July 23, 2026
Mumbai News Kannada
ಪ್ರಕಟಣೆ

ಎ. 7 ರಂದು ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಂಭ್ರಮ, ಸ್ಮರಣ ಸಂಚಿಕೆ ಬಿಡುಗಡೆ, ನೃತ್ಯ ಸ್ಪರ್ಧೆ







ಮುಂಬಯಿ : ಮುಂಬಯಿ : ಮಲಾಡ್ ಪರಿಸರದಲ್ಲಿ ನೆಲೆಸಿರುವ ತುಳು ಕನ್ನಡಿಗರು 50 ವರುಷಗಳ ಹಿಂದೆ ಮಲಾಡ್ ಪೂರ್ವ ಲಕ್ಷ್ಮಣ ನಗರ ಕುರಾರ್ ವಿಲೇಜ್ ನಲ್ಲಿ ಸ್ಥಾಪಿಸಿದ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರಂಭವು ಎ. 7 ರಂದು (ರವಿವಾರ) ಭಾರತ ರತ್ನ ಲತಾ ಮಂಗೇಶ್ಕರ್ ನಾಟ್ಯಾಗೃಹ ಸಭಾಗೃಹ, ಒಂದನೇ ಮಾಳಿಗೆ , ಮಹಾಜನ್ ವಾಡಿ, ಮೀರಾರೋಡ್ ಪೂರ್ವ ಇಲ್ಲಿ ಬೆಳಿಗ್ಗೆ 9ರಿಂದ ಸಂಜೆ 8 ರ ತನಕ ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಶ್ರೀ ಶನೀಶ್ವರ ಕ್ಷೇತ್ರ ಮಲಾಡ್ ಇದರ ಪುರೋಹಿತರಾದ ವೇದಮೂರ್ತಿ ರಾಘವೇಂದ್ರ ತುಂಗಾ ಭಟ್ ಇವರು ಆಶೀರ್ವಚನ ಮಾಡಲಿರುವರು. ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ,  ಬಿಲ್ಲವರ ಅಸೋಷಿಯೇಶನಿನ  ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಉಪಸ್ಥಿತರಿರುವತು.

    ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ  ಮಹೇಶ್ ಶೆಟ್ಟಿ, ಕಚ್ಚೂರು ನಾಗೇಶ್ವರ ಟೆಂಪಲ್ ಇದರ ಟ್ರಸ್ಟಿ ಕಡಂದಲೆ  ಸುರೇಶ್ ಭಂಡಾರಿ,  ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ.ಅರ್.ಕೆ ಶೆಟ್ಟಿ,ಶಿವಸಾಗರ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಎನ್‌.ಟಿ. ಪೂಜಾರಿ,  ಬಂಟರ ಸಂಘ ಹುಬ್ಬಳ್ಳಿ- ಧಾರವಾಡ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ,  ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ​​ಮಹಾರಾಷ್ಟ್ರ ಇದರ

ಉಪಾಧ್ಯಕ್ಷರಾದ ಶ್ಯಾಂಮ್ ಎನ್ ಶೆಟ್ಟಿ, ಅಂತರಾಷ್ಟ್ರೀಯ  ಖ್ಯಾತಿ ಜ್ಯೋತಿಷ್ಯರಾದ ಡಾ. ಎಂ. ಜೆ. ಪ್ರವೀಣ್ ಭಟ್ ಆಗಮಿಸಲಿರುವರು.

ಈ ಸಂದರ್ಭದಲ್ಲಿ ದಿವ್ಯಸಾಗರ್ ಗ್ರೂಪ್ ಆಫ್ ಹೋಟೆಲ್ ನಿರ್ದೇಶಕ ಹಾಗೂ ಸಮಾಜಸೇವಕ ಮುದ್ರಾಡಿ ದಿವಾಕರ್ ಎನ್ ಶೆಟ್ಟಿ ಮತ್ತು ಶ್ರೀಮತಿ ಮೀರಾ ದಿವಾಕರ್ ಶೆಟ್ಟಿ,  ರೌನಕ್ ಕಿಚನ್ ಎಕ್ವಿಪ್ಮೆಂಟ್ಸ್ ಪ್ರೈ. ಲಿಮಿಟೆಡ್ ನ ನಿರ್ದೇಶಕರಾದ ಶಂಕರ್ ಎಂ. ಶೆಟ್ಟಿ ಮತ್ತು ಶೋಭಾ ಶಂಕರ್ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು.  ಶನಿ ಮಹಾತ್ಮ ಪೂಜಾ ಸಮಿತಿಯ ಹಿರಿಯ ಸದಸ್ಯರುಗಳು ಹಾಗೂ ಮಾಜಿ ಅಧ್ಯಕ್ಷರುಗಳನ್ನು ಗೌರವಿಸಲಾಗುವುದು. 

