
ಧಾರ್ಮಿಕ ,ಸಾಮಾಜಿಕ ಸೇವಾ ಕಾರ್ಯಕ್ರಮ ಗಳೊಂದಿಗೆ ಕಳೆದ 15 ವರ್ಷಗಳಿಂದ ಶ್ರೀ ವರಮಹಾಲಕ್ಷ್ಮಿ ಪೂಜಾ ಯನ್ನು ಬಹಳ ಅದ್ದೂರಿಯಿಂದ ನಡೆಸುತ್ತಾ ಬಂದಿರುವ,ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. ಮುಂಡ್ಕೂರು ಇದರು ಅಧ್ಯಕ್ಷರಾದ ಹರೀಶ್ ಡಿ ಮೂಲ್ಯ ಮತ್ತು ಸರೋಜಾ ಹರೀಶ್ ಮೂಲ್ಯ ದಂಪತಿಯ ವೈವಾಹಿಕ ಜೀವನದ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಎಪ್ರಿಲ್ 22ರಂದು ಅಂದೇರಿ ಪಶ್ಚಿಮದ ವೀರ ದೇಸಾಯಿ ರೋಡಿನಲ್ಲಿರುವ ಕೋರ್ಟ್ ಹೋಟೆಲ್ ನ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು

ವೇದಮೂರ್ತಿ ಸಂತೋಷ್ ಭಟ್ ಚಾರ್ಕೋಪ್ ಅವರು ದಂಪತಿಗಳಿಗೆ ಶುಭ ಹಾರೈಸಿದರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಕ ವೇದಮೂರ್ತಿ ರಮೇಶ್ ವಾಗ್ಲೆ ದೊಂಬಿವಳಿ ಶುಭ ಆಶೀರ್ವಾದವನ್ನು ನೀಡಿ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಮಹೋತ್ಸವವನ್ನು ಆಚರಿಸುತ್ತಿರುವ ನಿಮ್ಮ ಪ್ರೀತಿ ತುಂಬಿದ ಜೀವನ ಶೈಲಿ ನಿರಂತರವಾಗಿ ಸುಖ, ಶಾಂತಿ ಸಮೃದ್ಧಿಯಿಂದ ಕೂಡಿರಲಿ , ನಿಮ್ಮ ಪರಿವಾರವನ್ನು ಶ್ರೀ ವರಮಹಾಲಕ್ಷ್ಮಿ ದೇವರು ಶ್ರೀ ರಕ್ಷೆ ಆಗಿರಲಿ ಎಂದು ಹಾರೈಸಿದರು.
ದಂಪತಿಗಳ ಪುತ್ರರಾದ ಶೂರಾಜ್ ಹರೀಶ್ ಮೂಲ್ಯ , ಚಿರಾಗ್ ಹರೀಶ್ ಮೂಲ್ಯ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. ಮುಂಡ್ಕೂರು ಇದರ ಸಂಚಾಲಕ ಕೃಷ್ಣ ಮೂಲ್ಯ ನಾಲಸೂಪರ,, ಅಮೂಲ್ಯ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ ವಾಮನ್ ಮೂಲ್ಯ ಅದ್ಯಪಾಡಿ, ಸಹಕಾರವಾಡಿ ನಿತ್ಯಾನಂದ ಆಶ್ರಮದ ಅಧ್ಯಕ್ಷ ರಘು ಮೂಲ್ಯ , ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಇದರ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ರತ್ನ ಕುಲಾಲ್ , ಸದಾಶಿವ ಡಿ ಮೂಲ್ಯ ಜಯಂತ್ ಸಾಲಿಯಾನ್, ದಂಪತಿಗಳಿಗೆ ಶುಭ ಹಾರೈಸಿದರು ಜ್ಯೋತಿ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು,
ಕಾರ್ಯಕ್ರಮದಲ್ಲಿ ದಂಪತಿಗಳ ಪರಿವಾರದವರು ಹಿತೈಷಿಗಳು ಹಾಗೂ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. ಮುಂಡ್ಕೂರು. ಪದಾಧಿಕಾರಿಗಳು ದಿನೇಶ್ ಬಂಗೆರ ಕಾರದಾ೦ಡ್ , ದಿನೇಶ್ ಮೂಲ್ಯ ಅಂದೇರಿ, ರೋಹಿದಾಸ್ ಬಂಜನ್ ನಾಲಾಸೂಪರ, ಶಂಕರ್ ಕುಲಾಲ್, ವಿಶ್ವನಾಥ್ ಬಂಗೇರ ,ಅರ್ಚನಾ ಎಸ್ ಕುಲಾಲ್,ಲೋಕೇಶ್ ಮೂಲ್ಯ ಗೂರೇಗಾವ್, ಕೇಶವ ಬಂಜನ್ ಜೋಗೇಶ್ವರಿ ,ಯಶೋಧರ್ ಬಂಗೇರ ಮೀರಾ ರೋಡ್, ಸುಕುಮಾರ್ ಸಾಲ್ಯಾನ್, ಕವಿತಾ ಸಾಲಿಯಾನ್ , ದೀಪ ಬಂಜನ್, ಮತ್ತಿತರರು ಉಪಸ್ಥಿತರಿದ್ದರು ,