September 6, 2026
Mumbai News Kannada
ಪ್ರಕಟಣೆ

ಪನ್ವೇಲ್  ನಗರಸೇವಕ  ಸಂತೋಷ್ ಜಿ. ಶೆಟ್ಟಿಯವರ ಮುಂದಾಳುತ್ವದಲ್ಲಿ, ಎ. 7: ಥಾಣೆ ಯಲ್ಲಿ  ತುಳು – ಕನ್ನಡಿಗರ ಮಹಾ ಸಮಾವೇಶ





,  ಥಾಣೆ   ಎ. 5: ಮುಂಬಯಿ, ಥಾಣೆ, ಹಾಗೂ ನವಿ ಮುಂಬೈಯಲ್ಲಿ ನೆಲೆಸಿರುವ ತುಳು – ಕನ್ನಡಿಗರ ಮಹಾ ಸಮಾವೇಶವು ಎ. 7 ರವಿವಾರದಂದು  ಸಂಜೆ 5 ರಿಂದ ಥಾಣೆ ಪಶ್ಚಿಮ ವರ್ತಕ್ ನಗರದ ಪೋಕ್ರಾಣ್ ರೋಡ್, ನಂಬರ್-1ರ ಕ್ಯಾಡ್ ಬರಿ ಕಂಪೆನಿ ಎದುರಿನ ರೇಮಂಡ್ ಗಾರ್ಡನ್‌ನಲ್ಲಿ ನಡೆಯಲಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಪನ್ವೇಲ್ ಮಹಾನಗರ ಪಾಲಿ ಕೆಯ ಮಾಜಿ ಸಭಾಪತಿ, ಬಿಜೆಪಿ ನಾಯಕ, ಸಮಾಜ ಸೇವಕ, ಸಂಘಟಕ ಸಂತೋಷ್ ಜಿ. ಶೆಟ್ಟಿ ನೇತೃತ್ವದಲ್ಲಿ ಮುಂಬಯಿ , ಥಾಣೆ, ಹಾಗೂ ನವಿ ಮುಂಬೈಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ, ಉಡುಪಿ -ಚಿಕ್ಕಮಗಳೂರು ಹಾಗೂ ಕಾಸರ ಗೋಡು ಲೋಕಸಭಾ ಕ್ಷೇತ್ರದ ಬಂಧುಗಳನ್ನು ಒಂದುಗೂಡಿಸಿ ಮತ ದಾನದ ಬಗ್ಗೆ ಜಾಗೃತಿ ಮೂಡಿ ಸುವ ಉದ್ದೇಶದಿಂದ ಈ ಸಮಾವೇ ಶನ್ನು ಆಯೋಜಿಸಲಾಗಿದೆ. ಮೂರು ಲೋಕಸಭಾ ಕ್ಷೇತ್ರಗಳ ವಿವಿಧ ಸಮಸ್ಯೆ ಗಳಬಗ್ಗೆ ಸಮಾವೇಶದಲ್ಲಿ ಚರ್ಚಿ ಸಲಾಗುವುದು.

ಪನ್ವೇಲ್ ಮಹಾನಗರದ ನಗರಸೇವಕ  ಸಂತೋಷ್ ಜಿ. ಶೆಟ್ಟಿಯವರ ಮುಂದಾಳುತ್ವದಲ್ಲಿ ಸಮಾನ ಮನಸ್ಕ ವ್ಯಕ್ತಿಗಳ ತಂಡವು ಈ ಬೃಹತ್ ಸಮಾವೇಶವನ್ನು ಆಯೋಜಿಸಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ  ಶ್ರೀನಿವಾಸಪೂಜಾರಿ, ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಎಲ್. ಅಶ್ವಿನಿ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟಯವರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ರಾಜ್ಯದ ಪಿ.ಡಬ್ಲು.ಡಿ ಮಂತ್ರಿ  ರವೀಂದ್ರ ಚೌವಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ  ದೇವೇಂದ್ರ ಪಡ್ನವಿಸ್ , ಮತ್ತು ಕರಾವಳಿಯ ಬಿಜೆಪಿಯ ಶಾಸಕರು ಮುಖ್ಯ ಅಭ್ಯಾಗತರಾಗಿ ಸಮಾವೇಶದಲ್ಲಿ  ಆಗಮಿಸಲಿದ್ದಾರೆ. ಈಸಮಾವೇಶದಲ್ಲಿ ನಗರದ ವಿವಿಧ ಕನ್ನಡ, ತುಳು ಹಾಗೂ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ.

 ಸಮಾವೇಶದಲ್ಲಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘ ಟಕರಾದ ಅಶೋಕ್ ಅಡ್ಯಂ ತಾಯ, ಸಂಜೀವ ಎನ್. ಶೆಟ್ಟಿ ,ಸುಕುಮಾರ್ ಎನ್. ಶೆಟ್ಟಿ ಸುಭಾಶ್ ಶೆಟ್ಟಿ ,ಸುದೀಪ್ ಶೆಟ್ಟಿ ಮೊದಲಾದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Related posts

ವಿದ್ಯಾವಿಹಾರ್ ಗಾಂವ್‌ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನ : ಜೂನ್ 14ರಂದು ಶ್ರೀ ರಾಮ ಕಥಾ ಹೃದಯಂ ಸರಣಿ ತಾಳಮದ್ದಳೆ, ಸಮ್ಮಾನ.

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಫೆಬ್ರವರಿ 14 ರಂದು 19ನೇ ವರ್ಷದ ಶ್ರೀ ಶನೀಶ್ವರ ಮಹಾಪೂಜೆ

Mumbai News Desk

ಸಾಂತಾಕ್ರೂಸ್ :  ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಅ 3 ರಿಂದ 11 ವರೆಗೆ ನವರಾತ್ರಿ ಉತ್ಸವ.

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,

Mumbai News Desk

ಸೆ.14 ರಂದು ಕಲ್ವಾ ಸ್ಥಳೀಯ ಸಮಿತಿಯ ವತಿಯಿಂದ 171ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಸಮಾರಂಭ

Mumbai News Desk

ಆಗಸ್ಟ್ 30 ಗ್ ಬೊಂಬಾಯಿಡ್ ‘ತುಲುವೆರೆ ಕಲತೋಚ್ಚಯ’ – ತುಲು ಐಸಿರಿದ ಸಂಭ್ರಮ

Mumbai News Desk