ದೇವಸ್ಥಾನದ ಹಿತೈಷಿಗಳಾಗಿ ರಾಜು ಬಾಯಿ,  ಸತೀಶ್ ಶೆಟ್ಟಿ, ರಮೇಶ್ ಟೆಟ್ಟಿ , ರಾಜೇಶ್ ಪಾಲ್, ನರೇಶ್ ಬಾಯಿ,  ನಾಗೇಶ್ ಪೊಳಲಿ,  ಅಜಿತ್ ಕರ್ಖಾನೆಸ್,  ಕೆ ಪಿ ರವೀಂದ್ರನ್, ಎಡ್ವಿನ್ ಜೆ ಫೆರ್ನಾಂಡೀಸ್,  ಪಿ ಲಕ್ಷ್ಮಿ ನಾರಾಯಣ ಹೆಬ್ಬಾರ್,  ನಿತ್ಯಪ್ರಕಾಶ್ ಶೆಟ್ಟಿ,  ರಾಜೀವ್ ಕೆ ತುಂಗರೆ, ಹಾಗು ಕೆಲವು ಕಾರ್ಯಕ್ರಮಗಳ  ಪ್ರಾಯೋಜಕರಾಗಿ ಸಹಕರಿಸಿದ ಸುರೇಶ್ ಶೆಟ್ಟಿ , ಸಂತೋಷ್ ಪೂಜಾರಿ, ಶೇಖರ್ ಸಸಿಹಿತ್ತ್ಲು, ವಿಶ್ವನಾಥ್ ಶೆಟ್ಟಿ ಪೇತ್ರಿ,  ಪ್ರಭಾಕರ್ ಶೆಟ್ಟಿ,  ರಮೇಶ್ ಆಚಾರ್ಯ,  ಶನಿ ಮಹಾತ್ಮ ಪೂಜಾ ಸಮಿತಿಯ ಮಹಿಳಾ ವಿಭಾಗ ಸಹಕರಿಸುತ್ತಿರುವರು.

ಮನೋರಂಜನೆಯ ಅಂಗವಾಗಿ ವಿವಿಧ ವಿನೋದಾವಳಿಗಳು, ಜನಪದ ನೃತ್ಯ, ಪುಣ್ಯಕೋಟಿ ನೃತ್ಯ ರೂಪಕ, ಮಹಿಳಾ ಸದಸ್ಯರಿಂದ ಯಕ್ಷಗಾನ ಪ್ರದರ್ಶನ, “ಸುದರ್ಶನ ಗರ್ವಭಂಗ”  ಶ್ರೀ ನಾಗೇಶ್ ಕೊಳಲಿ ಅವರ ನಿರ್ದೇಶನದಲ್ಲಿ, ನೃತ್ಯ ಸ್ಪರ್ಧೆ ಐಲೇಶಾ ಬೆಂಗಳೂರು (ಬಾವ ಭಕ್ತಿ ಮತ್ತು ಸಂಗೀತ ರಸ ಮಂಜರಿ) ಹಾಗೂ ಇತರ ಕಾರ್ಯಕ್ರಮಗಳು  ದಿನ ಪೂರ್ತಿ ನಡೆಯಲಿದ್ದು ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಶ್ರೀನಿವಾಸ ಪಿ. ಸಾಪಲ್ಯ , ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಗೌ. ಕೋಶಾಧಿಕಾರಿ ಹರೀಶ್ ಜೆ. ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ  ಶೀತಲ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಪರವಾಗಿ ಗೌ. ಅಧ್ಯಕ್ಷರಾದ  ಪ್ರೇಮನಾಥ್ ಸಾಲ್ಯಾನ್,  ಉಪ ಕಾರ್ಯಾಧ್ಯಕ್ಷರುಗಳಾದ ನ್ಯಾ.  ಜೆ.ಎನ್. ಶೆಟ್ಟಿ , ಸಂತೋಷ್ ಪೂಜಾರಿ, ಮತ್ತು ರಮೇಶ್ ರಾವ್, ಸಾಂಸ್ಕೃತಿಕ  ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ,,  ಕಾರ್ಯಕಾರಿ ಸಮಿತಿ ಯ ಎಲ್ಲಾ ಸದಸ್ಯರುಗಳು,  ಮಹಿಳಾ ವಿಭಾಗ, ಯುವ ವಿಭಾಗ, ನಿಧಿ ಸಂಗ್ರ ಸಮಿತಿ, ಸ್ಮರಣ ಸಂಚಿಕೆ ಸಮಿತಿ ಯ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.



Related posts

ಅ.21, ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 55ನೇ ವಾರ್ಷಿಕ ಮಹಾಪೂಜೆ.

Mumbai News Desk

ಮಾ. 23,  ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ನಾಟಕ ಪ್ರದರ್ಶನ

Mumbai News Desk

ಜ.24 ; ಬಂಟ್ಸ್ ಫೋರಮ್ ಸದಸ್ಯರಿಂದ ‘ಪನರೆ ಪೋವೊಡ್ಚಿ’ ಮತ್ತು ‘ಸಂಸಾರದ SOME ಸಾರ’ ತುಳು ನಾಟಕ ಪ್ರದರ್ಶನ.

Mumbai News Desk

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ನಾಳೆ (ಮಾ.1) ಪನ್ವೇಲ್‌ನಲ್ಲಿ ‘ಕುಲಾಲ ಕ್ರೀಡೋತ್ಸವ – 2026’

Mumbai News Desk

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ ಜನವರಿ 22 ರಾಮನಾಮ ತಾರಕಮ್

Mumbai News Desk