
ಹೆಜಮಾಡಿ ಕೋಡಿ, ಫಲಿಮಾರು ಹೊಸಾಗ್ಮೆ ಶ್ರೀ ಸೀತಾರಾಮ ಭಜನಾ ಮಂದಿರದ ಶ್ರೀ ಸೀತಾರಾಮ ದೇವರ ಮೂರ್ತಿ ಪ್ರತಿಷ್ಟಾ ದಿನಾಚರಣೆ, 90ನೇ ವಾರ್ಷಿಕ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮವು ಮೇ 1 ರಂದು ನಡೆಯಲಿದೆ.
ಕಾರ್ಯಕ್ರಮಗಳ ವಿವರ :
ಮೇ 1, ಬುಧವಾರ ಬೆಳ್ಳಿಗ್ಗೆ 4.30 ಗಂಟೆಗೆ ಗಣಹೋಮ, ತೋರಣ ಸ್ಥಾಪನ
ಬೆಳ್ಳಿಗ್ಗೆ 5 ಗಂಟೆಗೆ ಪ್ರಾಥನೆ
ಗಂಟೆ 6ಕ್ಕೆ ಪುಣ್ಯಾಹ, ಪಂಚಾಮ್ರತ, ಅಭಿಷೇಕ, ನವಕ ಪ್ರಧಾನ ಹೋಮ, ಅಭಿಷೇಕ
ಬೆಳ್ಳಿಗ್ಗೆ 6.15ಕ್ಕೆ ಏಕಾಹ ಭಜನಾ ಕಾರ್ಯಕ್ರಮ ಆರಂಭ.
ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಹೂವಿನ ಪೂಜೆ
ಮಧ್ಯಾಹ್ನ 12.30ಕ್ಕೆ ಪಲ್ಲಪೂಜೆ, ಪ್ರಸಾದ ವಿತರಣೆ
ಮಧ್ಯಾಹ್ನ 1ರಿಂದ 3ರ ತನಕ ಮಹಾ ಅನ್ನ ಸಂತರ್ಪಣೆ.
ಭಕ್ತಾಭಿಮಾನಿಗಳು ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು -ಮನ -ಧನಗಳಿಂದ ಸಹಕರಿಸಿ, ಪುಣ್ಯ ಕಾರ್ಯವನ್ನು ಯಶಸ್ವಿಯಾಗಿ ಜರಗಿಸಿ ಶ್ರೀ ಸೀತಾರಾಮ ದೇವರ ಕ್ರಪೆಗೆ ಪಾತ್ರರಾಗುವಂತ್ತೆ ಶ್ರೀ ಫಲಿಮಾರು ಮೊಗವೀರ ಮಹಾ ಸಭಾ ಫಲಿಮಾರು, ಫಲಿಮಾರು ಮೊಗವೀರ ಸಭಾ, ಮುಂಬಯಿ, ಶ್ರೀ ಸೀತಾರಾಮ ಸೇವಾ ಸಮಿತಿ ಫಲಿಮಾರು, ಫಲಿಮಾರು ಮೊಗವೀರ ಮಹಿಳಾ ಸಭಾ, ಶ್ರೀ ಸೀತಾರಾಮ ಭಜನಾ ಮಂದಿರ ಫಲಿಮಾರು, ಇದರ ಪದಾಧಿಕಾರಿಗಳು, ಸದಸ್ಯರು, ಅರ್ಚಕ ವೃಂದ ವಿನಂತಿಸಿಕೊಂಡಿದ್ದಾರೆ.