April 2, 2025
ಪ್ರಕಟಣೆ

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ

ಮುಂಬೈ : 15.04.2024
   ಮುಂಬೈ ಸಾರಸ್ವತರ ಅತೀ ಹಿರಿಯ ಸಂಸ್ಥೆಯಾದ ರಾಜಾಪುರ ಸಾರಸ್ವತ ಸಂಘ (ರಿ) ವು ತನ್ನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಬುಧವಾರ ತಾ.17 ನೆಯ ಎಪ್ರಿಲ್ 2024 ರಂದು ತನ್ನ 75 ನೆಯ ವರ್ಷಾಚರಣೆಯು ಚಾಲನೆಗೊಳ್ಳಲಿದೆ.
  ಪ್ರಾತಃಕಾಲ 7 ಗಂಟೆಗೆ  ಪರೇಲ್ ನ ಸ್ವಂತ  ಕಟ್ಟಡದಲ್ಲಿ ಶ್ರೀ ಗಣಪತಿ ಹೋಮ ಆನಂತರ 10.30 ಕ್ಕೆ ಸಯಾನ್ ಪೂರ್ವದ ಜಿ ಎಸ್ ಬಿ ಸೇವಾಮಂಡಲದ ಸಭಾಭಾವನದಲ್ಲಿ ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ ಚೈತ್ರಗೌರೀ ಅರಶಿನ ಕುಂಕುಮ ಕಾರ್ಯಕ್ರಮವಿರುವುದು.
  ಅಪರಾಹ್ನ 2 ಗಂಟೆಗೆ ಸಭಾಕಾರ್ಯಕ್ರಮವಿದ್ದು 75 ನೆಯ ವರ್ಷಾಚರಣೆಯ ಕಾರ್ಯಕ್ರಮಗಳ ವಿದ್ಯುಕ್ತ ಉದ್ಘಾಟನೆ ಜರಗಲಿರುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಡಿ. ನಾಗೇಂದ್ರ ಕಾಮತ್ , ಪದ್ಮಶ್ರೀ ಎಚ್.ಸದಾನಂದ ಕಾಮತ್ ಹಾಗೂ ಮುಂಬೈ ಸಂಘದ ಮಾಜಿ ಅಧ್ಯಕ್ಷ ಮಾಧವ ವಿ. ಪ್ರಭು ಉಪಸ್ಥಿತರಿರುವರು.
   ದೂರದೃಷ್ಟಿಯುಳ್ಳ ಸಮಾಜದ ಹಿರಿಯರು 1950 ನೆಯ ಇಸವಿ ಮಾರ್ಚ್ ತಾ.15 ರ ರಾಮ ನವಮಿಯಂದು  ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ವಿವಿಧ ಸಮಾಜಪರ ಕಾರ್ಯಕ್ರಮಗಳನ್ನು ಜರಗಿಸಿಕೊಂಡು  ಬರುತ್ತಾ ಇದೀಗ ಜರಗುವ 75 ವರ್ಷಾಚರಣೆಯ ಆರಂಭೋತ್ಸವಕ್ಕೆ ಮಹಾರಾಷ್ಟ್ರದಾದ್ಯಂತ ಇರುವ ಸಮಾಜ ಸದಸ್ಯ ಬಂಧುಗಳೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕಾಗಿ ಅಧ್ಯಕ್ಷ ರಾಮಚಂದ್ರ ಎಸ್. ನಾಯಕ್ , ಕಾರ್ಯದರ್ಶಿ ರಮೇಶ ಯು.ಕಾಮತ್ ಹಾಗೂ ಖಜಾಂಚಿ ಅನಿಲ್ ಪಿ. ನಾಯಕ್ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಮಾಧ್ಯಮ ಸುದ್ಧಿ : ಪಿ.ಆರ್.ರವಿಶಂಕರ್ ಮುಂಬೈ 8483980035

Related posts

ಜುಲೈ 26 ರಂದು ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ, ಸತ್ಸಂಗ

Mumbai News Desk

ಡಿ.1ರಂದು ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ನಾಡಹಬ್ಬ.

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,

Mumbai News Desk

ಗೊರೆಗಾಂವ್‌ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಜು21: ಗುರುಪೂರ್ಣಿಮಾ  ಆಚರಣೆ,

Mumbai News Desk

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ. ಮಾ. 17 ರಂದು ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk