿನ ಪರಿಶ್ರಮ ಸಂಸ್ಥೆಗೆ ಕೀರ್ತಿ ತಂದಿದೆ: ಶಶಿಧರ್ ಶೆಟ್ಟಿ ಇನ್ನಂಜೆ

ತುಳುಕೂಟ ಫೌಂಡೇಶನ್ (ರಿ )ನಾಲಾಸೋಪಾರ ಹಾಗೂ
ಬಂಟರ ಸಂಘ ವಸಯಿ ದಹಣು ಪ್ರಾದೇಶಿಕ ಸಮಿತಿಯ ಜಂಟಿ ಆಶ್ರಯದಲ್ಲಿ ಶ್ರೀ ದೇವಿ ಯಕ್ಷ ಕಲಾ ನಿಲಯದ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಾಲಸೋಪರ ಪಶ್ಚಿಮದ ರಿಜನ್ಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು,

ಕಾರ್ಯಕ್ರಮದಲ್ಲಿ ಬಂಟರ ಸಂಘದ ಜೊತೆ ಕೋಶಧಿಕಾರಿ , ತುಳುಕುಟ ಫೌಂಡೇಶನ್ ಅಧ್ಯಕ್ಷ ,ಶ್ರೀ ದೇವಿ ಯಕ್ಷ ಕಲಾ ನಿಲಯದ ಅಧ್ಯಕ್ಷ ಶಶಿಧರ್ ಶೆಟ್ಟಿ ಇನ್ನಂಜೆ , ವಸಯಿ ಡಹಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ತುಳುಕೂಟದ ಕಾರ್ಯದರ್ಶಿ ಜಗನಾಥ್ ಡಿ. ಶೆಟ್ಟಿ ಪಳ್ಳಿ, ಕೋಶಾಧಿಕಾರಿ ರಾಜೇಶ್ ಕರ್ಕೇರ, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ಸೀತಾರಾಮ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣ, , ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಸತೀಶ್ ಶೆಟ್ಟಿ, ಹಾಗೂ ಶ್ರೀದೇವಿ ಯಕ್ಷ ಕಲಾ ನಿಲಯದ , ಕಾರ್ಯದರ್ಶಿ,ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್, ಹಾಗೂ ಎಲ್ಲಾ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಪಾಲ್ಗೊಂಡಿದ್ದರು

ಸಂಸ್ಥೆಯಲ್ಲಿ ಸುಮಾರು 180 ಮಂದಿ ಮಕ್ಕಳು ಯಕ್ಷಗಾನ, ಭರತ ನಾಟ್ಯ, ಕನ್ನಡ ಕಲಿಕೆ ಕೇಂದ್ರ, ಫುಟ್ಬಾಲ್, ಭಜನೆ ತರಬೇತಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕಲಿಯುತ್ತಿದ್ದು ಇವರೆಲ್ಲರ ಕೂಡುವಿಕೆಯಲ್ಲಿ ಸ್ನೇಹ ಸಮ್ಮಿಲನ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಿತ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು, ಹಾಗೂ
ಶ್ರೀ ದೇವಿ ಯಕ್ಷಕಲಾ ನಿಲಯದ ಯಕ್ಷ ಗುರು ನಾಗೇಶ್ ಪೊಳಲಿ, ಕನ್ನಡ ಕಲಿಕೆ ಕೇಂದ್ರದ ಗುರುಗಳಾದ ಮಲ್ಲಿಕಾ ಆರ್ ಪೂಜಾರಿ, ಹಾಗೂ ವಿಜಯ ಸಾಲಿಯಾನ್ ,, ಫುಟ್ಬಾಲ್ ತರಬೇತಿಯನ್ನು ನೀಡುತ್ತಿರುವ ನಾಗೇಶ್ ಕೋಟ್ಯಾನ್ , ಭರತ ನಾಟ್ಯ ತರಬೇತಿಯನ್ನು ಸ್ಮಿತಾ ನಾಯರ್ . ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಕಿ ಲಕ್ಷ್ಮಿ ನಾಯರ್ , ಭಜನೆ ಕ್ಲಾಸ್ ನ ಶಿಕ್ಷಕಿ ಲೀಲಾವತಿ ಆಳ್ವ ಇವರೆಲ್ಲರನ್ನು ಈ ಸಂದರ್ಭದಲ್ಲಿ ಶಶಿಧರ ಶೆಟ್ಟಿ ಇನ್ನಂಜೆಯವರು ಗೌರವಿಸಿದರು.

