
ಸಂಘಟನೆಯನ್ನು ಒಮ್ಮತದಿಂದ ಮುನ್ನಡೆಯೋಣ – ಯಶೋಧರ ವಿ. ಕೋಟ್ಯಾನ್.
ಚಿತ್ರ ವರದಿ ದಿನೇಶ್ ಕುಲಾಲ್ ,
ವಸಯಿ ಎ5. ಮಹಿಳಾ ವಿಭಾಗದವರು ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಯಶಸ್ವಿಯಾಗಿ ನಡೆದಿದೆ ಎನ್ನಲು ಕಿಕ್ಕಿರಿದು ಸೇರಿದ್ದ ಮಹಿಳೆಯರೆ ಸಾಕ್ಷಿ. ಸಮಾಜದ ಮಹಿಳೆಯರಿಗೆ ತಮ್ಮ ಪ್ರತಿಭೆ ತೊರ್ಪಡಿಸಲು ಮಹಿಳಾ ದಿನಾಚರಣೆ ಅವಕಾಶ ಕಲ್ಪಿಸಿದೆ. ನಮ್ಮ ಸಂಘದ ಮಹಿಳೆಯರು ಕ್ರಿಯಾಶೀಲರಾಗಿದ್ದು, ಸಂಘದ ಎಲ್ಲಾ ಕಾರ್ಯ-ಚಟುವಟಿಕೆಗಳು ಉತ್ತಮ ರೀತಿಯಲ್ಲಿ ಜರಗುವಲ್ಲಿ ಅತೀ ಮುತುವರ್ಜಿಯಿಂದ ದುಡಿಯುತ್ತಾರೆ.

ಯಾವುದೇ ಸಂಘಟನೆಗಳಲ್ಲಿ ಮಹಿಳೆಯರು ಸೇರಿ ಕೊಂಡಾಗ, ಅ ಸಂಸ್ಥೆ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ವಸಯಿ ತಾಲೂಕ ಮೊಗವೀರ ಸಂಘ ಸಮಾಜ ಬಾಂಧವರ ಹಿತ ದ್ರಷ್ಟಿಯಿಂದ ಮುನ್ನಡೆಯುತ್ತಿದ್ದು, ಎಲ್ಲರೂ ಇದೇ ರೀತಿ ಒಮ್ಮತದಿಂದ ಸಹಕಾರ ನೀಡಿ ಎಂದು ವಸಯಿ ತಾಲೂಕ ಮೊಗವೀರ ಸಂಘದ ಅಧ್ಯಕ್ಷ ಯಶೋಧರ ವಿ ಕೋಟ್ಯಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಾರ್ಚ್ 31ರಂದು ಸಂಜೆ ವಸಯಿ ಪಶ್ಚಿಮ ನ್ಯೂ ವರ್ಷ ಹೌಸಿಂಗ್ ಸೊಸೈಟಿಯ ಸಂಘದ ಕಛೇರಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡುತಿದ್ದರು.
ಗೌರವ ಅತಿಥಿ ಸಂಘಟಕಿ ಶೋಭಾ ವಿ ಬಂಗೇರ ಮಾತನಾಡುತ್ತಾ ” ವಾತ್ಸಲ್ಯ, ಮಮತೆ,ತ್ಯಾಗ, ಪ್ರೇಮ, ಧೈರ್ಯ ಕಠಿಣ ಪರಿಶ್ರಮ ಈ ವಿಶಿಷ್ಟ ಶಕ್ತಿಗಳ ಸಂಗಮವೇ ಮಹಿಳೆ, ಒಂದು ಹೊಸ ಜೀವವನ್ನು ಸೃಷ್ಟಿ ಮಾಡುವಂತ ಅಪಾರ ಶಕ್ತಿ ಇರುವ ಸ್ತ್ರಿ ಶಕ್ತಿಯ ಸಾಧನೆಯನ್ನು ಗುರುತಿಸಿ ಅದನ್ನು ಗೌರವಿಸುವ ದಿನವೇ ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ ದೇಶ ವಿದೇಶದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಪಡುತ್ತಿದೆ. ಇದು ಎಲ್ಲಾ ಮಹಿಳೆಯರಿಗೆ ಅತಿಹೆಮ್ಮೆ ವಿಷಯ. ನಮ್ಮ ದೇಶದಲ್ಲಿ ಮಹಿಳೆಯರು ಎಷ್ಟು ಅಡಚಣೆಯನ್ನು ಎದುರಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾಳೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಸಂಸ್ಕೃತಿಯ ಮಾರ್ಗದರ್ಶ ನೀಡಿದರೆ ಅವರು ಭವಿಷ್ಯದಲ್ಲಿ ನಮ್ಮ ದೇಶದ ಅಮೋಘ ಪರಂಪರೆಯನ್ನು ಮುಂದುವರಿಸುತ್ತಾರೆ. ಈ ಕೆಲಸ ತಾಯಂದಿರಿಂದ ಆಗಬೇಕು ಎಂದರು.
