
ಮೂಡಬಿದ್ರಿ,ಎ.13. ಕರ್ನಾಟಕ ರಾಜ್ಯದ 2023-2024 ನೇ ಸಾಲಿನ ದ್ವಿತೀಯ ಪಿಯುಸಿ (ವಾಣಿಜ್ಯ) ಪರೀಕ್ಷೆಯಲ್ಲಿ ಮೂಡಬಿದ್ರಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಆರ್ ಶೆಟ್ಟಿಗೆ ಶೇ.95.15 ಅಂಕ ಲಭಿಸಿದೆ. ಈಕೆ ಸಾಯಿಬಾಬಾ ಪೂಜಾ ಸಮಿತಿ ಕಾಲಾಘೋಡಾ ಇದರ ಜೊತೆ ಕಾರ್ಯದರ್ಶಿ ಮಿಜಾರ್ ಕಂಗನಲ್ಕೆ ಹೌಸ್ ರಮೇಶ್ ಬಿ ಶೆಟ್ಟಿ ಮತ್ತು ಮುನಿಯಾಲ್ ಮಥಿಬೆಟ್ಟು ನಡೊಡಿ ಹೌಸ್ ಸುಮನ ಆರ್ ಶೆಟ್ಟಿ ದಂಪತಿಯ ಪುತ್ರಿ.