
ಸಂಸ್ಥೆಯ ಸೇವಾ ಕಾರ್ಯ ಇತರರಿಗೆ ಮಾದರಿ – ಮಧುಸೂದನ್ ಟಿ. ಆರ್.
ಸಯನ್ ಪರಿಸರದ ಸಾಮಾಜಿಕ ಸಂಘಟನೆ ಕರುನಾಡ ಸಿರಿ ಯ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಏಪ್ರಿಲ್ 14 ರಂದು ಸಾಂತಾಕ್ರೂಜ್ ಪಶ್ಚಿಮ ಮಿಲನ್ ಸಬ್ ವೆ ಬಳಿಯ ಲಯನ್ಸ್ ಕ್ಲಬ್ ಮೈದಾನದಲ್ಲಿ ದಿನವಿಡಿ ಜರಗಿತು.
ಸಂಘದ ಅಧ್ಯಕ್ಷರಾದ ಶ್ರೀ ಬಾಲಚಂದ್ರ ದೇವಾಡಿಗ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿ ಹರೀಶ್ ಹಾಸ್ಪಿಟಲ್ ನೇರುಲ್ ನ ಡಾ. ಹರೀಶ್ ಬಿ ಸಾಲಿಯಾನ್, ಸದಾಶಿವ್ ಶೆಟ್ಟಿ( ಉಪಾಧ್ಯಕ್ಷರು ಕನ್ನಡ ಸಂಘ ಸಾಯನ್), ಮಧುಸೂದನ್ ಟಿ. ಆರ್., (ಅಧ್ಯಕ್ಷರು ಕನ್ನಡ ಕಲಾ ಕೇಂದ್ರ), ದಯಾನಂದ ಸಾಲಿಯಾನ್ (ಹೆಸರಾಂತ ಕನ್ನಡ ಲೇಖಕರು), ಮಾಲಾ ಮಹಾದೇವ ಮೇಸ್ತ, ಮಹೇಶ್ ಮರ್ಕರ, ಶಿಕ್ಷಕ ಪ್ರಕಾಶ್ ಚಂದ್ರ ಬಂಗೇರ, ಅಶ್ವಿನಿ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಭಾಷಣ ಮಾಡಿದ ಬಾಲಚಂದ್ರ ದೇವಾಡಿಗ ಕ್ರೀಡಾಕೂಟಕ್ಕೆ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರಲ್ಲದೆ, ಸಂಸ್ಥೆಯ ಹಮ್ಮಿಕೊಂಡಿರುವ ಕಾರ್ಯ ಯೋಜನೆಗಳನ್ನು ಎಲ್ಲರ ಮುಂದೆ ಪ್ರಸ್ಥಾಪ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಶಾಲೆಯ ಕನ್ನಡ ಮಕ್ಕಳಿಗೆ ಸ್ಕಾಲರ್ಷಿಪ್ ಹಾಗು ಉಡುಗೊರೆ ವಿತರಿಸಲಾಯಿತು.
ಅತಿಥಿ ಗಣ್ಯರು ಸಂಸ್ಥೆಯ ಚಟುವಟಿಕೆಗಳನ್ನು ಶ್ಲಾಗಿಸಿದರು.






ಗೌರವ ಅತಿಥಿ ಮಧುಸೂಧನ್ ಟಿ ಆರ್ ತನ್ನ ಅನಿಸಿಕೆ ತಿಳಿಸುತ್ತಾ “ಇಂದು ಯುವಕರು ಸ್ವಾರ್ಥಿಗಳಾಗಿ ಜೀವನ ಮಾಡುತ್ತಿರುವ ಪರಿಸ್ಥಿತಿನಲ್ಲಿ, ನಿಸ್ವಾರ್ಥ ಸೇವೆಯನ್ನು ಮಾಡಲು ಇಷ್ಟೊಂದು ಯುವಕರು ಮುಂದೆ ಬಂದಿರೋದು ನನಗು ತುಂಬಾ ಸಂತೋಷ. ಇಂತಹ ಕಾರ್ಯಗಳು ಅವರಿಂದ ಇನ್ನಷ್ಟು ಆಗಲಿ, ಸಂಸ್ಥೆಯ ಕಾರ್ಯಗಳಿಗೆ ನಮ್ಮ ಅಳಿಲು ಸೇವೆ ಸದಾ ಇದೆ. ಒಳ್ಳೆಯಾ ಕೆಲಸ ಸದಾ ಮುಂದೆ ನಡೆಯುತ್ತಿರಲಿ” ಎಂದು ಹೇಳಿದರು.
