30.5 C
Mumbai
June 8, 2026
Mumbai News Kannada
ಮುಂಬಯಿ

ಚಿತ್ರಾಪು ಬಿಲ್ಲವರ ಸಂಘ ಮುಂಬಯಿಯ 80ನೇ ವಾರ್ಷಿಕ ಮಹಾಸಭೆ





ಸದಸ್ಯರ ಸುಖ-ದುಃಖಗಳಿಗೆ ಸ್ಪಂದಿಸುವ ಉದ್ದೇಶ ನಮ್ಮದು – ರಾಜು ಎಸ್ ಪೂಜಾರಿ

ಚಿತ್ರಾಪು ಬಿಲ್ಲವರ ಸಂಘ ಮುಂಬೈ ಇದರ 80ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 28ರಂದು ಬೆಳಿಗ್ಗೆ ಸಾಂತಕ್ರೂಜ್ ಪೂರ್ವದ ಬಿಲ್ಲಭ ಭವನದ ಸಭಾಗ್ರಹದಲ್ಲಿ ಸಂಘದ ಅಧ್ಯಕ್ಷರಾದ ರಾಜು ಎಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಆರಾಧ್ಯ ದೇವರಾದ ಶ್ರೀ ವಿಠೋಬ – ರುಕ್ಮಾಯಿ ದೇವರ ಭಾವಚಿತ್ರಕ್ಕೆ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯರು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು.


ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಜಿ ಕೋಟ್ಯಾನ್ ಸಭೆಗೆ ಬಂದ ಎಲ್ಲ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ವರದಿ ವರ್ಷದಲ್ಲಿ ಸ್ವರ್ಗಸ್ತರಾದ ಸಂಘದ ಹಾಗೂ ಚಿತ್ರಪು ಗ್ರಾಮದ ಸದಸ್ಯರಿಗೆ ಶ್ರದ್ದಾಂಜಲಿ ನೀಡಲಾಯಿತು.

ಗತ ವರ್ಷದ ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ರವರು ಸಂಕ್ಷಿಪ್ತವಾಗಿ ಸಭೆಯ ಮುಂದೆ ಸಾದರ ಪಡಿಸಿದರು.
ಗೌರವ ಕೋಶಾಧಿಕಾರಿ ಸೋಮನಾಥ್ ಪಿ ಪೂಜಾರಿ ಅವರು ಲೆಕ್ಕ ಪರಿಶೋಧಕರು ಪರಿಶೀಲಿಸಿದ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದೆ ಮಂಡಿಸಿದರು.

