
, ಥಾಣೆ ಎ. 5: ಮುಂಬಯಿ, ಥಾಣೆ, ಹಾಗೂ ನವಿ ಮುಂಬೈಯಲ್ಲಿ ನೆಲೆಸಿರುವ ತುಳು – ಕನ್ನಡಿಗರ ಮಹಾ ಸಮಾವೇಶವು ಎ. 7 ರವಿವಾರದಂದು ಸಂಜೆ 5 ರಿಂದ ಥಾಣೆ ಪಶ್ಚಿಮ ವರ್ತಕ್ ನಗರದ ಪೋಕ್ರಾಣ್ ರೋಡ್, ನಂಬರ್-1ರ ಕ್ಯಾಡ್ ಬರಿ ಕಂಪೆನಿ ಎದುರಿನ ರೇಮಂಡ್ ಗಾರ್ಡನ್‌ನಲ್ಲಿ ನಡೆಯಲಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಪನ್ವೇಲ್ ಮಹಾನಗರ ಪಾಲಿ ಕೆಯ ಮಾಜಿ ಸಭಾಪತಿ, ಬಿಜೆಪಿ ನಾಯಕ, ಸಮಾಜ ಸೇವಕ, ಸಂಘಟಕ ಸಂತೋಷ್ ಜಿ. ಶೆಟ್ಟಿ ನೇತೃತ್ವದಲ್ಲಿ ಮುಂಬಯಿ , ಥಾಣೆ, ಹಾಗೂ ನವಿ ಮುಂಬೈಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ -ಚಿಕ್ಕಮಗಳೂರು ಹಾಗೂ ಕಾಸರ ಗೋಡು ಲೋಕಸಭಾ ಕ್ಷೇತ್ರದ ಬಂಧುಗಳನ್ನು ಒಂದುಗೂಡಿಸಿ ಮತ ದಾನದ ಬಗ್ಗೆ ಜಾಗೃತಿ ಮೂಡಿ ಸುವ ಉದ್ದೇಶದಿಂದ ಈ ಸಮಾವೇ ಶನ್ನು ಆಯೋಜಿಸಲಾಗಿದೆ. ಮೂರು ಲೋಕಸಭಾ ಕ್ಷೇತ್ರಗಳ ವಿವಿಧ ಸಮಸ್ಯೆ ಗಳಬಗ್ಗೆ ಸಮಾವೇಶದಲ್ಲಿ ಚರ್ಚಿ ಸಲಾಗುವುದು.
ಪನ್ವೇಲ್ ಮಹಾನಗರದ ನಗರಸೇವಕ ಸಂತೋಷ್ ಜಿ. ಶೆಟ್ಟಿಯವರ ಮುಂದಾಳುತ್ವದಲ್ಲಿ ಸಮಾನ ಮನಸ್ಕ ವ್ಯಕ್ತಿಗಳ ತಂಡವು ಈ ಬೃಹತ್ ಸಮಾವೇಶವನ್ನು ಆಯೋಜಿಸಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸಪೂಜಾರಿ, ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಎಲ್. ಅಶ್ವಿನಿ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟಯವರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ರಾಜ್ಯದ ಪಿ.ಡಬ್ಲು.ಡಿ ಮಂತ್ರಿ ರವೀಂದ್ರ ಚೌವಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ , ಮತ್ತು ಕರಾವಳಿಯ ಬಿಜೆಪಿಯ ಶಾಸಕರು ಮುಖ್ಯ ಅಭ್ಯಾಗತರಾಗಿ ಸಮಾವೇಶದಲ್ಲಿ ಆಗಮಿಸಲಿದ್ದಾರೆ. ಈಸಮಾವೇಶದಲ್ಲಿ ನಗರದ ವಿವಿಧ ಕನ್ನಡ, ತುಳು ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘ ಟಕರಾದ ಅಶೋಕ್ ಅಡ್ಯಂ ತಾಯ, ಸಂಜೀವ ಎನ್. ಶೆಟ್ಟಿ ,ಸುಕುಮಾರ್ ಎನ್. ಶೆಟ್ಟಿ ಸುಭಾಶ್ ಶೆಟ್ಟಿ ,ಸುದೀಪ್ ಶೆಟ್ಟಿ ಮೊದಲಾದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.