
ಮುಂಬಯಿ : ಸಾಮಾಜಿಕ ಸಂಘಟನೆ ಕರುನಾಡ ಸಿರಿ ಯ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಏಪ್ರಿಲ್ 14 ರಂದು ಸಾಂತಕ್ರೂಜ್ ಪಶ್ಚಿಮದ ಮಿಲನ್ ಸಾಬ್ಬವೆ (Subway )ಬಳಿಯ ಲಯನ್ಸ್ ಕ್ಲಬ್ ಮೈದಾನದಲ್ಲಿ ಬೆಳ್ಳಿಗೆ 9 ಗಂಟೆಗೆ ಜರಗಲಿದೆ.
ಕ್ರೀಡಾಕೂಟದಲ್ಲಿ ಪುರುಷರಿಗೆ, ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟ, ಒನ್ ಮಿನಿಟ್ ಗೇಮ್, ಟೀಮ್ ಬಿಲ್ಡಿಂಗ್ ಗೇಮ್, ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್ ಇತ್ಯಾದಿ ಪಂದ್ಯಗಳು ನಡೆಯಲಿದೆ.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ಚಂದ್ರಶೇಖರ್ ರಾವ್ ಮೆಮೊರಿಯಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀದೇವಿ ಸಿ. ರಾವ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ನೇರುಲ್ ನ ಹರೀಶ್ ಆಸ್ಪತ್ರೆಯ ಡಾ. ಹರೀಶ್ ಬಿ ಸಾಲ್ಯಾನ್, ಗೌರವ ಅತಿಥಿಗಳಾಗಿ ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂಧನ ಟಿ. ಆರ್, ಸಮಾಜ ಸೇವಕ ಅನಿಲ್ ಬಿ. ಬುಡ್ಡಬಸ್ಸಯ್ಯನೂರ್, ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಜಿತೇಂದ್ರ ಗೌಡ, ಕನ್ನಡ ಸಂಘ ಸಾಯನ್ ನ ಉಪಾಧ್ಯಕ್ಷ ಸದಾಶಿವ ಶೆಟ್ಟಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಸಾ ದಯಾ, ಪೂರ್ಣಪ್ರಜ್ಞ ಶಾಲಾ ಕಾರ್ಯದರ್ಶಿ ಎನ್. ಆರ್ ರಾವ್ ಉಪಸ್ಥಿತರಿರುವರು.
ಕ್ರೀಡಾಕೂಟದಲ್ಲಿ ತುಳು-ಕನ್ನಡಿಗರು ಪಾಲ್ಗೊಂಡು ಯಶಸ್ಸುಗೊಳಿಸುವಂತೆ ಕರುನಾಡ ಸಿರಿ ಸಂಸ್ಥೆಯ ಅಧ್ಯಕ್ಷ ಬಾಲಚಂದ್ರ ದೇವಾಡಿಗ, ಉಪಾಧ್ಯಕ್ಷ ಅನಿಲ್ ಗೌಡ, ಕಾರ್ಯದರ್ಶಿ ಅರುಣ್ ದೋನೆ, ಕೋಶಧಿಕಾರಿ ಯೋಗೇಶ್ ಸುಪೇಕರ್, ಜತೆ ಕೋಶಧಿಕಾರಿ ವಿಶ್ವನಾಥ ದೇವಾಡಿಗ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ತ ಭೀಮರಾಯ ಚಿಲ್ಕ, ಜತೆ ಕಾರ್ಯದರ್ಶಿ ಮಂಗೇಶ್ ಹಾಗೂ ಮಹಿಳಾ ವಿಭಾಗದ ಲಲಿತ ದೀಪಕ್ ಗೌಡ,ಪ್ರಿಯಾಂಕ ಶೆಟ್ಟಿ, ಭಾರತಿ ಶೆಣೈ, ಶಾಮ್ಯ ಪೂಜಾರಿ, ಯೋಗಿತ ಗೌಡ, ದೇವಕಿ ಬಸವರಾಜ್ ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ : 9004883276, 99304 28606, 9318490234 ಮತ್ತು 9167058204 ನ್ನು ಸಂಪರ್ಕಿಸಬಹುದು.