ಹಾಗೂ ಬಂಟರ ಸಂಘ ಮುಂಬೈ ಆಯೋಜಿಸಿದ ಕ್ರೀಡಾಕೂಟದಲ್ಲಿ ವಿವಿಧ ರೀತಿಯ ಪ್ರಶಸ್ತಿ, ಬಹುಮಾನಗಳನ್ನು ಪಡೆದಿರುವ ಎಲ್ಲಾ ಬಂಟ ಬಂಧುಗಳನ್ನು ಬಂಟರ ಸಂಘದ ಪ್ರಾದೇಶಿಕ ಸಮಿತಿಯ ವತಿಯಿಂದ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಮತ್ತಿತರ ಪದಾಧಿಕಾರಿಗಳು ಗೌರವಿಸಿದರು.
ತುಳುಕೂಟದ ಸದಸ್ಯರು ನಗರದಲ್ಲಿ ನಡೆದ ವಿವಿಧ ನೃತ್ಯ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದಿದ್ದು ಅವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು,

ಗೌರವ , ಸನ್ಮಾನದ ಬಳಿಕ ಸಭೆಯನ್ನು ಉದ್ದೇಶಿಸಿ
ಮಾತನಾಡಿದ ತುಳುಕೂಟ ಫೌಂಡೇಶನ್ ನ ಅಧ್ಯಕ್ಷ ಶಶಿಧರ್ ಶೆಟ್ಟಿ ಅವರು ಮೂರು ಸಂಸ್ಥೆಗಳ ಸದಸ್ಯರು ಬಹಳ ಮುತವರ್ಜಿಯಿಂದ
ಸಂಸ್ಥೆಯ ಸೇವಾ ಕಾರ್ಯಗಳನ್ನು ಮಾಡುತ್ತಾರೆ, ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮ್ಮ ಸಂಸ್ಥೆಗೆ ಗೌರವ ಪ್ರಶಸ್ತಿಗಳನ್ನು ಪಡೆದುಕೊಂಡು ಬರುತ್ತಾರೆ,ಇದು ಅವರು ಸಂಸ್ಥೆ ಮೇಲೆ ಇಟ್ಟಿರುವ ಅಭಿಮಾನವಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಶ್ರಮ ಸಾಧನೆಗಳನ್ನು ಮಾಡಿ ಹೆತ್ತವರಿಗೆ ಮತ್ತು ಸಂಘ ಸಂಸ್ಥೆಗೆ ಕೀರ್ತಿಯನ್ನು ತನ್ನಿ ಎಂದು ಸದಸ್ಯರನ್ನು ಉದ್ದೇಶಿಸಿ ತಮ್ಮ ಮನದಾಳದ ಮಾತುಗಳ ನಾಡಿದರು,
ಬಂಟರ ಸಂಘದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಅವರು ಮಾತನಾಡಿ “ಈ ಪರಿಸರದ ತುಳು ಕನ್ನಡಿಗರು ಶ್ರಮಜೀವಿಗಳು ಒಗ್ಗಟ್ಟಿನಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಸಂಘ ಸಂಸ್ಥೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸೇವೆಗಳನ್ನು ಮಾಡುತ್ತಾರೆ,ಆದ್ದರಿಂದ ನಮ್ಮ ಈ ಪರಿಸರದ ಮೂರು ಸಂಸ್ಥೆಗೆ ಬಹಳ ಗೌರವವಾಗಿದೆ” ಎಂದು ನುಡಿದರು.

ಕಾರ್ಯಕ್ರಮವನ್ನು ಪ್ರವೀಣ್ ಶೆಟ್ಟಿ ಕಣಜಾರರು ನಿರೂಪಿಸಿದರು.

   

Related posts

ಮೊಗವೀರ  ವ್ಯವಸ್ಥಾಪಕ ಮಂಡಳಿಯಲ್ಲಿ  ” ಆಟಿಡ ಒಂಜಿ ಕೂಟ “

Mumbai News Desk

ತುಳು ಸಂಘ ಬೊರಿವಲಿ ; ವಾರ್ಷಿಕ ವಿಹಾರ ಕೂಟ

Mumbai News Desk

ಉಡುಪಿಯ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಸಮಯ ಪ್ರಜ್ಞೆ ಮೆರೆದ ಚಾಲಕ.

Mumbai News Desk

ಬೋರಿವಲಿ   :  ಮಹಿಷಾಮರ್ಧಿನಿ ದೇವಸ್ಥಾನದಲ್ಲಿ ಬಂಟರ ಸಂಘದ ಜೋಗೇಶ್ವರಿ – ದಹಿಸರ್  ಸಮಿತಿಯ ಮಹಿಳಾ ಸದಸ್ಯರಿಂದ  ಭಜನೆ ಸಂಕೀರ್ತನೆ.

Mumbai News Desk

ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ದಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಸಾಫಲ್ಯ ಸೇವಾ ಸಂಘದ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk