30.5 C
Mumbai
June 8, 2026
Mumbai News Kannada
ಮುಂಬಯಿ

ಬಂಟರ ಭವನದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮರಣೆ.





ಕಟೀಲಮ್ಮನ    ಕೃಪಾ  ಪ್ರಸಾದವೇ ನನ್ನ  ಬದುಕಿಗೆ ಆಧಾರ: ಕೆ ಡಿ. ಶೆಟ್ಟಿ, ಚೆಲ್ಲಡ್ಕ.

     ಚಿತ್ರ ವರದಿ : ಸುಭಾಷ್ ಶಿರಿಯ

ಮುಂಬಯಿ   ಆ.2.. ಮುಂಬಯಿಯ ಕಲಾ ಸಂಘಟಕ ಪದ್ಮನಾಭ ಕಟೀಲು,ದುಬೈಯವರ ಯಕ್ಷಯಜ್ಞದ 30ನೇ ವರ್ಷದ ಸಂಭ್ರಮ.ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ವರ್ಷದ ಸಂಸ್ಮರಣ ಕಾರ್ಯಕ್ರಮ ಇಂದು ಆ. 2 ರಂದು ಶನಿವಾರ   ಬಂಟರ ಭವನ ಕುರ್ಲಾದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಆರೂ ಮೇಳಗಳ ಆಯ್ದ ಕಲಾವಿದರ ಕೂಡುವಿಕೆಯಲ್ಲಿ,”ಶ್ರೀ ದೇವಿ ಮಹಾತ್ಮೆ “ಯಕ್ಷಗಾನ ಪ್ರದರ್ಶನಗೊಂಡಿತು. 

ಪ್ರಾರಂಭದಲ್ಲಿ ದೀಪ ಬೆಳಗಿಸಿ ಯಕ್ಷಗಾನವನ್ನು ಉದ್ಘಾಟಿಸಿದ   ಭವಾನಿಶಿಪ್ಪಿಂಗ್ ಇಂಡಿಯಾ ಪ್ರೈ ಲಿಮಿಟೆಡ್ನ ಆಡಳಿತ ನಿರ್ದೇಶಕರಾಗಿರುವ  ಕೆ ಡಿ ಶೆಟ್ಟಿ. ಚೆಲ್ಲಡ್ಕ ಯವರು ಉದ್ಘಾಟಿಸಿ ಮಾತನಾಡುತ್ತಾ, ನನ್ನ ಬದುಕಿನ ಅವಿಸ್ಮರಣೀಯ ಕ್ಷಣವಿದು.ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಅನೇಕ ಪ್ರಶಸ್ತಿ-ಸನ್ಮಾನಗಳನ್ನು ಪಡೆದಿದ್ದರೂ, ಇಂದು ಕಟೀಲಮ್ಮನನ್ನು ಪ್ರತಿನಿತ್ಯ ಪೂಜೆಗೈಯ್ಯವ ಆಸ್ರಣ್ಣ ಪರಿವಾರದವರ ಸಮಕ್ಷಮ ಪಡೆದ ಅನುಗ್ರಹ ಪ್ರಸಾದ ನನ್ನ ಬದುಕಿಗೆ ಶ್ರೇಷ್ಠವಾದುದು. ಈ ಗೌರವ ಸನ್ಮಾನವನ್ನು ನನ್ನನ್ನು ಹೆಡೆದ ಭವಾನಿಯಮ್ಮನ ಪಾದ ಪದ್ಮಕ್ಕರ್ಪಿಸುತ್ತಿದ್ದೇನೆ. ಕಟೀಲಮ್ಮನ ಧಾರಾವಾಹಿ ಮಾಡಿ ,ಕ್ಷೇತ್ರ ಮಹಾತ್ಮೆಯನ್ನು ಜಗದಗಲ ಪಸರಿಸುವ ಅವಕಾಶವೂ ನನ್ನ ಪಾಲಿಗೊದಗಿರುವುದು ಭಾಗ್ಯವೇ ಸರಿ.ಪದ್ಮನಾಭ ಕಟೀಲು ಮಾಡುತ್ತಿರುವ ಈ ಶ್ರೇಷ್ಠ ಕಾರ್ಯಕ್ರಮ ನಿರಂತರ ಶತವರುಷ ನಡೆಯಲಿ. ನಮ್ಮ ತುಳುವರು ಸಂಸ್ಕಾರವಂತರು. ಪ್ರತೀಯೋರ್ವರನ್ನು ಆದರಪೂರ್ವಕವಾಗಿ ಗೌರವಿಸುತ್ತಾರೆ.ಕಟೀಲಮ್ಮನ ಗಂಧಪ್ರಸಾದ ಮತ್ತು ಹಿರಿಯರ ಆಶೀರ್ವಾದ ನಮ್ಮನ್ನು ಈ ಮಟ್ಟಕ್ಕೆ ತಲುಪಿಸಿದೆ ಎಂದು ನುಡಿದರು. 

