24.7 C
Karnataka
April 3, 2025
ಪ್ರಕಟಣೆ

ಮೇ 4 ಮತ್ತು 5ರಂದು ನಿಟ್ಟೂರು ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವ.



ನಿಟ್ಟೂರು ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವ ಮತ್ತು ಮಹಾಅನ್ನಸಂತರ್ಪಣೆ ಇದೇ ಮೇ ತಿಂಗಳ ದಿನಾಂಕ 4 ಮತ್ತು 5 ರಂದು ನಡೆಯಲಿದೆ. ದಿನಾಂಕ 4 ರ ಶನಿವಾರ ಬೆಳಿಗ್ಗೆ 7.30ಕ್ಕೆ ಗಜ ಕಂಬ ಮೂಹೂರ್ತ,10.30ಗೆ ಮಹಾಚಪ್ಪರದ ಆರೋಹಣ,12 ಗಂಟೆಗೆ ಮಹಾಪೂಜೆ,12.30 ಯಿಂದ 3 ರ ವರೆಗೆ ಮಹಾಅನ್ನಸಂತರ್ಪಣೆ ನಡೆಯಲಿದೆ.


ಅಂದು ಸಂಜೆ 4.30ಕ್ಕೆ ದೈವಗಳ ದರ್ಶನ, 5.30 ಗಂಟೆಗೆ ದೈವಸ್ಥಾನದಿಂದ ಮುಖಮೂರ್ತಿ ಭಂಡಾರಗಳನ್ನು ಭವ್ಯ ಮೆರವಣಿಗೆಯಲ್ಲಿ ಮಹಾಚಪ್ಪರಕ್ಕೆ ತಂದು 7.30 ಕ್ಕೆ ಚಪ್ಪರದಲ್ಲಿ ಮಹಾ ಪೂಜೆ ನಡೆಯಲಿದೆ. ಅಂದು ರಾತ್ರಿ 10 ರಿಂದ ಶ್ರೀ ಬಬ್ಬುಸ್ವಾಮಿ ದೈವದ ನೇಮ, ರಾತ್ರಿ 1.30 ಗಂಟೆಯಿಂದ ಶ್ರೀ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.
ಮೇ 5 ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಧೂಮಾವತಿ ಬಂಟ ದೈವಗಳ ನೇಮ,1ಗಂಟೆಗೆ ಮಹಾಗುಳಿಗಧ್ವಯ ದೈವಗಳ ನೇಮ, ಸಂಜೆ 4 ಗಂಟೆಗೆ ಕೊರಗಜ್ಜ ದೈವದ ನೇಮ ನಡೆಯಲಿದೆ. ಈ ಎಲ್ಲಾ ಮಹಾದೇವತಾ ಕಾರ್ಯಕ್ರಮಕ್ಕೆ ಊರ ಪರವೂರ ಭಕ್ತಾದಿಗಳು ಆಗಮಿಸಿ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ನಿಟ್ಟೂರು ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಪ್ರ. ಕಾರ್ಯದರ್ಶಿ ಶ್ರೀ ಸುರೇಂದ್ರ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..

Mumbai News Desk

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಡಿ.30 ಕ್ಕೆ 26ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ಜ 5:೮೪ ನೇ ವಾರ್ಷಿಕ ಮಿಲನ ‘ಸಾಫಲ್ಯ -೨೦೨೫’ 

Mumbai News Desk

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk

ಕರ್ನಾಟಕ ಸಂಘ ಕಲ್ಯಾಣ: ಮಾ. 9ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಅ. 25, ತುಳು ವಲ್ ಫೇರ್  ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ

Mumbai News Desk