September 6, 2026
Mumbai News Kannada
ಮುಂಬಯಿ

ಕುಮಾರ ಕ್ಷತ್ರಿಯ ಸಂಘ ಮುಂಬಯಿ 60ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ವಾರ್ಷಿಕ ಮಹಾಸಭೆ





ಯುವಕರಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಬದ್ಧತೆ ಅಗತ್ಯ: ಎಂ.ಡಿ.ರಾವ್‌,

   ಮುಂಬಯಿ :   ಕುಮಾರ ಕತ್ರಿಯ ಸಂಘ ಮುಂಬೈದ 60 ವಾರ್ಷಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆಯು ಫೆ. 22 ರಂದು ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠ ಮಧ್ವಭವನ ವಿಶ್ವೇಶತೀರ್ಥ ಸಭಾಗೃಹದಲ್ಲಿ ನಡೆಯಿತು.

ಕುಮಾರ ಕತ್ರಿಯ ಸಂಘದ ಅಧ್ಯಕ್ಷ ಎಮ್.ಡಿ. ರಾವ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಶಾಲು ಎಂ. ರಾವ್ ಅವರ ನೇತೃತ್ವದಲ್ಲಿ  ಪೇಜಾವರ  ಮಠದ ಪುರೋಹಿತರಾದ ಹರಿ ಭಟ್ ಅವರಿಂದ ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾರಂಭದಲ್ಲಿ ಗಣಪತಿಹೋಮ, ಬಳಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಸತ್ಯನಾರಾಯಣಮಹಾಪೂಜೆನೆರವೇರಿತು. ಬಳಿಕ ಸಮಾಜದ ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮವು ಸಂಭ್ರಮ ದಿಂದ ಜರಗಿತು.

ಮಧ್ಯಾಹ್ನ ಜರಗಿದ ಕುಮಾರ ಕ್ಷತ್ರಿಯ ಸಂಘ ಮುಂಬಯಿಯ ಅಧ್ಯಕ್ಷ ಎಂ. ಡಿ. ರಾವ್ ಹಾಗೂ  ಶಾಲು ಎಂ. ರಾವ್ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನೆರವೇರಿತು. ಆರಂಭದಲ್ಲಿ ಮಹಿಳಾ ಬಳಗದ ಸದಸ್ಯರು ಗಣೇಶಸ್ತುತಿಗೈದರು. 

. ಸಂಘದ ಅಧ್ಯಕ್ಷ ಎಂ. ಡಿ. ರಾವ್ ಸ್ವಾಗತಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ ಕೋಶಾಧಿಕಾರಿ ಶಾಂತಾರಾಮ್ ಜಿ. ಮಾಂಗಾಡ್ ಸಭೆಯಲ್ಲಿ ಮಂಡಿಸಿದರು. ಬಳಿಕ ಇದೇ ಸಮಾಜ ಬಾಂಧವರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಸತ್ಕರಿಸಲಾಯಿತು.

ಅಧ್ಯಕ್ಷರಾದ ಎಂ. ಡಿ.ರಾವ್ ಅವರು ಆಗಮಿಸಿದ ಎಲ್ಲ ಗಣ್ಯರಿಗೆ ಹೃತ್ತೂರ್ವಕ ವಂದನೆ ಸಲ್ಲಿಸಿ ಸದಸ್ಯರನ್ನು ವೇಶಿಸಿ ಮಾತನಾಡಿ, ಸಮಾಜದ ಯುವಜನದಲ್ಲಿ ಸಾಮಾಜಿಕ ಕಳಕಳಿ, ಬದ್ದತೆ, ಒಕ್ಕೂಟ ಪ್ರಜ್ಞೆ ಬೆಳೆಸುವ ಉದ್ದೇಶ ಮುಖ್ಯವಾಗಿದೆ. ಅಂತಹ ಯುವಕರನ್ನು ಮುಖ್ಯ ವಾಹಿನಿಗೆತೆರಬೇಕಾದರೆ ನಮ್ಮಲ್ಲಿ ಸಂಘಟನೆಯ ಸ್ವಂತ ಕಚೇರಿಯ ಆಗತ್ಯತೆಯಿದೆ. ಇಂತಹ ಕೇಂದ್ರ ಬಿಂದು ಜಾಗದಲ್ಲಿ ನಾವೆಲ್ಲ ಒಂದೆಡೆ ಸೇರುವ ಮೂಲಕ ನಮ್ಮ ಕಾರ್ಯಕ್ರಮಗಳು ಉತ್ಸವವಾಗಿ ಪರಿವರ್ತನೆಗೊಳ್ಳಲು ಸಾಧ್ಯ. ಸಾಮರಸ್ಯದ ಪ್ರತೀಕವಾಗಿ ಅರಿತು ಬಾಳುವ ಮೂಲಕ ಕಾಲದ ಜತೆಗೆ ಸಂಘಟನೆಗೆ ಯುವಶಕ್ತಿ ಕೊಡುಗೆಯಾಗಬೇಕು. ಸಹಬಾಳ್ವೆ ಸದಾಶಯ ಧೈಯದೊಂದಿಗೆ ಆತ್ಮಪ್ರಜ್ಞೆ ಸಾಂಸ್ಕೃತಿಕ ಬದುಕಿನೊಂದಿಗೆ ಬಾಳುವ ಮೂಲಕ ಸಂಸ್ಥೆಯನ್ನು ಮತ್ತಷ್ಟು ಒಗ್ಗಟ್ಟಾಗಿ ಬೆಳೆಸೋಣ ಎಂದು ನುಡಿದು, ತಮ್ಮ ದಾಂಪತ್ಯ ಜೀವನದ 50ನೇ ಸಂವತ್ಸರದ ಅಂಗವಾಗಿ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಬದುಕಿನ ಸಿಹಿ ಮತ್ತು ಕಷಿ ಘಟನೆಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.

