
ವರದಿ: ಉಮೇಶ್ ಕೆ.ಅಂಚನ್.
ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ಮತ್ತದರ ಸಹ ಸಂಸ್ಥೆಗಳ ವತಿಯಿಂದ ಬೃಹತ್ ರಕ್ತದಾನ ಶಿಬಿರವು ಎ.21ರಂದು ಮಹಾರಾಷ್ಟ್ರದ ಮುಂಬಯಿ , ಪುಣೆ,ನಾಸಿಕ್, ನಾಗ್ಪುರ ಮುಂತಾದ ದೊಡ್ಡ ಪ್ರದೇಶದಲ್ಲಿ ಸೇರಿದಂತೆ ದೆಹಲಿ , ಮದ್ಯಪ್ರದೇಶ, ಕರ್ನಾಟಕ, ಗೋವಾ, ಗುಜರಾತ್ ರಾಜ್ಯಗಳು ಕೂಡಿ ಸುಮಾರು 120 ಕಡೆಗಳಲ್ಲಿ ನಡೆಯಿತು.




ಮುಂಬಯಿಯಲ್ಲಿ ಬಾಂದ್ರಾ ಪೂರ್ವದ ಖೇರ್ವಾಡಿ ನ್ಯೂ ಇಂಗ್ಲಿಷ್ ಹೈಸ್ಕೂಲ್ ವಠಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರವು ನಡೆದಿದ್ದು ಸುಮಾರು 7029 ರಷ್ಟು ಯೂನಿಟ್ ರಕ್ತ ಜಮಾ ಆಗಿದ್ದು ಪುಣೆಯಲ್ಲಿ 1020 ಯೂನಿಟ್ ಹಾಗೂ ಒಟ್ಟು ಮಹಾರಾಷ್ಟ್ರಾದ್ಯಂತ 14,327 ಯೂನಿಟ್ ರಕ್ತ ಸಂಗ್ರಹ ಆಗಿದೆ. ಈ ಪ್ರದೇಶಗಳಲ್ಲಿ ಒಟ್ಟು 166 ಬ್ಲಡ್ ಬ್ಯಾಂಕುಗಳು ಭಾಗವಹಿಸಿದ್ದವು.




ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರವು 1999 ರಿಂದ ಪ್ರತೀ ವರ್ಷ ನಡೆಯುತ್ತಿದ್ದು ಈ ತನಕ 2ಲಕ್ಷ ಯೂನಿಟ್ ರಕ್ತ ದಾನ ಮಾಡಿದೆ.