
ಮುಂಬಯಿ, ಎ.25 ; ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಎಸ್. ಶೆಟ್ಟಿಯವರ ಮುಂದಾಳತ್ವದಲ್ಲಿ ಮೀರಾರೋಡ್ ಪೂರ್ವದ ಕಾಶಿಗಾವ್ ನಲ್ಲಿರುವ ಶ್ರೀ ರಾಧ ಕೃಷ್ಣ ಚಾರಿಟೇಬಲ್ ಫೌಂಡೇಷನ್ ಸಂಸ್ಥೆಯ ಶ್ರೀ ರಾಧ ಕೃಷ್ಣ ವೃದ್ಧಾಶ್ರಮಕ್ಕೆ ಭೇಟಿ ದಿನನಿತ್ಯದ ಅಗತ್ಯವಸ್ತುಗಳನ್ನು ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಗುಣಾ ಶೆಟ್ಟಿ , ಅಮಿತಾ ಕೆ. ಶೆಟ್ಟಿ , ಉಪ ಕಾರ್ಯಾಧ್ಯಕ್ಷೆ ಸುಜಾತ ಶೆಟ್ಟಿ , ಜೊತೆ ಕೋಶಾಧಿಕಾರಿ ಶಿಲ್ಪಾ ಶೆಟ್ಟಿ , ರಂಜನಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