ಈ ಸಂದರ್ಭ ಸಂಘದ ಹಿರಿಯ ಸದ್ಯಸರುಗಳಾದ ಜತೆ ಕಾರ್ಯದರ್ಶಿ ಮಧುಕರ್ ಆರ್ ಕೋಟ್ಯಾನ್, ದಯಾವತಿ ಎಂ ಅಮೀನ್, ಪುಷ್ಪ ಎಸ್ ಪೂಜಾರಿ, ಇವರನ್ನು ಸನ್ಮಾನಿಸಲಾಯಿತು.
ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾರಂಗದಲ್ಲಿ ಧನೆ ಮಾಡಿದ ಅವಿಕ್ ಸುವರ್ಣ, ಮಾನ್ಯ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಸೂಚಿ 5 ರಂತೆ 2025-28ರ ಅವಧಿಗೆ ಹೊಸ ಕಾರ್ಯಕಾರಿ ಸಮತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಜು ಎಸ್ ಪೂಜಾರಿ ಪುನರ್ ಆಯ್ಕೆಯಾದರು. ಸಂಘದ ಗೌರವ ಅಧ್ಯಕ್ಷರಾಗಿ ಲಕ್ಷ್ಮಣ್ ಪೂಜಾರಿ, ಉಪಾಧ್ಯಕ್ಷರಾಗಿ ಶೇಖರ್ ಚಿತ್ರಾಪು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾರತಿ ಪೂಜರಿ ನೇಮಕಾಗೊಂಡರು.
ಸಭಿಕರ ಪರವಾಗಿ ಮಾತನಾಡಿದ ಲಕ್ಷಣ ಸಿ ಪೂಜಾರಿ ” ಚಿತ್ರಾಪು ಬಿಲ್ಲವರ ಸಂಘವನ್ನು ಸ್ಥಾಪನೆ ಮಾಡಿದವರನ್ನು ಅದಕ್ಕಾಗಿ ದುಡಿದವರನ್ನು ಯಾವತ್ತು ಮರೆಯಬಾರದು. ಸಂಘ ಸಂಸ್ಥೆಯಿಂದ ಮೇಲೆ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ, ಆದರೆ ಅದನ್ನೆಲ್ಲ ಮರೆತು ದೇವರ ಸೇವೆ ಮಾಡಲು ಎಲ್ಲರೂ ಒಟ್ಟಾಗಬೇಕು ಎಂದರು.
ಚಿತ್ರಾಪು ಕೆ ಎಂ ಕೋಟ್ಯಾನ್ ತನ್ನ ಅನಿಸಿಕೆ ತಿಳಿಸುತ್ತಾ ” ಮುಂಬೈಯಲ್ಲಿ ಅಂದಿನಿಂದ ಇಂದಿನ ತನಕ ಎಷ್ಟೋ ಸಂಘ ಸಂಸ್ಥೆಗಳು ಜನ್ಮ ತಾಳಿವೆ ಆದರೆ ಅದರಲ್ಲಿ ಹೆಚ್ಚಿನ ಸಂಸ್ಥೆಗಳು ತಟಸ್ಥವಾಗಿದೆ. ಆದರೆ ನಮ್ಮ ಚಿತ್ರಾಪು ಬಿಲ್ಲವರ ಸಂಘ ಇಷ್ಟರ ತನಕ ನಡೆಯುತ್ತಿದೆ. ಯಾವುದೇ ಸಂಘದಲ್ಲಿ ಅಭಿವೃದ್ಧಿಯಾಗುವಾಗ ಅಲ್ಲಿ ಸಂಘರ್ಷ ಸಾಮಾನ್ಯ, ಆದರೆ ಸಂಘಟನೆಯ ಹಿತದೃಷ್ಟಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಾಗ ಅಗತ್ಯವಿದೆ. ಯಾವುದೇ ಕೆಲಸಕ್ಕೂ ದೇವರ ಅನುಗ್ರಹ ಬೇಕು, ದೇವರ ಅನುಗ್ರಹ ಇಲ್ಲದೆ ಯಾವುದು ಸಾಧ್ಯವಿಲ್ಲ ಎಂದರು.
ಗೌರವ ಕೋಶಾಧಿಕಾರಿ ಸೋಮನಾಥ್ ಪೂಜಾರಿ ಮಾತನಾಡುತ್ತಾ ” ಸಂಘವು ಇಷ್ಟರ ತನಕ ನಡೆಯುವಲ್ಲಿ ಹಲವಾರು ಜನರ ಸಹಕಾರವಿದೆ ಅವರನೆಲ್ಲ ನಾವು ಸ್ಮರಿಸಬೇಕು. ನಮ್ಮ ಹಿರಿಯರು ಸಂಘವನ್ನು ಸ್ಥಾಪಿಸುವಾಗ ಬಹಳಷ್ಟು ಶ್ರಮಪಟ್ಟಿದರು. ಈಗ ನಾವು ಒಗ್ಗಟ್ಟಾಗಿ ಸಂಘವನ್ನು ಮುನ್ನಡೆಸಬೇಕಿದೆ. ನಮ್ಮಲ್ಲಿ ಮತ ಭೇದವಿರಬೇಕು, ಮನಭೇದ ಇರಬಾರದು.ಮನ ಭೇದವಿದ್ದಾಗ ಸಂಘ ಆಗಲಿ ಮನೆಯಾಗಲಿ ಮುನ್ನಡೆಯುವುದು ಬಹಳ ಕಷ್ಟ. ಸಂಘದ ಚಟುವಟಿಕೆಗಳಿಗೆ ದಾನಿಗಳು ಮುಂದೆ ಬಂದು ದೇಣಿಗೆ ನೀಡಬೇಕು ಎಂದರು.
ಮಧುಕರ್ ಆರ್ ಕೋಟ್ಯಾನ್ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ರಾಜು ಎಸ್ ಪೂಜಾರಿ ” ನಮ್ಮ ಸಂಘ ಚಿತ್ರಪುವಿನ ಶ್ರೀ ವಿಠೋಬಾ ಬಾಲಲೀಲಾ ಭಜರ ಮಂದಿರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಚಿತ್ರ ಗ್ರಾಮದ ಸಮಾಜ ಬಾಂಧವರನ್ನು ಉಗ್ಗುಡಿಸಿ ಅವರ ಸುಖ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಆಸೆ ನಮ್ಮದು. ಇಂದು ಸನ್ಮಾನ ಸ್ವೀಕರಿಸಿದವರು ಸಂಘದ ಕಾರ್ಯ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿರುವರು, ಅವರಿಗೆ ಹಾಗೂ ಗೌರವ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು” ಎಂದರು.
ಗೌರವ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಜಿ ಪೂಜಾರಿ ಧನ್ಯವಾದ ಸಮರ್ಪಿಸಿದರು.
ಸಂಘದ ಜತೆ ಕಾರ್ಯದರ್ಶಿಗಳಾದ ಮಧುಕರ್ ಆರ್ ಕೋಟ್ಯಾನ್, ನಿಶಿತ್ ಎಸ್ ಕೋಟ್ಯಾನ್, ಜತೆ ಕೋಶಧಿಕಾರಿ ಕಿಶೋರ್ ಎಸ್ ಕರ್ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರಾಪು ಶ್ರೀ ವಿಠೋಭ ಬಾಲಾಲೀಲಾ ಭಜನಾ ಮಂಡಳಿಯ ಸಂಚಾಲಕರಾದ ಚಿತ್ರಾಪು ಬಿಲ್ಲವರ ಸಂಘ ಮುಂಬೈಯಲ್ಲಿ ನೆಲೆಸಿರುವ ಚಿತ್ರಾಪು ಗ್ರಾಮದ ಸಮಾಜ ಬಾಂಧವರ ಸುಖ – ದುಃಖಗಳಿಗೆ ಸ್ಪಂದಿಸುತ್ತಿದೆ.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭವ್ಯ ಶಿವನಂದ್ ಪೂಜಾರಿಗೆ ಶೇ 92.00 ಅಂಕ

Mumbai News Desk

ದಿ. ಕರ್ನಾಟಕ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ 28ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಜಗದಂಬಾ ಮಂದಿರದ 9 ನೇ ವಾರ್ಷಿಕ ಮಹೋತ್ಸವ

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ: ಸತತ ನಾಲ್ಕನೇ ವರ್ಷದ ರಕ್ತದಾನ ಶಿಬಿರದಲ್ಲಿ 182 ಯುನಿಟ್ ರಕ್ತ ಸಂಗ್ರಹದ ದಾಖಲೆ

Mumbai News Desk

ಚಿಣ್ಣರ ಬಿಂಬದ 21ನೆಯ ವಾರ್ಷಿಕ ಮಕ್ಕಳ ಉತ್ಸವ, ವಿಶ್ವಸ್ಥರ ಪದಗ್ರಹಣ.ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆಯ ಉದ್ಘಾಟನೆ.

Mumbai News Desk