ಇನ್ನೊರ್ವ ಅತಿಥಿ, ಸಮಾಜ ಸೇವಕಿ ರೋಹಿಣಿ ಟಿ ಕೋಟ್ಯಾನ್ ತನ್ನ ಅಭಿಪ್ರಾಯ ತಿಳಿಸುತ್ತಾ ” ಸಂಘದ ಗೌರವ ಸ್ವೀಕರಿಸಿ ಸಂತಸವಾಯಿತು, ನನ್ನ ಅಭಿಪ್ರಾಯ ಪ್ರಕಾರ ವರ್ಷಕ್ಕೆ 365 ದಿನವೂ ಮಹಿಳಾ ದಿನಾಚರಣೆಯಾಗಿದೆ, ಏಕೆಂದರೆ ಮಹಿಳೆಯಿಂದಲೇ ಒಂದು ಸಂಸಾರ, ಸಮಾಜ ಸೂಸುತ್ರವಾಗಿ ನಡೆಯುತದೆ.

ಮಹಿಳೆ ಮಗಳಾಗಿ, ಅಕ್ಕ-ತಂಗಿಯಾಗಿ, ಸೊಸೆಯಾಗಿ ಎರಡೂ ಮನೆಯ ಕೀರ್ತಿಯನ್ನು ಬೆಳಗುತ್ತಾಳೆ. ಇದು ಪುರುಷರ ಸಹಕಾರದಿಂದ ಮಾತ್ರ ಸಾಧ್ಯ. ಇಂದಿನ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆದಿದೆ” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಸಯಿ-ವಿರಾರ್ ಮಹಾನಗರಪಾಲಿಕೆಯ ಮಾಜಿ ಮೇಯರ್, ಕನ್ನಡತಿ ರಾಜೇಶ್ವರಿ ನಾರಾಯಣ ಮಾತನಾಡುತ್ತಾ “ವಸಯಿ ಮೊಗವೀರ ಸಂಘದ ಕಾರ್ಯಕ್ರಮಕ್ಕೆ ನಾನು ಪ್ರತಿ ವರ್ಷ ಬರುತ್ತಿದ್ದೇನೆ. ಈ ಸಂಘದ ಮೇಲೆ ನನಗೆ ಅಪಾರ ಪ್ರೀತಿ ಇದೆ. ಯಾಕೆಂದರೆ ಈ ಸಂಘದಲ್ಲಿ ಭೇದ-ಭಾವ ಇಲ್ಲ. ಇದಕ್ಕೆ ಸಾಕ್ಷಿ ಇಂದಿನ ಕಾರ್ಯಕ್ರಮ. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾ, ನಮ್ಮನೆಲ್ಲ ತಲೆ ಎತ್ತಿ ನೋಡುವಂತೆ ಮಾಡಿದ್ದಾಳೆ. ನಮ್ಮ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ 6 ಬಾರಿ ಬಜೆಟ್ ಮಂಡಿಸಿದ್ದು, ಅವರು ನಿಜಕ್ಕೂ ಮಹಾನ್, ಇಂತಹ ಮಹಿಳೆಯರ ಸಾಧನೆ ನಮಗೆಲ್ಲಾ ಹೆಮ್ಮೆಯ ವಿಷಯ. ಮಹಿಳೆಯರು ಯಾವುದೆ ಕಾರ್ಯವನ್ನು ಮಾಡಲು ಹಿಂಜರಿಯಬಾರದು. ಧೈರ್ಯದಿಂದ ಮುಂದುವರಿಯಬೇಕು. ವರ್ಷದ ಒಂದು ದಿನವಾದರೂ ಮಹಿಳಾ ದಿನಾಚರಣೆಯ ಮೂಲಕ ಮಹಿಳೆಯರು ಒಟ್ಟಾಗಿ ಸಂಭ್ರಮಿಸಬೇಕು” ಎಂದು ನುಡಿದರು.
