
ಅಂಧೇರಿ ಪಶ್ಚಿಮ ದಲ್ಲಿರುವ ಶ್ರೀ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ಮಂದಿರದ 22ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಮಾ29 ಶುಕ್ರವಾರದಂದು. ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂದಿರದ ಪ್ರಧಾನ ಅರ್ಚಕರಾದ ಗುರುಪ್ರಸಾದ್ ಭಟ್ ಅವರ ಮಾರ್ಗದರ್ಶನ ದಲ್ಲಿ ವಿಜ್ರಂಭಣೆಯಿಂದ ಜರಗಿತು.
ಬೆಳಿಗ್ಗೆ ಪರಂಪರೆಯ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾ ಹ ವಾಚನ, ಪ್ರಧಾನ ಹೋಮ, ನವ ಕಲಶ ಪೂಜೆ, ಪರಿವಾರ ಸಹಿತ ಶ್ರೀ ಲಕ್ಷ್ಮಿನಾರಾಯಣ ದೇವರಿಗೆ ಪಂಚಾಮೃತ ಮತ್ತು ಕಲಶಭಿಷೇಕ, ಮಹಾಪೂಜೆ ಯು ವಿಧಿವತ್ತಾಗಿ ನಡೆಯಿತು. ಪ್ರತಿಷ್ಠೆ ಮಹೋತ್ಸವದ ನಿಮಿತ್ತ ವಿಶೇಷವಾಗಿ ಊರಿನಿಂದ ಆಮಂತ್ರಿತ ದರ್ಶನ ಪಾತ್ರಿ ಯವರಿಂದ ದೇವರ ಬಲಿ ಮೂರ್ತಿಯ ಉತ್ಸವ ಬಲಿಯು ಆಕರ್ಷಣಗೊಂಡಿತು.,

ಬೆಳಿಗ್ಗೆ 10 ರಿಂದ 11ರ ತನಕ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಮತ್ತು ಮಹಿಷಮರ್ದಿನಿ ಭಜನಾ ಮಂಡಳಿ, ಬೊರಿವಲಿ, ನೆರೂಲ್ ಶನಿ ಮಹಾತ್ಮಾ ಭಜನಾ ಮಂಡಳಿ ಇವರಿಂದ ಕುಣಿತ ಭಜನೆ ನಡೆಯಿತು.12ರಿಂದ 3 ರ ವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ, 2ರಿಂದ 5.30ರ ತನಕ ಶ್ರೀಮತಿ ಪುಷ್ಪ ಜಿ. ಬಂಗೇರ ಅವರು’ಶ್ರೀ ಕೃಷ್ಣ ಬಾಲ ಲೀಲೆ ‘ ಹರಿಕಥೆ ಸುಶ್ರಾವ್ಯ ವಾಗಿ ಸಾದರ ಪಡಿಸಿದರು. ಅವರನ್ನು ಶ್ರೀಮತಿ ವಸಂತಿ ಜಗನ್ನಾಥ ಪುತ್ರನ್ ಶಾಲು, ಫಲ ಪುಷ್ಪ ನೀಡಿ ಸನ್ಮಾನ ಮಾಡಿದರು.. ಬಳಿಕ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಬೋರಿವಲಿ, ಶ್ರೀ ಮಧ್ಭಾರತ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ 6.30ಕ್ಕೆ ಮಂಟಪ ರಂಗ ಪೂಜೆಯು ದೇವರ ಸನ್ನಿಧಿಯಲ್ಲಿ ನಡೆಯಿತು. ಬೆಳಿಗ್ಗೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಅತಿಥಿ ಚಂದ್ರ ಶೇಖರ್ ಸಾಲ್ಯಾನ್ ಮತ್ತು ಡಾ. ಜಯಶ್ರೀ ಸಾಲ್ಯಾನ್ ಹಾಗೂ ಅಧ್ಯಕ್ಷ ರಾದ ಜಗನ್ನಾಥ ಪುತ್ರನ್, ಕಾರ್ಯದರ್ಶಿ ಲೋಕನಾಥ್ ಕಾಂಚನ್, ಉಪಾಧ್ಯಕ್ಷರಾದ ಗೋವಿಂದ ಪುತ್ರನ್ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಚಂದ್ರ ಶೇಖರ್ ಸಾಲ್ಯಾನ್ ಅವರು ರಚನೆ ಮಾಡಿದ್ದ ಶ್ರೀ ಮದ್ಭಾರತ ಮಂಡಳಿಯು ನಡೆದು ಬಂದ ದಾರಿಯ ಸಾಕ್ಷ್ಯ ಚಿತ್ರವನ್ನು ಪರದೆ ಯಲ್ಲಿ ಪ್ರದರ್ಶನ ಮಾಡಲಾಯಿತು. ಚಂದ್ರ ಶೇಖರ್ ಅವರನ್ನು ಡಾ ಜಯಶ್ರೀ ಸಹಿತ ಮಂಡಳಿಯು ಶಾಲು ಹಾಗೂ ಹೂ ಗುಚ್ಛ ದಿಂದ ಸನ್ಮಾನ ಮಾಡಿತು.

ಡಾ. ಗೋಪಾಲ್ ಕಲಕೋಟಿ ಮತ್ತು ಶ್ರೀ ಮದ್ಭಾರತ ಮಂಡಳಿಯ ಮಹಿಳಾ ಬಳಗ ದಿಂದ ಪ್ರಯೋಜಿತ ಅನ್ನಸಂತರ್ಪಣೆ ಜರಗಿತು.ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಕೋಶಾಧಿಕಾರಿ ಕೇಶವ ಪುತ್ರನ್ ಮತ್ತು ಶ್ಯಾಮ್ ಪುತ್ರನ್ ಮಾಡಿದರು.
ಕಾರ್ಯಕರ್ತರಾದ ಅಶೋಕ್ ಎನ್. ಸುವರ್ಣ, ಜಗನ್ನಾಥ ಕಾಂಚನ್, ಎಚ್. ಮಹಾಬಲ್, ದೇವದಾಸ್ ಎಲ್. ಅಮೀನ್, ಮೋಹನ್ ಅಮೀನ್, ಮೋಹನದಾಸ ಮೆಂಡನ್, ರಮೇಶ್ ಅಮೀನ್, ಪುರಂದರ ಅಮೀನ್, ವಾಸು ಉಪ್ಪುರ್, ಹರೀಶ್ ಪುತ್ರನ್, ಸುರೇಶ್ ಕುಂದರ್, ಪೂಜಾ ಸಮಿತಿಯ ಸಂಜೀವ ಚಂದನ್, ರತ್ನಾಕರ್ ಬಂಗೇರ, ಮಹಿಳಾ ಬಳಗದ ಸದಸ್ಯರು ಉಪಸ್ಥಿತರಿದ್ದರು.