ಬಳಿಕ ಕ್ರೀಡಾಕೂಟ ಆರಂಭವಾಯಿತು.ಮಕ್ಕಳು ಪುರುಷರು, ಮಹಿಳೆಯರು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದರು.
ಮಕ್ಕಳ ಕ್ರಿಕೆಟ್ ಟೂರ್ನಮೆಂಟ್, ಮಹಿಳೆಯರ ಕ್ರಿಕೆಟ್ ಟೂರ್ನಮೆಂಟ್, ಪುರುಷರ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಮಕ್ಕಾಳಿಗಾಗಿ ೧೦೦ ಮಿಟರ ಓಟ, ೫೦ ಮೀಟರ್ ಓಟ, ಹಿಂದೆ ನಡ ಹಗ್ಗ ಜಗ್ಗಾಟ ಇತ್ಯಾದಿ ಪಂದ್ಯಗಳು ನಡೆಯಿತು.ದೈಹಿಕ ಶಿಕ್ಷಕರಾದ ಮುಖಿಲಾನ್ ಮತ್ತು ಜನಾರ್ದನ ಕುರ್ಮೆ ಅವರು ಸಹಕಾರ ನೀಡಿದರು.
ಮಧ್ಯಾಹ್ನದ ಊಟದ ನಂತರ ಮತ್ತೆ ಸ್ಪರ್ಧೆಗಳನ್ನು ಪುನಃ ಪ್ರಾರಂಭ ಮಾಡಲಾಯಿತು. ಮಕ್ಕಳ ಸ್ಪರ್ಧೆಗಳಲ್ಲಿ ಗೆದ್ದ ಎಲ್ಲ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮತ್ತೆ ಮಹಿಳಾ ಕ್ರೀಕೆಟ್ ಟೂರ್ನಮೆಂಟ್ ಗೆದ್ದ ತಂಡಗಳಿಗೆ ಟ್ರೋಫಿ ನೀಡಲಾಯಿತು. ಮಹಿಳಾ ಟೂರ್ನಮೆಂಟ್ ನಲ್ಲಿ ಸೂಪರ್ ನೋವ ತಂಡವು ವಿಜಯವನ್ನು ಸಾಧಿಸಿತು, ಸಾಂತಕ್ರುಜ್ ಸೇವಾ ಸಂಘ ರನರ್ ಅಪ್ ಆಯಿತು. ಸಮಾಜದ ಹಿತಕ್ಕಾಗಿ ನಡೆದ ಟೂರ್ನಮೆಂಟ್ನಲ್ಲಿ ಸೌತ್ ವಾರಿಯರ್ಸ್ ತಂಡವು ಗೆದ್ದಿತು,ಧಿ ಹೋಪ್ ಫೌಂಡೇಶನ್ ಧಾರಾವಿ ರನರ್ ಅಪ್ ಆಯಿತು. ಈ ತಂಡಗಳಿಗೆಲ್ಲಾ ಟ್ರೋಫಿ ನೀಡಲಾಯಿತು. ಈ ಎಲ್ಲ ಬಹುಮಾನಗಳನ್ನು ಅತಿಥಿಗಳಾದ ಶ್ರೀ ಜಿತೇಂದ್ರ ಗೌಡ( ವೆಂಕಿ ಫಾಸ್ಟ್ ಫುಡ್ ನ ಮಾಲಿಕರು), ಕವಿಗಳಾದ ಗೋಪಾಲ ತ್ರಾಸಿ, ದಯಾನಂದ ಸಾಲಿಯಾನ್, ಶ್ರೀದೇವಿ ರಾವ್( ಅಧ್ಯಕ್ಷರು ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್), ಮಾಲಾ ಮಹದೇವ್ ಮೇಸ್ತ ಇವರು ಗೆದ್ದ ಎಲ್ಲ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಉಡುಗೊರೆಗಳನ್ನು ನೀಡಿದರು.
