





ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳನ್ನು ಬದುಕಿನಲ್ಲಿ ನಡೆಸಿದಾಗ ಜೀವನ ಸಾರ್ಥಕ : ದಿವಾಕರ ಶೆಟ್ಟಿಗಾರ್ ಗುರುಸ್ವಾಮಿ
ಮುಂಬಯಿ ಎ25. ಮಲಾಡ್ ಪಶ್ಚಿಮದ ಸಮಾಜ ಸೇವಕ, ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಯಾವುದು 49 ವರ್ಷಗಳ ಹಿಂದೆ ಸ್ಥಾಪಿಸಿರುವ ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ ಸಂಸ್ಥೆಯನ್ನು ಸ್ಥಾಪಿಸಿ ಧಾರ್ಮಿಕ ಸಾಮಾಜಿಕ ಸೇವಾಕಾರಿಗಳನ್ನು ನಡೆಸುತ್ತಾ ಬಂದಿದ್ದಾರೆ.
ಪ್ರತಿ ವರ್ಷ ಮಲಾಡ್ ಪಶ್ಚಿಮದ ಸೋಮವಾರ ಬಜಾರ್ ಶ್ರೀ ಪಾಟ್ಲಾದೇವಿ ಮಂದಿರದಲ್ಲಿ (ರಾಮ ಮಂದಿರ), ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅನ್ನದಾನ ಹಾಗೂ ರಾತ್ರಿ ಸಭಾ ಕಾರ್ಯಕ್ರಮ , ರಾತ್ರಿ ಯಕ್ಷಗಾನ ಪ್ರದರ್ಶನವನ್ನು ನಡೆಸುತ್ತಾ ಬಂದಿದ್ದಾರೆ
ಈ ವರ್ಷ 49ನೇ ವಾರ್ಷಿಕ ಮಹಾಪೂಜೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಎ 20 ನೇ ಶ್ರೀ ಪಾಟ್ಲಾದೇವಿ ಮಂದಿರ (ರಾಮ ಮಂದಿರ), ಸೋಮವಾರ ಬಜಾರ್, ಮಲಾಡ್ (ಪ), ಮುಂಬಯಿ ಇಲ್ಲಿ ನಡೆಯಿತು.
ಪೂರ್ವಾಹ್ನ ಪೂಜಾ ಕಾರ್ಯಕ್ರಮಗಳು ಮಧ್ಯಾಹ್ನ ಭಜನಾ ಕಾರ್ಯಕ್ರಮ, ಬಳಿಕ ಮಹಾ ಅಭಿಷೇಕ ಸಾಯಂಕಾಲ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ರಾತ್ರಿ ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಗಣ್ಯರ ಉಪಸ್ಥಿತಿ ಸಭಾ ಕಾರ್ಯಕ್ರಮ ನಡೆಯಿತು ಗೌರವ ಅತಿಥಿಗಳಾಗಿ ಈ ಸಂದರ್ಭದಲ್ಲಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಧರ್ಮದ ಶ್ರೀ ರವಿ ಸ್ವಾಮೀಜಿ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ಅಡ್ವಕೇಟ್ ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು. ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಅಡ್ವಕೇಟ್ ಜಗದೀಶ ಹೆಗ್ಡೆ. ಭಾರತ್ ಬ್ಯಾಂಕ್ ನ ನಿರ್ದೇಶಕ. ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯ ಧ್ಯಕ್ಷ ಸಂತೋಷ್ ಕೆ ಪೂಜಾರಿ , ಶ್ರೀ ಶಕ್ತಿ ಫೌಂಡೇಶನ್ ಮೀರಾ ರೋಡ್ ಅಧ್ಯಕ್ಷ ಶಾಲಿನಿ ಎಸ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ನವತಾರಾ ಕಲಾ ಮಂಡಳಿ ದಿವಾಕರ ಶೆಟ್ಟಿಗಾರ್ ಗುರುಸ್ವಾಮಿ ಮಾತನಾಡುತ್ತಾ ನಿರಂತರವಾಗಿ ಈ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳಿಗೆ ಭಕ್ತರು ವಿವಿಧ ರೀತಿಯ ಸಹಕರವನ್ನು ನೀಡುತ್ತಾ ಬಂದಿದ್ದಾರೆ, ಪ್ರತಿ ವರ್ಷ ಅಯ್ಯಪ್ಪ ಸ್ವಾಮಿಯ ಪೂಜೆಯ ಸಂದರ್ಭದಲ್ಲಿ ಕೂಡ ತುಳು ಕನ್ನಡಿಗರಲ್ಲದೆ ಅನ್ಯ ಭಾಷೆಗಳ ಸಹಕಾರ
ನೀಡುತ್ತಾ ಬಂದಿದ್ದಾರೆ , ಈ ವರ್ಷ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಅವರಿಂದ ಇನ್ನಷ್ಟು ಸಮಾಜ ಸೇವೆ ನಡೆಯಲಿ ಎಂದು ನಮ್ಮ ಆಶ್ರಯ ಎಂದು ನುಡಿದರು,
ಸನ್ಮಾನವನ್ನು ಸ್ವೀಕರಿಸಿದ ಸನ್ಮಾನಿತರೆಲ್ಲರೂ ಕೃತಜ್ಞತೆ ಸಲ್ಲಿಸುತ್ತಾ ನಮ್ಮ ಸಹಕಾರ ಸದಾ ಈ ಸಂಸ್ಥೆಯೊಂದಿಗೆ ಇದೆ ಎಂದು ನುಡಿದರು,
ಕಾರ್ಯಕ್ರಮವನ್ನು ರಂಗತಜ್ಞ ,ನಟ ನಿರ್ದೇಶಕ ಉಡುಪಿ ಗುಣಪಾಲ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ . ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಸಾಂತಾಕ್ರೂಜ್ ಇವರು *ಮೈಮೆದಪ್ಪೆ ಮಂತ್ರದೇವತೆ*
ಎಂಬ ತುಳು ಪ್ರಸಂಗವನ್ನು ಯಕ್ಷಗಾನ ಬಯಲಾಟ ಸೇವೆ ರೂಪದಲ್ಲಿ . ನಡೆಯಿತು,
ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಭಕ್ತಾದಿಗಳೆಲ್ಲರಿಗೂ ಶ್ರೀ ದೇವರು ಪ್ರಸಾದವನ್ನು ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ (ಪ), ಸಂಸ್ಥಾಪಕರಾದ
ದಿವಾಕರ ಶೆಟ್ಟಿಗಾರ್ ಗುರುಸ್ವಾಮಿ ಹಾಗೂ ಅಧ್ಯಕ್ಷರಾದ, ಹರಿಶ್ಚಂದ್ರ ಹೆಗ್ಡೆ (ಲೋಖಂಡವಾಲಾ) ನೀಡಿ ಗೌರವಿಸಿದರು
ಕಾರ್ಯಕ್ರಮದ ಯಶಸ್ವಿಗೆ ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ (ರಿ.), ಮಲಾಡ್ ಇದರ ಸರ್ವ ಸದಸ್ಯರು ಸಹಕರಿಸಿದರು
————–