July 23, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯಿಂದ  “ಶ್ರೀ ಶನೀಶ್ವರ ಮಹಾತ್ಮ” ತಾಳಮದ್ದಳೆ.







  ಶನಿಯ ಪ್ರವೇಶದಿಂದ ಬದುಕಿನ ಎಲ್ಲಾ ಅನುಭವ :ಪ್ರವೀಣ್ ಭೋಜ ಶೆಟ್ಟಿ

ಮೀರಾ ರೋಡ್ ಜು22.ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ ವತಿಯಿಂದ ಜು17ರಂದು ಮೀರಾ ರೋಡ್ (ಪೂರ್ವ) ಭಾರತಿ ಪಾರ್ಕ್, ಬಾಲಾಜಿ ಇಂಟರ್ನ್ಯಾಷನಲ್ ಹೋಟೆಲ್    ಬ್ಯಾಂಕ್ವೆಟ್ ಹಾಲ್   ನಲ್ಲಿ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ ಖ್ಯಾತ ಮಂಡಳಿ ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ಇವರಿಂದಪೂಜಾ ಸಹಿತ ತುಳು ಯಕ್ಷಗಾನ ತಾಳಮದ್ದಳೆ ” ಶ್ರೀ ಶನೀಶ್ವರ ಮಹಾತ್ಮ” ಪ್ರದರ್ಶನ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಸಿದ ಬಂಟರ ಸಂಘದ ಅಧ್ಯಕ್ಷರಾದ  ಪ್ರವೀಣ್ ಭೋಜ ಶೆಟ್ಟಿಯವರು ಪ್ರತಿಯೊಬ್ಬನ ಗೃಹಕ್ಕೆ  ಶನಿ ಪ್ರವೇಶ ಮಾಡುತ್ತಾನೆ. ಅದರಿಂದ  ಬದುಕಿನ ಎಲ್ಲಾ ಅನುಭವಗಳು ಆಗುತ್ತದೆ. ತಾಳಮದ್ದಳೆಯ ಮೂಲಕ ಶನಿ ದೇವರ ಬಗ್ಗೆ ಪೂರ್ಣ ಮಾಹಿತಿ ಮತ್ತೆ ಅನುಭವವಾಗುತ್ತದೆ. ಈ ತಂಡದಲ್ಲಿ ಪ್ರತಿಭಾವಂತ ಯುವ ಕಲಾವಿದರು ಸೇರಿಕೊಂಡು ಧಾರ್ಮಿಕ ವಿಚಾರಗಳನ್ನು ಸಮಾಜದ ಮುಂದೆಡುತ್ತಿದ್ದಾರೆ ಎಂದು ತಿಳಿಸಿದರು.

 ಈ. ಸಂದರ್ಭ ದಲ್ಲಿ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್,  ಪ್ರಾದೇಶಿಕಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಸಂಚಾಲಕ ಶಿವ ಪ್ರಸಾದ್ ಶೆಟ್ಟಿ ಮಾಣಿಗುತ್ತು.ಉಪ ಕಾರ್ಯಧ್ಯಕ್ಷ  ಅರವಿಂದ ಎ. ಶೆಟ್ಟಿ , ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ ,ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಸಾಂಸ್ಕೃತಿಕ  ಸಮಿತಿಯ ಕಾರ್ಯಧ್ಯಕ್ಷ ರಾಜೇಶ್ ಎಸ್. ಶೆಟ್ಟಿ

 ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ.ಯುವ ವಿಭಾಗ ಕಾರ್ಯಧ್ಯಕ್ಷ ವೃಷಬ್ ಕೆ. ಶೆಟ್ಟಿ , ಕದ್ರಿ ನವನೀತ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮೊಯೊಟ್ಟು ಪಾಲ್ಗೊಂಡಿದ್ದರು.

ಪ್ರಾದೇಶಿಕಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಸ್ವಾಗತಿಸಿದರು. 

ಪೂಜಾ ಕಾರ್ಯದ ಯಜಮಾನಿಕೆಯನ್ನು ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವಸಂತಿ ಶೆಟ್ಟಿ. ಮತ್ತು ಶಿವ ಶೆಟ್ಟಿ.ದಂಪತಿ ವಹಿಸಿದ್ದರು.

ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ, ಚಿತ್ರನಟ, ಬಾಬಾ ಪ್ರಸಾದ್ ಅರಸ ಕುತ್ಯಾರು ನಿರೂಪಿಸಿದರು.

  ತಾಳಮದ್ದಳೆಯಲ್ಲಿ  ಕಲಾವಿದರಗಳಾಗಿ ಭಾಗವತರಾಗಿ ಡಾ. ಪ್ರಖ್ಯಾತ್ ಶೆಟ್ಟಿ ಮತ್ತು .ಪದ್ಮನಾಭ ಶೆಟ್ಟಿಗಾ‌ರ್ ಪಕ್ಷಿ ಕೆರೆ. ದಯಾನಂದ ಶೆಟ್ಟಿಗಾ‌ರ್ ಮಿಜಾರ್‌.ಕದ್ರಿ ನವನೀತ ಶೆಟ್ಟಿ .ವಿಜಯ ಕುಮಾರ್ ಶೆಟ್ಟಿ ಮೊಯೊಟ್ಟು .ಸದಾಶಿವ ಆಳ್ವ ತಲಪಾಡಿ .ರವಿ ಭಟ್ ಪಡುಬಿದ್ರೆ .ಪ್ರಸನ್ನ ಶೆಟ್ಟಿ ಅತ್ತೂರುಗುತ್ತು .ಹೇಮಂತ್ ಶೆಟ್ಟಿ ಕಾವೂರು ಗುತ್ತು. ಗುರುತೇಜ ಶೆಟ್ಟಿ ಒಡಿಯೂ‌ರ್, ಶ್ರೀಪಾದ ಭಟ್ ಕಿನ್ನಿಗೋಳಿ  ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯಕ್ಷಗಾನ ಕಲಾಭಿಮಾನಿಗಳು 

ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಶನಿ ದೇವರಿಗೆ ಮಂಗಳಾರತಿ ನಡೆದ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು.

B. Dinesh Kulal

Mob.: 9821868674



Related posts

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗೆ ಚುನಾವಣಾ ದಿನಾಂಕ ಪ್ರಕಟ : ಜನವರಿ 15ರಂದು ಮತದಾನ, ಜ. 16ಕ್ಕೆ ಫಲಿತಾಂಶ

Mumbai News Desk

ತಿಂಗಳಾಯ ಮೂಲಸ್ಥಾನ ಸಭಾ, ಮುಂಬಯಿ ಶಾಖೆಯ ಮಹಿಳಾ ವಿಭಾಗದಿಂದ ಅದ್ದೂರಿಯ ‘ಮಹಿಳಾ ದಿನಾಚರಣೆ’ ಸಾಧಕಿಯರಿಗೆ ಸನ್ಮಾನ

Mumbai News Desk

ಸಾಂತಾಕ್ರೂಜ್ ಕನ್ನಡ ಸಂಘದ 68ನೇ ವಾರ್ಷಿಕ ಮಹಾಸಭೆ: ಸಮಾಜ ಸೇವೆಗೆ ನಿಸ್ವಾರ್ಥ ಮನೋಭಾವದ ಕರೆ

Mumbai News Desk

ವಸಾಯಿ ಕರ್ನಾಟಕ ಸಂಘ: ಅಧ್ಯಕ್ಷರಾಗಿ ಕರ್ನೂರು ಶಂಕರ್ ಆಳ್ವ, ಗೌರವಾಧ್ಯಕ್ಷರಾಗಿ ವಿಶ್ವನಾಥ್ ಪಿ. ಶೆಟ್ಟಿ ಆಯ್ಕೆ

Mumbai News Desk

ಸಾಲಿಯಾನ್ ಮೂಲಸ್ಥಾನ ಸಭಾ (ಎರ್ಮಾಳು ಬಡಾ) ಮುಂಬೈ ಶಾಖೆಯ ವಾರ್ಷಿಕ ಮಹಾಸಭೆ

Mumbai News Desk

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 94ನೇ ಜನ್ಮದಿನಾಚರಣೆ 

Mumbai News Desk