ಸಂಜೆ ಅತಿಥಿಗಳಾಗಿ ಶಿಕ್ಷಕರಾದ ಅಮರಿಷ್ ಪಾಟೀಲ್, ದಯಾನಂದ ಪೂಜಾರಿ ಹಾಗೂ ಶಿವಯೋಗಿ ಸಣ್ಣಮನಿ, ದುರ್ಗಪ್ಪ, ಬನ್ನಪ್ಪ ಖೇಡಿಗಿ, ಹಾಗೂ ಮ.ನ.ಪಾ. ಕನ್ನಡ ಶಾಲೆಯ ಮುಖ್ಯ ಅಧ್ಯಾಪಕರಾದ ಶ್ರೀಶೈಲ ಬಸರ್ಗಿ ಸರ್ ಉಪಸ್ಥಿತರಿದ್ದರು.
ಪುರುಷರ ಕ್ರಿಕೆಟ್ ಟೂರ್ನಮೆಂಟ್ ರಾತ್ರಿ ಒಂಬತ್ತು ಗಂಟೆಯವರೆಗೆ ನಡೆಯಿತು. ಫೈನಲ್ ಮ್ಯಾಚ್ ತಾನಿಷ್ಕ್ತ್ ಮತ್ತು ಫಾಲ್ಕನ್ ಬ್ರೋದೆರ್ಸ್ ನಡುವೆ ನಡೆದು . ಫೈನಲ್ ತಾನಿಷ್ಕ್ತ್ ತಂಡವು ಗೆದ್ದರೆ ಫಾಲ್ಕನ್ ಬ್ರದರ್ಸ್ ತಂಡ ರನ್ನರ್ ಅಪ್ ಆಯಿತು. ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀದೇವಿ ರಾವ್ ಅವರು ಉಪಸ್ಥಿತರಿದ್ದು l ಎಲ್ಲ ತಂಡಗಳನ್ನು ಪ್ರಶಂಸಿಸಿ, ಗೆದ್ದ ತಂಡಗಳಿಗೆ ಟ್ರೋಫಿ ನೀಡಿದರು.
ಕರುನಾಡ ಸಿರಿಯ ಅಧ್ಯಕ್ಷ ಬಾಲಚಂದ್ರ ದೇವಾಡಿಗ, ಉಪಾಧ್ಯಕ್ಷ ಅನಿಲ್ ಗೌಡ, ಕಾರ್ಯದರ್ಶಿ ಅರುಣ್ ದೋನೆ, ಕೋಶಧಿಕಾರಿ ಯೋಗೇಶ್ ಸುಪೇಕರ್, ಜತೆ ಕೋಶಧಿಕಾರಿ ವಿಶ್ವನಾಥ ದೇವಾಡಿಗ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ತ ಭೀಮರಾಯ ಚಿಲ್ಕ, ಜತೆ ಕಾರ್ಯದರ್ಶಿ ಮಂಗೇಶ್ ಹಾಗೂ ಮಹಿಳಾ ವಿಭಾಗದ ಲಲಿತ ದೀಪಕ್ ಗೌಡ,ಪ್ರಿಯಾಂಕ ಶೆಟ್ಟಿ, ಭಾರತಿ ಶೆಣೈ, ಶಾಮ್ಯ ಪೂಜಾರಿ, ಯೋಗಿತ ಗೌಡ, ದೇವಕಿ ಬಸವರಾಜ್
ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗುವಲ್ಲಿ ವಿಶೇಷವಾಗಿ ಶ್ರಮಿಸಿದರು.