
ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾದ ಯೋಗೇಶ್ ಕೆ. ಹೆಜ್ಮಾಡಿ ಹಾಗೂ ಅವರ ಧರ್ಮಪತ್ನಿಯವರಾದ ಲೀಲಾವತಿ ವೈ. ಹೆಜ್ಮಾಡಿ* ಯವರು ದಾಂಪತ್ಯ ಜೀವನದ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆ ಮಾಡಿದ ಸಂಧರ್ಭದಲ್ಲಿ ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಸಮಿತಿಯಲ್ಲಿ ಗೌರವ ಸನ್ಮಾನವನ್ನು ತಾ 6/04/2024 ಶನಿವಾರ ದಿವಸದಂದು ಬಹಳ ವಿಜೃಂಭಣೆಯಿಂದ ಜರಗಿತು




ಪ್ರಥಮತಃ ವಾಗಿ ಯೋಗೇಶ್ ಹೆಜ್ಮಾಡಿ ದಂಪತಿಗಳ ಪರವಾಗಿ ಶ್ರೀ ಶನಿದೇವರ ಪೂಜೆ
ತದನಂತರ ಸಮಿತಿಯ ಗೌರವ ಕೋಶಾಧಿಕಾರಿ ನಾಗೇಶ್ ಸುವರ್ಣ ಎಲ್ಲರನ್ನೂ ಸ್ವಾಗತಿಸಿದರು. ನಂತರ ಸಮಿತಿಯ ಉಪಾಧ್ಯಕ್ಷ ಭೋಜ ಸಿ ಪೂಜಾರಿ ಯೋಗೇಶ್ ಹೆಜಮಾಡಿವರು 57ವರ್ಷಗಳಿಂದ ಸಮಿತಿಯಲ್ಲಿ ಮಾಡಿದಂತ ಕಾರ್ಯಕಲಾಪ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಮಾಡಿದ ಸೇವೆಯನ್ನು ಎಲ್ಲರಮುಂದಿಟ್ಟರು. ಸಮಿತಿಯ ಪದಾಧಿಕಾರಿಯವರಾದ ಗೌರವ ಅಧ್ಯಕ್ಷ ಶ್ರೀಧರ್ ಜೆ ಪೂಜಾರಿ, ಉಪಾಧ್ಯಕ್ಷ ದೇವೇಂದ್ರ ಬಂಗೇರ, ಕಾರ್ಯದರ್ಶಿ ರಮೇಶ್ ಪೂಜಾರಿ, ಮಹಿಳಾ ಮಂಡಳಿಯ ಪಧಾಧಿಕಾರಿ ಸರಸ್ವತಿ ಪೂಜಾರಿ, ಶೋಭಾ ಕೋಟ್ಯಾನ್, ಕಾರ್ಯಕರ್ತರು , ಬಿಲ್ಲವರ ಅಸೋಸಿಯೇಶನ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಕರ್ತರು, ಭಾರತ್ ಬ್ಯಾಂಕ್ ನ ನಿರ್ದೇಶಕರಾದ ಗಂಗಾಧರ್ ಜೆ ಪೂಜಾರಿ, ಹೆಜಮಾಡಿ ಸತ್ಯನಾರಾಯಣ ಮುಂಬಯಿ ಕಮೀಟಯ ಕಾರ್ಯದರ್ಶಿ ಕೇಶವ ಕೋಟ್ಯಾನ್, ಕೋಶಾಧಿಕಾರಿ ತಾರಾನಾಥ್ ಅಮೀನ್, ತಿಲಕ್ ರಾಜ್ ಸುವರ್ಣ, ರೋಹಿತ್ ಬಂಗೇರ, ನವೀನ್ ಪೂಜಾರಿ, ಬಿಜೆಪಿಯ ಪದಾಧಿಕಾರಿಯವರಾದ ಪ್ರಭಾಕರ್ ಶೆಟ್ಟಿ , ಜಿಗದೀಶ್ ಶೆಟ್ಟಿ, ರಾವ್, ಪ್ರಕಾಶ್ ಮೂಡಬಿದ್ರಿ, ಭಾಸ್ಕರ್ ಕರ್ನಿರೆ ಫಲಪುಷ್ಪ, ಸ್ಮರಣಿಕೆ ನೀಡಿ , ಸಾಲು ಹೊದಿಸಿ ಗೌರವದಿಂದ ಅಭಿನಂದಿಸಿದರು ಅಂದಿನ ಕಾರ್ಯಕ್ರಮದಲ್ಲಿ ರವೀಂದ್ರ ಕೋಟ್ಯಾನ್,(ಅರ್ಚಕ) ವಾಮನ್ ಸಾಲಿಯಾನ್,

ಜಯರಾಮ ಶೆಟ್ಟಿ (ಕಾರ್ಯಧ್ಯಕ್ಷ ) ಹರೀಶ್ ಕೋಟ್ಯಾನ್, ಜನಾರ್ದನ ಸಾಲಿಯಾನ್, ವಿನೋದ್ ಹೆಜಮಾಡಿ ಜೊತೆ ಕೋಶಾಧಿಕಾರಿ ಶೋಭಾ ಪೂಜಾರಿ, ಗೀತಾ ದೇವಾಡಿಗ, ವಿಮಲಾ ಕೋಟ್ಯಾನ್, ಮೋಹಿನಿ ಸಾಲಿಯಾನ್ ಉಷಾ ಜತ್ತನ್, ಶುರೇಖ ಕೋಟ್ಯಾನ್, ಸುಲೋಚನಾ ಬಂಗೇರ,ಶಾರದ ಸಾಲಿಯಾನ್, ರಜನಿ ಕೋಟ್ಯಾನ್, ನಲಿನಾಕ್ಸಿ ಕೋಟ್ಯಾನ್, ರೇವತಿ ಶೆಟ್ಟಿ , ಶೋಭಾ ಸಾಲಿಯಾನ್, ಹರಿಶ್ಚಂದ್ರ ಶೆಟ್ಟಿ, ಮೋಹಿನಿ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು, ತದನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಜರಗಿತು. ತದನಂತರ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಪೂಜಾರಿ ಯವರು ಧನ್ಯವಾದ ಅರ್ಪಿಸಿದರು ಹಾಗು ತಾ.07.04.2024 ರಂದು ಯೋಗೇಶ್ ಹೆಜ್ಮಾಡಿ ದಂಪತಿಗಳು ತಮ್ಮ ಪರಿವಾರದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.