
ಒಡಿಯೂರು ಶ್ರೀ ಕ್ಷೇತ್ರದಲ್ಲಿ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಸವಿನೆನಪು ಶಾಶ್ವತವಾಗಿ ಉಳಿಯುವಂತ ಯೋಜನೆ ರೂಪಿಸುತ್ತೇವೆ: ಕಡಂದಲೆ ಪರಾರಿ ನ್ಯಾ. ಪ್ರಕಾಶ್ ಎಲ್ ಶೆಟ್ಟಿ,
ಚಿತ್ರ ವರದಿ – ದಿನೇಶ್ ಕುಲಾಲ್.
ಮುಂಬಯಿ:- ಕೆಲವೇ ದಶಕಗಳ ಹಿಂದೆಕುಗ್ರಾಮ ವಾಗಿದ್ದ ಒಡಿಯೂರು ಗ್ರಾಮವನ್ನು ಶ್ರೀ ಗುರುದೇವಾನಂದಸ್ವಾಮೀಜಿಯವರು ತಮ್ಮ ಆಧ್ಯಾತ್ಮಿಕ ಸಾಧನೆಯ ಮೂಲಕ ಸುಗ್ರಾಮವಾಗಿ ಲಕ್ಷಾಂತರ ಭಕ್ತರ ಕಷ್ಟಗಳ, ದುಃಖಗಳ ನಿವಾರಣೆಗೆ ಮಾರ್ಗದರ್ಶಕರಾಗಿ ಪೂರ್ತಿ ಗ್ರಾಮವನ್ನು ಅಭಿವೃದ್ಧಿಗೊಳಿಸಿದ ಮಹಾನ್ ಚಿಂತಕರು,ಶ್ರೀ ಗುರುದೇವದತ್ತ ಸಂಸ್ಥಾನಮ್ ಮೂಲಕ ಜಾತಿ. ಧರ್ಮ ಭಾಷೆಯನ್ನು ತಾರತಮ್ಯ ಇಲ್ಲದೆ ಸಾಮಾಜಿಕ. ಶೈಕ್ಷಣಿಕ. ಗ್ರಾಮ ಅಭಿವೃದ್ಧಿ ಯೋಜನೆ. ಗೋ ಸುರಕ್ಷಣಾ ಕೇಂದ್ರ . ತುಳು ಭಾಷೆಯನ್ನು ವೃದ್ಧಿಸುವುದಕ್ಕಾಗಿ ಕ್ಷೇತ್ರದ ಕೆಲಸ ಮಹತ್ವರಾವಾಗಿದೆ. ಭಕ್ತರಿಂದ ಬಂದ ಎಲ್ಲಾ ರೀತಿಯ ಸೇವೆಗಳನ್ನು ಭಕ್ತರಿಗೆ ನೀಡುವ ಅದ್ಭುತ ಕೆಲಸ ನಡೆಯುತ್ತಿದೆ. ಅಲ್ಪಸಮಯದಲ್ಲಿ ಅಭಿವೃದ್ಧಿಗೊಂಡ ಕ್ಷೇತ್ರ ಇನ್ನೊಂದು ಇರುವುದು ಅಸಾಧ್ಯ. 25 ಗಳಿಂದ ಬಹಳಷ್ಟು ಅಭಿವೃದ್ಧಿಯ ಗೊಂಡಿದೆ . ಹಲವಾರು ಯೋಜನೆಯ ಮೂಲಕ ಅಭಿವೃದ್ಧಿಯನ್ನು ಗೊಳಿಸಿದ ಸ್ವಾಮೀಜಿಯವರು, ಮಹಾರಾಷ್ಟ್ರದ 25 ವರ್ಷಗಳ ಹಿಂದೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕವನ್ನು ಪ್ರಾರಂಭಿಸುವ ಮೂಲಕ ಈ ರಾಜ್ಯದ ಭಕ್ತರು ಒಡಿಯೂರು ಕ್ಷೇತ್ರದ ಅಭಿವೃದ್ಧಿಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟವರು. ಇದೀಗ ಈ ಸಂಸ್ಥೆಗೆ 25 ವರ್ಷಗಳು ಪೂರ್ತಿ ಗೊಳ್ಳುವ ಸಂದರ್ಭದಲ್ಲಿ ಇಲ್ಲಿಯ ಗುರುಭಕ್ರನೆಲ್ಲರನ್ನು ಒಗ್ಗೂಡಿಸಿ ರಜತ ಸಂಭ್ರಮ ಆಚರಣೆಯನ್ನು ಧಾರ್ಮಿಕ .ಸಾಮಾಜಿಕ .ಶೈಕ್ಷಣಿಕ ಸೇವಾ ಕಾರ್ಯಗಳ ಮೂಲಕ. ಕ್ಷೇತ್ರದ ಪರಿಚಯದೊಂದಿಗೆ ಜ್ಞಾನ ವೃದ್ದಿಸುವ ಬರಗಳು. ಗುರುಗಳ ಮತ್ತು ಕ್ಷೇತ್ರಗಳು ಭಕ್ತರ ಅನುಭವದ ಬರಗಳನ್ನು ಹೊಂದಿರುವ ಗ್ರಂಥ. ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನಿಧಿ ಸಮರ್ಪಣೆ. ಇತ್ಯಾದಿ ಹಲವು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದ್ದು ಅದರೊಂದಿಗೆ ಶ್ರೀ ಕ್ಷೇತ್ರ ಒಡಿಯೂರು ನಲ್ಲಿ ಮಹಾರಾಷ್ಟ್ರ ಘಟಕದ ರಜತ ಸಂಭ್ರಮದ ಸವಿನೆನಪು ಶಾಶ್ವತ ಆಗುವ ಮಹತ್ವರಾ ಯೋಜನೆಯನ್ನು ರೂಪಿಸಿದ್ದೇವೆ ಎಂದು ಒಡಿಯುವರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ರಜತ ಸಂಭ್ರಮದ ಕಾರ್ಯ ಧ್ಯಕ್ಷ ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ, ನುಡಿದರು.
ಅವರು ಮೇ 1ರಂದು”ಹೋಟೆಲ್ ಸರೋಜ್ & ಸ್ವೀಟ್ ಮಾರ್ಟ್,” ಸುಮನ್ ನಗರ, ಚೆಂಬೂರ್, ಇಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹರಾಷ್ಟ್ರ ಘಟಕದ ರಜತ ಸಂಭ್ರಮದ ಆಯೋಜನೆಯ ಬಗ್ಗೆ ನಡೆದ ಪತ್ರಿಕ ಗೋಷ್ಠಿಯಲ್ಲಿ ಮಾತನಾಡಿದರು.
ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪ್ರೇರಣೆಯಂತೆ 25 ವರ್ಷಗಳ ಹಿಂದೆ ಈ ಘಟಕ ಪ್ರಾರಂಭ ಆದ ಸಂದರ್ಭದಲ್ಲಿ ಅಧ್ಯಕ್ಷನಾಗಿ ಸೇವೆ ಮಾಡುವ ಸೌಭಾಗ್ಯ ನನಗೆ ಒದಗಿ ಬಂದಿದೆ ಆ ಬಳಿಕ ಭಾಸ್ಕರ್ ಶೆಟ್ಟಿ ಕಲ್ಯಾಣ್ ನ್ಯಾ. ಆರ್ ಡಿ ಸುವರ್ಣ. ನ್ಯಾ. ಕೃಷ್ಣ ಎಲ್ ಶೆಟ್ಟಿ . ಪ್ರಸ್ತುತ ದಾಮೋದರ್ ಶೆಟ್ಟಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸು ಅವರೊಂದಿಗೆ ಮತ್ತಿತರ ಜವಾಬ್ದಾರಿತ ಪದಾಧಿಕಾರಿಗಳು ಯ ಈ ಘಟಕವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿಕೊಂಡರು. ಅದರಂತೆ ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಹಾಸಿನಿ ಎಸ್ ಶೆಟ್ಟಿ. ರೇವತಿ ವೈ ಶೆಟ್ಟಿ. ಇದೀಗ ಶ್ವೇತ ಚಂದ್ರಹಾಸ್ ರೈ ಇವರೆಲ್ಲರ ತಂಡಗಳು ಎರಡುವರೆ ದಶಕಗಳಿಂದ ಧರ್ಮ ಜಾಗೃತಿಯ ಸೇವಾ ಕಾರ್ಯಗಳಿಗೆ ತಮ್ಮ ಬದುಕನ್ನು ಮುಡಿಪಾಗಿರಿಸಿಕೊಂಡಿದ್ದಾರೆ ಅವರೆಲ್ಲರು ನಿಸ್ವಾರ್ಥದ ಗುರು ಸೇವೆಯಿಂದಾಗಿ ಈ ಸಂಸ್ಥೆ ಬೇರೆಲ್ಲ ಸಂಸ್ಥೆಗಳಿಂದ ಭಿನ್ನವಾಗಿ ಸೇವೆಯಲ್ಲಿ ತೊಡಗಿಕೊಂಡಿದೆ. ಸ್ವಾಮೀಜಿಯವರು ಮಹಾರಾಷ್ಟ್ರದ ಭಕ್ತರನ್ನು ನಿರಂತರವಾಗಿ ಸಂಪರ್ಕವೇರಿಸುವ ಚಿಂತನೆಯಿಂದ ಪ್ರತಿ ವರ್ಷ ಮುಂಬೈಗೆ ಆಗಮಿಸಿ, ಧಾರ್ಮಿಕ. ಶೈಕ್ಷಣಿಕ ಮತ್ತು ಪ್ರತಿ ಭಕ್ತರನ್ನು ಧರ್ಮ ಜಾಗೃತಿಗಾಗಿ ಪ್ರವಚನಗಳನ್ನು ಮಾಡುತ್ತಾ ಅವರ ಕಷ್ಟ ದುಃಖಗಳಿಗೆ ಮಾರ್ಗದರ್ಶಕರಾಗಿ. ಸೇವೆಯನ್ನು ಸ್ವಾಮೀಜಿಯವರು ಮಾಡುತ್ತಾ ಬಂದಿದ್ದಾರೆ.ಈ ವರ್ಷ ಮಹಾರಾಷ್ಟ್ರ ಘಟಕಕ್ಕೆ 25 ವರ್ಷ ಪೂರ್ತಿ ಗೊಳ್ಳುವ ಸಂದರ್ಭದಲ್ಲಿ ಭಕ್ತರ ಅನುಭವಗದ ಬರಹಗಳನ್ನು ಶಾಶ್ವತವಾಗಿ ಉಳಿಯುವಂತೆ ಧಾರ್ಮಿಕ ಗ್ರಂಥವನ್ನು ಪ್ರಕಟಿಸು ಮಹಾನ್ ಉದ್ದೇಶ ನಮ್ಮಲ್ಲಿದೆ ಈ ಗ್ರಂಥದಲ್ಲಿ ಕ್ಷೇತ್ರಕ್ಕೆ ದೇಣಿಗೆ ನೀಡಿದ ದಾನಿಗಳ ಭಾವಚಿತ್ರಗಳು. ಅವರ ಕೊಡುಗೆಗಳನ್ನು ನೆನಪಿಸು ಉದ್ದೇಶ ಕೂಡ ಇದೆ. ಅದಕ್ಕಾಗಿ ಈಗಾಗಲೇ ಸಂಪಾದಕ ಮಂಡಳಿಯನ್ನು ರಚಿಸಿದ್ದೇವೆ. ಸೇವಕರ್ತರಿಗೆ ಗೌರವ ಇತ್ಯಾದಿ ಕಾರ್ಯಕ್ರಮಗಳು ರಚಿತ ಮಹೋತ್ಸವದ ಸಂದರ್ಭದಲ್ಲಿ ನಡೆಯಲಿದೆ. ಇದಕ್ಕಾಗಿ ಗುರುಭಕ್ತರರೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ತಮ್ಮ ಅಮೂಲ್ಯ ಸಮಯಗಳನ್ನು ನೀಡಿ ಎಲ್ಲರ ಸಭಾಗ್ಯತ್ವದಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ರೂಪಿಸುತ್ತೇವೆ ಎಂದು ನುಡಿದರು.
