
ಸಂಘದ ಶ್ರೇಯೋಬಿವೃದ್ಧಿ ಹಾಗೂ ಸದಸ್ಯ ಬಾಂಧವರ ಸುಖ ಸಮೃದ್ಧಿಗಾಗಿ ಧಾರ್ಮಿಕ ಕಾರ್ಯಕ್ರಮ: ನ್ಯಾ. ಜಗದೀಶ್ ಎಸ್ ಹೆಗ್ಡೆ
ಚಿತ್ರ, ವರದಿ: ರಮೇಶ್ ಉದ್ಯಾವರ
ಮಲಾಡ್, ಎ. 16: ಮುಂಬೈ ಉಪನಗರ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಮಲಾಡ್ ಕನ್ನಡ ಸಂಘ ಇದರ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಸತ್ಯನಾರಾಯಣ ಮಹಾಪೂಜೆ ಏಪ್ರಿಲ್ 14ರಂದು ಸಂಘದ ಕಚೇರಿ 4ಬಿ- 21 ಯುನಿಟಿ ಅಪಾರ್ಟ್ಮೆಂಟ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಬಫ್- ಹೀರಾ ನಗರ ಮಾರ್ವೆ ರೋಡ್ ಮಲಾಡ್ ಪಶ್ಚಿಮ ಇಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಸಂಘದ ಸದಸ್ಯರಾದ ಸದಾಶಿವ ಕದಂಬ ವನಿತಾ ಕದಂಬ ದಂಪತಿಗಳ ನೇತೃತ್ವದಲ್ಲಿ ವಿಷ್ಣು ಮೂರ್ತಿ ಅಡಿಗರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಆಪ್ತ ಹಿತೈಷಿ ಮಿತ್ರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾದ ನ್ಯಾ. ಜಗದೀಶ್ ಎಸ್ ಹೆಗ್ಡೆ ಮಲಾಡ್ ಕನ್ನಡ ಸಂಘ ಉಪನಗರ ಕನ್ನಡಿಗರ ಅಭಿಮಾನದ ಸಂಸ್ಥೆಯಾಗಿದ್ದು
ವರ್ಷಂಪ್ರತಿ ಸದಸ್ಯರ ಸಾಮೂಹಿಕ ಒಗ್ಗೂಡುವಿಕೆಯಿಂದ ಜರಗುವ ಈ ಧಾರ್ಮಿಕ ಕಾರ್ಯಕ್ರಮವು ಸಂಘ ಹಾಗೂ ಕುಟುಂಬದ ಸದಸ್ಯರ ಸಮೃದ್ಧಿ ಆರೋಗ್ಯ ಮಾಂಗಲ್ಯ ಶಿಕ್ಷಣ ದಂತಹ ಅಶೋತ್ತರಗಳಿಗಾಗಿ ಈ ಧಾರ್ಮಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಮಲಾಡ್ ಕನ್ನಡ ಸಂಘವು ಪ್ರಾರಂಭದ ದಿನದಿಂದಲೂ ಸಾಮಾಜಿಕ ಕಾರ್ಯಕ್ರಮದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಿಗೂ ವಿಶೇಷ ಮಹತ್ವ ನೀಡಿದೆ. ಸಂಘದ ಪ್ರತಿಯೊಂದು ಕಾರ್ಯಕ್ರಮಗಳು ಸರ್ವ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಜರುಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಂಗಳಾರತಿ ಜರುಗಿದ ಬಳಿಕ ಪೂಜೆಯಲ್ಲಿ ಭಾಗವಹಿಸಿದ ಸದಾಶಿವ ಕದಂಬ ವನಿತಾ ಕದಂಬ ದಂಪತಿಗಳಿಗೆ ಹಾಗೂ ಸಂಘದ ಅಧ್ಯಕ್ಷರಾದ ನ್ಯಾ. ಜಗದೀಶ್ ಎಸ್ ಹೆಗ್ಡೆ ಮತ್ತು ಪದಾಧಿಕಾರಿಗಳಿಗೆ ಶ್ರೀ ದೇವರಿಂದ ಅನುಗ್ರಹಿಸಿ ಪುರೋಹಿತರು ಫಲಪುಷ್ಪ ಪ್ರಸಾದ ನೀಡಿ ನಿಸ್ವಾರ್ಥ ಸೇವೆಯ ಮನಸ್ಸು ಮತ್ತು ನಮ್ಮ ಪ್ರೀತಿ, ಭಕ್ತಿ ಭಗಂವಂತನಿಗೆ ಆಗರ್ಪಿತಗೊಂಡಾಗ ನಮ್ಮ ಮನಸ್ಸು ಶುದ್ಧಿಗೊಂಡು ಭಗವಂತನನ್ನು ಪ್ರಸನ್ನನಾಗುತ್ತಾನೆ ಜೊತೆಗೆ ಆರೋಗ್ಯ ಸುಖಶಾಂತಿ ಸಮೃದ್ಧಿ ಕರುಣಿಸುತ್ತಾನೆ ಎಂದು ಹೇಳಿ ಪೂಜೆಯಲ್ಲಿ ಭಾಗವಹಿಸಿದ ಸರ್ವ ಸದಸ್ಯರು, ಕುಟುಂಬಸ್ಥರು ಮತ್ತು ಪರಿಸರದ ತುಳುಕನ್ನಡಿಗರಿಗೆಲ್ಲಾ ತೀರ್ಥ ಪ್ರಸಾದ ನೀಡಿ ಅನುಗ್ರಹಿಸಿದರು. ಬಳಿಕ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು.

ಉಪಾಧ್ಯಕ್ಷರಾದ ದಯಾನಂದ ಎಂ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ ಆಶಾಲತಾ ಎಸ್ ಕೋಟ್ಯಾನ್ ಗೌರವ ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಎಸ್ ಸಾಲ್ಯಾನ್ ಭಾರತ್ ಬ್ಯಾಂಕಿನ ನಿರ್ದೇಶಕ ಸಂಘದ ಜೊತೆ ಕೋಶಾಧಿಕಾರಿ ಸಂತೋಷ್ ಕೆ ಪೂಜಾರಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ವಿ ಭಂಡಾರಿ ಕಾನೂನು ವಿಭಾಗದ ಕಾರ್ಯಾಧ್ಯಕ್ಷ ಭಾರತ್ ಬ್ಯಾಂಕ್ ನ ಉಪಕಾರ್ಯಾಧ್ಯಕ್ಷ ನ್ಯಾ. ಎಸ್ ಬಿ ಅಮೀನ್, ಆಂತರಿಕ ಲೆಕ್ಕ ಪರಿಶೋಧಕ ಸದಾನಂದ ಶೆಟ್ಟಿಗಾರ್ ಸದಸ್ಯತ್ವ ನೊಂದಣಿ ವಿಭಾಗದ ಕಾರ್ಯಾಧ್ಯಕ್ಷ ಶಂಕರ್ ಆರ್ ಶೆಟ್ಟಿ, ಟ್ರಸ್ಟಿ ಪ್ರಕಾಶ್ ಎಸ್ ಶೆಟ್ಟಿ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಕಾರ್ಯದರ್ಶಿ, ಬೊರಿವಲಿ ಶಿಕ್ಷಣ ಸಮಿತಿ, ಬಂಟರ ಸಂಘ ಮುಂಬಯಿ ಅಭ್ಯುದಯ ಕೋಅಪರೇಟಿವ್ ಬ್ಯಾಂಕ್ ನ ಆಡಳಿತ ನಿರ್ದೇಶಕ ಪ್ರೇಮ್ ನಾಥ್ ಸಾಲ್ಯಾನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವಿವಿಧ ಉಪಸಮಿತಿಯ ಸದಸ್ಯರು ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ, ವರದಿ: ರಮೇಶ್ ಉದ್ಯಾವರ.