ಕಾರ್ಯನಿರತ ಅಧ್ಯಕ್ಷ ಶಾಲು ಎಂ. ರಾವ್ ಮಾತನಾಡಿ, ನಮ್ಮ ಕಾರ್ಯ ಚಟುವಟಿಕೆಗಳು ಗುರಿ ಮುಟ್ಟಬೇಕಾದರೆ

ಅದಕ್ಕೆ ಒಂದು ಸಮೀಕರಣದ ವ್ಯವಸ್ಥೆ ಬೇಕು. ಅದಕ್ಕೆ ಪೂರಕವಾಗಿ ಮಹಾನಗರದಲ್ಲಿ ಸಮಾಜ ಬಾಂಧವರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ರೂಪುರೇಷೆಗೆ ಕಚೇರಿ ಎಂಬ ಕೇಂದ್ರ ಬಿಂದುವಿನ ಅಗತ್ಯವಿದೆ. ಆ ಮೂಲಕ ನಮ್ಮ ಕಾರ್ಯಕ್ರಮಗಳನ್ನು ವಿಸ್ತರಿಸಲು ಸಾಧ್ಯವಿದೆ. ಜತೆಗೆ ಹೊಸ ಪೀಳಿಗೆ ನಮ್ಮಸಂಸ್ಥೆಯನ್ನು ಮುಂದೆಕೊಂಡೊಯ್ಯಲು ಸಾಧ್ಯ ಈ ಮಹತ್ವದ ಕೆಲಸಕ್ಕೆ ಎಲ್ಲರೂ ಕೈಜೋಡಿಸುವಂತೆ ವಿನಂತಿಸಿ, ಸಂಘದ

ಕಾರ್ಯದರ್ಶಿ ಉಮಾನಾಥ್ ರಾವ್ ಮತ್ತು ಕೋಶಾಧಿಕಾರಿ ಶಾಂತಾರಾಮ್ ಮಾಂಗಡ್ ರವರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪರಿಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಲಘು ಉಪಹಾರ ಹಾಗೂ ದುಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕುಮಾರ ಕತ್ರಿಯ ಸಂಘ ಮುಂಬಯಿ ಉಪಾಧ್ಯಕ್ಷತೆ ಮಾಧವ ರಾವ್, ಗೌ. ಪ್ರ. ಕಾರ್ಯದರ್ಶಿ

ಉಮಾನಾಥ ವಿ. ರಾವ್, ಕೋಶಾಧಿಕಾರಿ ಕಾರ್ಯದರ್ಶಿ ಸುರೇಂದ್ರ ಎಚ್. ಎ. ಜತೆ ಕೋಡಾಧಿಕಾರಿ ಸಾಗರ ಪಿ. ರಾವ್ ಮತ್ತು ಸಮಿತಿ ಸದಸ್ಯರಾದ ರವಿ ಎಸ್. ಕಲ್ನಾಡ್, ಪ್ರಶಾಂತ್ ಆರ್. ರಾವ್, ಅನುಪ್ ರಾವ್, ಅನಿಲ್ ಜಿ. ರಾವ್, ಪ್ರಶಾಂತ್ ಪಿ. ನಾಥ್, ರಾಮದಾಸ್ ರಾವ್, ತರುಣ್ ಎಸ್. ರಾವ್, ಜಯೇಶ್ ಚಂದ್ರಗಿರಿ, ಸಂತೋಷ್ ವಿ. ರಾವ್, ಇಂದುಮತಿ ಎ. ರಾವ್. ಕವಿತಾ ರೋಷನ್, ವಿಶಾಲಾಕ್ಷಿ ಎ. ಚಂದ್ರಗಿರಿ, ಪವಿತಾ ಎಸ್. ರಾವ್, ಬೀನಾ ಎಸ್. ರಾವ್, ರೇಖಾ ಸಾವಂತ್, ರಮ್ಯಾ ಎಸ್. ಮಾಂಗಡ್ ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕವಿತಾ ರೋಹನ್ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಗೌ. ಪ್ರ.ಕಾರ್ಯದರ್ಶಿ ಉಮನಾಥ್ ವಿ. ರಾವ್ ವಂದಿಸಿದರು.



Related posts

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ ಯುವ ವಿಭಾಗದ ವತಿಯಿಂದ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

Mumbai News Desk

84 ವರ್ಷಗಳ ಇತಿಹಾಸವುಳ್ಳಹಿರಿಯ ಜಾತೀಯ ಸಂಸ್ಥೆ ಸಾಫಲ್ಯ ಸೇವಾ ಸಂಘದ 70 ನೇ ವಾರ್ಷಿಕ ಮಹಾಸಭೆ.

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ

Mumbai News Desk

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ವಿದ್ಯಾದಾಯಿನಿ ಸಭಾ ಮುಂಬಯಿ – ಶತ ಸಂಭ್ರಮದ ಉದ್ಘಾಟನೆ.

Mumbai News Desk