 ಮುಖ್ಯ ಅತಿಥಿಯಾಗಿದ್ದ  ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷರಾದ ಸುರೇಂದ್ರ ಕುಮಾರ ಹೆಗ್ಡೆಯವರು ಮಾತನಾಡಿ ನನ್ನ ಮತ್ತ ಪದ್ಮನಾಭ ಕಟೀಲುರವರ ಭಾಂದವ್ಯ ಕಳೆದ 25 ವರ್ಷಗಳದ್ದು. ಕೀರ್ತಿಶೇಷ ಗೋಪಾಲಕೃಷ್ಣ ಅಸ್ರಣ್ಣರು ದೈವಾಂಶ ಸಂಭೂತರು. ಕಟೀಲಮ್ಮನ ಆರಾಧಕನಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಸತ್ಯ ಧರ್ಮ ನ್ಯಾಯ ನಿಷ್ಟೆ ಸದಾ ನಮ್ಮಲ್ಲಿ ಮೇಳೈಸಲಿ. ಈ ಯಕ್ಷ ಸಂಭ್ರಮಕ್ಕೆ ಶುಭ ಹಾರೈಸುತ್ತೇನೆ ಎಂದರು.

    ವೇದಿಕೆಯಲ್ಲಿ  ಶ್ರೀಕ್ಷೇತ್ರ ಕಟೀಲಿನ   ಶ್ರೀವೆಂಕಟರಮಣ ಆಸ್ರಣ್ಣ ಶ್ರೀ ಆನಂತ ಪದ್ಮನಾಭ ಆಸ್ರಣ್ಣ ಶ್ರೀಕಮಲಾ ದೇವಿ ಆಸ್ರಣ್ಣ, ಶ್ರೀ ಹರಿನಾರಾಯಣ,

ಆಸ್ಪಣ್ಣ ಶ್ರೀ ದೇವಿಕುಮಾರ ಪ್ರಸಾದ ಆಸ್ರಣ್ಣ ,ಕಟೀಲು ಮೇಳದ ಸಂಚಾಲಕ ದೇವೀ ಪ್ರಸಾದ ಶೆಟ್ಟಿ,ತುಳುನಾಡ ಮಾಣಿಕ್ಯ ಅರವಿಂದ ಬೊಳಾರ್,ಡೈಜಿ ವರ್ಲ್ಡ್ ನ ವಾಲ್ಟರ್ ನಂದಳಿಕೆ ,  ಕಲಾ ಪ್ರತಿಷ್ಠಾನದ ಪ್ರಕಾಶ್ ಶೆಟ್ಟಿ ಸುರತ್ಕಲ್,ಬಂಟರವಾಣಿಯ ಸಂಪಾದಕ ಅಶೋಕ್ ಪಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆ ಡಿ ಶೆಟ್ಟಿ,ಚೆಲ್ಲಡ್ಕ ರವರಿಗೆ ಶ್ರೀ ದೇವಿಯ ಪ್ರಸಾದ ನೀಡಿ ಪದ್ಮನಾಭ ಕಟೀಲುರವರು ಆಸ್ರಣ್ಣರ ಸಮಕ್ಷಮ ವಿಶೇಷವಾಗಿ ಸನ್ನಾನಿಸಲಾಯಿತು.

 ಕಲಾಸಾರಥಿ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Related posts

ಡೊಂಬಿವಲಿ  ಶ್ರೀ ಜಗದಂಬಾ ಮಂದಿರ 10ನೇ ವಾರ್ಷಿಕೋತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಮುಂಬಯಿ: ಮಾಟುಂಗದ ಮೈಸೂರು ಅಸೋಸಿಯೇಷನ್‌ನಲ್ಲಿ ‘ಕನ್ನಡ ಕಂಪು ಸರಣಿ-10’ ಸಂಭ್ರಮ; ಸತೀಶ್ ಎನ್. ಬಂಗೇರ ಕುರಿತ ಕೃತಿ ಲೋಕಾರ್ಪಣೆ

Mumbai News Desk

ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಮಹಿಳಾ ದಿನಾಚರಣೆ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕುಮಾರಿ ಸನ್ನಿಧಿ ಸುಧಾಕರ್ ಪೂಜಾರಿಗೆ ಶೇ 96.60 ಅಂಕ.

Mumbai News Desk

ಸ. ಹಿ. ಪ್ರಾ. ಶಾಲೆ ಉಳಾಯಿಬೆಟ್ಟು ಆಶ್ರಯದಲ್ಲಿ ಮಕ್ಕಳ ಬಹುಭಾಷಾ ನಾಟಕೋತ್ಸವ

Mumbai News Desk

ಮುಂಬಯಿ ಕನ್ನಡ ಸಂಘ : ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk