23.5 C
Karnataka
April 4, 2025
ಮುಂಬಯಿ

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ



ಕನ್ನಡ ಕಲಾ ಕೇಂದ್ರ ಮುಂಬೈ ಮತ್ತು ಕನ್ನಡ ವೆಲ್ಫೇರ್ ಸೊಸೈಟಿ (ರಿ)ಯು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ 13/04/ 2024 ರಂದು ಬೆಳಿಗ್ಗೆ 10 ರಿಂದ ವಿಶ್ವ ರಂಗ ದಿನಾಚರಣೆ 2024 ರ ಅಂಗವಾಗಿ ಕನ್ನಡ ವೆಲ್ಫೇರ್ ಸೊಸೈಟಿ (ಪ) ಇಲ್ಲಿ ನಾಟಕ ರಚನಾ ಕಮ್ಮಟ ಹಾಗೂ ರಂಗ ನಿರ್ದೇಶಕರ ಸಮ್ಮಿಲನವನ್ನು ಅದ್ದೂರಿಯಿಂದ ನೆರವೇರಿಸಿತು.

ಬೆಳಿಗ್ಗೆ 10 ಗಂಟೆಗೆ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಮಧುಸೂದನ್ ಟಿ.ಆರ್ ಹಾಗೂ ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನ ಬಾಳಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿದ ನವೀನ್ ಶೆಟ್ಟಿ ಇನ್ನ ಬಾಳಿಕೆ, ರಂಗ ನಿರ್ದೇಶಕ, ನಾಟಕಕಾರ ಶ್ರೀ ನಾರಾಯಣ ಶೆಟ್ಟಿ, ನಂದಳಿಕೆ, ರಂಗನಟಿ ಶ್ರೀಮತಿ ಸುಧಾ ಶೆಟ್ಟಿ, ಡಾ! ಜಿ. ಪಿ. ಕುಸುಮಾ ಅವರುಗಳು ತಮ್ಮ ಕ್ಷೇತ್ರದ ಅನುಭವವನ್ನು ಹಂಚಿಕೊಂಡರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ! ಪ್ರಭು ಅಂಗಡಿ, ಸಾ.ದಯಾ ವಸ್ತು ,ಭಾಷೆ, ಕಾಲ ದೇಶ ,ವಿನ್ಯಾಸ, ನಾಟಕದ ನಡೆ, ಆಶಯ, ಧ್ವನಿ, ಭಾವ, ರಚನಾ ತಂತ್ರ, ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರಿಸಿ ನಾಟಕ ರಚನೆ ಸಂದರ್ಭದಲ್ಲಿ ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ನಾಟಕ ಹೇಗೆ ರಚಿಸಬೇಕೆಂದು ವಿವರಿಸಿದರು. ಈ ಬಗ್ಗೆ ಚರ್ಚೆ ನಡೆಯಿತು.

ಬಳಿಕ ನಾಟಕ ರಚನಾ ಕಮ್ಮಟದಲ್ಲಿ ಭಾಗವಹಿಸಿ ನಾಟಕದ ಒಂದು ದೃಶ್ಯ ರಚನೆ ಗೈದ ಅಭ್ಯರ್ಥಿಗಳು ನಾಟಕದ ದೃಶ್ಯವನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ತದನಂತರ ಡಾ. ಪ್ರಭು ಅಂಗಡಿ ಮತ್ತು ಶ್ರೀ ಸಾ. ದಯಾ ಅವರುಗಳ ನೇತೃತ್ವದಲ್ಲಿ ಅಭ್ಯರ್ಥಿಗಳು ರಚಿಸಲ್ಪಟ್ಟ ದೃಶ್ಯದ ಪರಿಶೀಲನೆ ಮತ್ತು ಚರ್ಚೆ ನಡೆಯಿತು.
ಅಭ್ಯರ್ಥಿಗಳಿಗೆ ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ನಾಟಕ ರಚನೆ ಮಾಡಲು ಸಮಯಾವಕಾಶವನ್ನು ಒದಗಿಸಲಾಗಿ, ಉತ್ತಮ ರಚನೆಯನ್ನು ಆಯ್ಕೆ ಮಾಡಿ ಕನ್ನಡ ಕಲಾ ಕೇಂದ್ರ ವು ಪ್ರಕಟಿಸುವುದಾಗಿ ಅದರ ಅಧ್ಯಕ್ಷ ರಾದ ಮಧುಸೂದನ್ ಟಿ. ಆರ್. ಅವರು ತಿಳಿಸಿದರು.

ಇದಾದ ಬಳಿಕ ನಡೆದ ನಾಟಕ ನಿರ್ದೇಶಕರ ಸಮ್ಮಿಲನದಲ್ಲಿ ನಾಟಕ ರಂಗದ ಹಿರಿಯ ನಾಟಕಕಾರ ನಟ ಡಾ.ಮಂಜುನಾಥ್, ಶ್ರೀ ಮಂಜುನಾಥ್, ಗುಣಪಾಲ್ ಉಡುಪಿ, ಸುರೇಂದ್ರ ಕುಮಾರ್ ಹೆಗ್ಡೆ, ಭಾಸ್ಕರ್ ಸುವರ್ಣ, ಶ್ರೀಮತಿ ಅಹಲ್ಯ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದು ನಾಟಕ ರಂಗದ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ಶ್ರೀಮತಿ ಹರಿಣಿ ಶೆಟ್ಟಿ ಪ್ರಾರ್ಥನೆಗೈದರು. ಕನ್ನಡ ಕಲಾ ಕೇಂದ್ರದ ಕಾರ್ಯದರ್ಶಿ ಶ್ರೀ ರಮೇಶ್ ಬಿರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಸಹಾರ್‌ಗಾಂವ್ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ – 36ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಮಂಡಲ ಪೂಜೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾಚಿ ಭಂಡಾರಿ ಗೆ ಶೇ 93.40 ಅಂಕ.

Mumbai News Desk

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವತಿಯಿಂದ ಅರಸಿನ ಕುಂಕುಮ,

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ, ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗದ ರಜತ ಮಹೋತ್ಸದ ಸಂಭ್ರಮ ಉದ್ಘಾಟನೆ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ -ಖೋಪರ್‌ಖೈರ್ನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ ದಶಮಾನೋತ್ಸವ ಆಚರಣೆ

Mumbai News Desk