ಈ ಸಂದರ್ಭದಲ್ಲಿ ಸಂಘದಲ್ಲಿ ಸುಧೀರ್ಗ ಅವಧಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಸದಸ್ಯೆ ತಾರವತಿ ಎಸ್ ಪುತ್ರನ್ ಅವರನ್ನು ಸನ್ಮಾನಿಸಲಾಯಿತು.
ಗೌರವ ಕಾರ್ಯದರ್ಶಿ ಶೇಖರ್ ಟಿ ಕರ್ಕೇರ, ಗೌರವ ಕೋಶಧಿಕಾರಿ ವಿಶ್ವಾನಾಥ್ ಬಂಗೇರ, ಟ್ರಷ್ಟಿ ರೋಷನ್ ಸುವರ್ಣ, ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರತೀಕ್ ಶ್ರೀಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶೋಧ ವಿ ಬಂಗೇರ ವಿಶ್ವ ಮಹಿಳಾ ದಿನಾಚರಣೆಯ ಬಗ್ಗೆ ವಿವರಣೆ ನೀಡಿದರು.
ಮಹಿಳಾ ವಿಭಾಗದ ಸಲಹೆಗಾರ್ತಿ ಮೋಹಿನಿ ಮಲ್ಪೆ ಸಭಾ ಕಾರ್ಯಕ್ರಮ ನಿರೂಪಿಸಿದರೆ, ಪಲ್ಲವಿ ವಿಶ್ವನಾಥ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಚಂದ್ರ ಕರ್ಕೇರ ವಂದಿಸಿದರು.
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪ್ರೇಮ ನಾಯ್ಕ ಸ್ವಾಗತಿಸಿದರು.
ಸದಸ್ಯರ ಭಜನಾ ಕಾರ್ಯಕ್ರಮದೊಂದಿಗೆ ಒಟ್ಟು ಕಾರ್ಯಕ್ರಮ ಆರಂಭವಾಯಿತು.
ಮಹಿಳೆಯರು, ಮಕ್ಕಳು ನ್ರತ್ಯ, ಕಿರು ಪ್ರಹಸನದ ಮೂಲಕ ಎಲ್ಲರನ್ನೂ ರಂಜಿಸಿದರು.
ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಉಪಸ್ಥಿತರಿದ್ದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವರನ್ನು ಸತ್ಕರಿಸಲಾಯಿತು.
ಪ್ರಾರಂಭದಲ್ಲಿ ಮಾಲತಿ ಮೊಗವೀರ, ಪೂರ್ಣಿಮಾ ಕಾಂಚನ್ ಪ್ರಾಥಿಸಿದರು.
ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಪಲ್ಲವಿ ಪುತ್ರನ್, ಸಲಹೆಗಾರ ಮೋಹನ್ ಜಿ ಪುತ್ರನ್, ಹಾಗೂ ಮಹಿಳಾ ವಿಭಾಗದ ಯಶೋದಾ ಬಂಗೇರ, ಪೂರ್ಣಿಮಾ ಕಾಂಚನ್, ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ನಾಯ್ಗoವ್,ವಸಯಿ, ನಲ್ಲಸೋಪಾರ, ವಿರಾರ್ ಪರಿಸರದ ಮೊಗವೀರ ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ, ವಸಯಿ ತಾಲೂಕ ಮೊಗವೀರ ಸಂಘ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.