ಮಹಾರಾಷ್ಟ್ರ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪೇಟೆ ಮನೆ ಪ್ರಕಾಶ್ ಶೆಟ್ಟಿ ಅವರು ಸ್ವಾಗತಿಸಿ ಒಡಿಯೂರು ಕ್ಷೇತ್ರದ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡುತ್ತಾ ಕ್ಷೇತ್ರ ಯಾವ ರೀತಿಯಲ್ಲಿ ಅಭಿವೃದ್ಧಿ ಗೊಂಡಿದೆ. ಅಲ್ಲಿ ನಡೆಯುವ ಧರ್ಮ ಜಾಗೃತಿಗಳ ಕೆಲಸ ಕಾರ್ಯಗಳು. ಸ್ವಾಮೀಜಿಯವರ ಮಹತ್ತರವಾದ ಚಿಂತನೆಗಳು. ಕಳೆದ 25 ವರ್ಷಗಳಿಂದ ಈ ನಗರಕ್ಕೆ ಆಗಮಿಸಿ ಸಾವಿರಾರು ಭಕ್ತರಿಗೆ ಆಧ್ಯಾತ್ಮಿಕತೆಯ ನಡೆಯಲ್ಲಿ ನಡೆಯಲು ಪ್ರೇರಣೆ ಶಕ್ತಿಯಾಗಿರುವ ವಿಚಾರಗಳನ್ನು. ಹಲವು ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ತೊಂದರೆಗಳಿಗೆ ಪರಿಹಾರ ನೀಡಿದ ವಿಚಾರಗಳನ್ನು ತಿಳಿಸುತ್ತಾ, ಮಹಾರಾಷ್ಟ್ರಟಕದ 25ನೇ ಸಂಭ್ರಮಾಚರಣೆಯನ್ನು ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಿವ ಆಚರಿಸಲು ಸಮಿತಿಯನ್ನು ಕೂಡ ರಚಿಸಲಾಗಿದೆ ಮಹಾರಾಷ್ಟ್ರ ಘಟಕ ಪ್ರಾರಂಭದ ಅಧ್ಯಕ್ಷರಾಗಿ ಸಮರ್ಥ ರೀತಿಯಲ್ಲಿ ಈ ಸಂಸ್ಥೆಯನ್ನು ಮುನ್ನಡೆಸಿದ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಅವರು ಕಾರ್ಯಾಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ರಚತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಉಪಸ್ತರಿಂದ ಬಳಗದ ಮಹಾ ರಾಷ್ಟ್ರ ಘಟಕದ ಅಧ್ಯಕ್ಷರಾದ ದಾಮೋದರ್ ಶೆಟ್ಟಿ ಮಾತನಾಡಿ ಸ್ವಾಮೀಜಿಯವರು ಪ್ರತಿ ವರ್ಷ ಈ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ಗುರುಭಕ್ತರು ವಿಶೇಷವಾದ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ ಅದೇ ರೀತಿಯಲ್ಲಿ ರಚತ ಸಂಭ್ರಮ ಆಚರಣೆಗೆ ಗುರುಭಕ್ತರೆಲ್ಲರೂ ತಮ್ಮ ಅಮೂಲ್ಯವಾದ ಸಮಯವನ್ನು ನೀಡಿ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಘಟಕದ ಮಾರ್ಗದರ್ಶಕರಾದ ವಾಮಯ್ಯ ಬಿ ಶೆಟ್ಟಿ. ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಮಾಜಿ ಕಾರ್ಯಾಧ್ಯಕ್ಷೆ ರೇವತಿ ಮಾಮಯ್ಯ ಶೆಟ್ಟಿ. ರಚತ ಮಹೋತ್ಸವ ಸಮಿತಿಯ ಉಪ ಕಾರ್ಯಧ್ಯಕ್ಷ ಬೊಲ್ನಾಡ್ ಗುತ್ತು ಚಂದ್ರಹಾಸ್ ರೈ. ಕಾರ್ಯದರ್ಶಿಯಾಗಿ ವಿ ಕೆ ಸುವರ್ಣ ನವಿ ಮುಂಬೈ, ಉಪಸ್ತರಿದ್ದರು. ಪಿ ಧನಂಜಯ ಶೆಟ್ಟಿ, ಸಾಯನ್, .ಸಚಿನ್ ಎಸ್ ಶೆಟ್ಟಿ ನೆರೂಲ್ ಪಾಲ್ಗೊಂಡಿದ್ದರು
——–

ರಜತ ಮಹೋತ್ಸವದ ಕಾರ್ಯ ಧ್ಯಕ್ಷರಾಗಿ ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಆಯ್ಕೆ,
. ದಕ್ಷಿಣದ ಗಾಣಗಪುರವೆಂದೆ ಪ್ರಸಿದ್ಧಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳತಾಲೂಕಿನ ಕರೋಪಾಡಿ ಗ್ರಾಮದ. ಪ್ರಕೃತಿಯ ಮಡಿಲಲ್ಲಿರುವ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದ ಶ್ರೀ ಶ್ರೀ ಗುರುದೇವಾನಂದಸ್ವಾಮೀಜಿಯವರ ಆಶೀರ್ವಾದದಲ್ಲಿ ಮಹಾರಾಷ್ಟ್ರದ ಮುಂಬೈ ನಗರದಲ್ಲಿ 25 ವರ್ಷಗಳ ಹಿಂದೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಎಂಬ ಸಂಸ್ಥೆ ಪ್ರಾರಂಭಗೊಂಡಿದ್ದು ಇದೀಗ ಈ ಸಂಸ್ಥೆಗೆ 25 ವರ್ಷ, ಇದನ್ನು ಅರ್ಥಪೂರ್ಣವಾಗಿ ಆಚರಿಸುವ ಸಲವಾಗಿ ರಚಿತ ಸಂಭ್ರಮ ಸಮಿತಿ ರೂಪುಗೊಂಡಿದೆ ಇದರ ಕಾರ್ಯಧ್ಯಕ್ಷರಾಗಿ ,ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಸ್ಥಾಪಕ ಅಧ್ಯಕ್ಷ, ಮುಂಬೈಯ ಹೈಕೋರ್ಟ್ ನ ಪ್ರಸಿದ್ಧ ನ್ಯಾಯವಾದಿ , ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಹಾಗೂ, ಉಪ ಕಾರ್ಯ ಧ್ಯಕ್ಷರಾಗಿ ಉದ್ಯಮಿ , ಘಟಕದ ಮಾಜಿ ಉಪ ಅಧ್ಯಕ್ಷ ಬೊಲ್ನಾಡ್ ಗುತ್ತು ಚಂದ್ರಹಾಸ್ ರೈ. ಕಾರ್ಯದರ್ಶಿಯಾಗಿ ಸಂಘಟಕ, ರಂಗ ಕಲಾವಿದ, ನಿರ್ದೇಶಕ ವಿ ಕೆ ಸುವರ್ಣ ನವಿ ಮುಂಬೈ, ಹಾಗೂ ಕೋಶ ಧಿಕಾರಿಯಾಗಿ .ಡಾ. ಅದಿಪ್ ಕೆ. ಶೆಟ್ಟಿ, ಆಯ್ಕೆಗೊಂಡಿರೆ