
ಸಮಾಜವನ್ನು, ಮತ್ತು ಬ್ಯಾಂಕನ್ನು ಮುನ್ನಡೆಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಡಿ ಕೋಟ್ಯಾನ್
ಮುಂಬಯಿ ಮೇ 6.: ನಗರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ ಕಾರ್ಪೊರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷರಾಗಿದ್ದ ಬಿಲ್ಲವ ಸಮಾಜದ ಧೀಮಂತ ನಾಯಕ ಸನ್ಮಾನ್ಯ ಜಯ ಸಿ. ಸುವರ್ಣ ಅವರ ಪುತ್ರ ಸೂರ್ಯಕಾಂತ್ ಸುವರ್ಣ ಅವರ ಜನ್ಮದಿನದ ಪ್ರಯುಕ್ತ ಗೊರೆಗಾವ್‍ನಲ್ಲಿರುವ ಜಯ ಲೀಲಾ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಬಿಲ್ಲವರ ಅಸೋಸಿಯೇಷನ್ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್ ಮತ್ತು ಭಾರತ್ ಬ್ಯಾಂಕಿನ ನಿರ್ದೇಶಕರು. ಜಯ ಸುವರ್ಣ ರ ಅಭಿಮಾನಿಗಳು ವಿಶೇಷವಾಗಿ ಅಭಿನಂದಿಸಿದರು,







ಪ್ರಸ್ತುತ ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ಹುಟ್ಟುಹಬ್ಬದ ಸಲುವಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿತ್ಯಾನಂದ ಡಿ ಕೋಟ್ಯಾನ್ ಅವರು ಜಯ ಸುವರ್ಣರನ್ನೇ ಹೋಲುವ ಸೂರ್ಯಕಾಂತ್ ಮಿತಭಾಷಿ ಶಾಂತ ಸ್ವಭಾವದವರು. ಜಯ ಸುವರ್ಣರ ಸಾಮಾಜಿಕ ಕಾರ್ಯಗಳನ್ನು ಬಹಳ ಹತ್ತಿರದಿಂದ ಕಂಡವರು. ಸಮಾಜ ಸೇವೆ ಮಾಡುವುದೆಂದರೆ ಅದೊಂದು ತಪಸ್ಸು. ಸಾಮಾಜಿಕ ವಿಷಯದಲ್ಲಿ ಬಹಳಷ್ಟು ಅನುಭವಗಳನ್ನು ಇವರು ಇದೀಗಲೇ ಪಡೆದುಕೊಂಡಿದ್ದಾರೆ. ಅವರಿಗೆ ಭಾರತ್ ಬ್ಯಾಂಕ್ ಮತ್ತು ಬಿಲ್ಲವ ಸಮಾಜವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುವ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು. ಮತ್ತು ಕೋಟಿ ಚೆನ್ನಯರು ನೀಡಲಿ ಎಂದು ಹಾರೈಸಿದರು,
ಸಾಯಿಕೇರ್ ಲಾಜೆಸ್ಟಿಕ್ ನ ಆಡಳಿತ ನಿರ್ದೇಶಕ ಸುರೇಂದ್ರ ಕೆ ಪೂಜಾರಿಯವರು, ಎಲ್ಲರನ್ನೂ ಗೌರವದಿಂದ ಕಾಣುತ್ತ ಸಮಾಜವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುತ್ತಿದ್ದ ಜಯ ಸಿ ಸುವರ್ಣ ಅವರ ಆದರ್ಶದಲ್ಲಿ ಮುನ್ನಡೆಯುತ್ತಿರುವ ಸೂರ್ಯಕಾಂತ್ ಸುವರ್ಣರ ಸಾಮಾಜಿಕ ಕಾರ್ಯಗಳಿಗೆ ನಾವೆಲ್ಲರೂ ಬೆಂಬಲಿಗರಾಗಿರಬೇಕು. ತಮ್ಮನ್ನು ಸಮಾಜ ಸೇವೆಯಲ್ಲಿಯೇ ತೊಡಗಿಸಿಕೊಂಡಿರುವ ಇವರಿಗೆ ದೇವರು ಸಮಾಜವನ್ನು ಬಲಿಷ್ಠ ಗೊಳಿಸುವ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಸಮಾಜದ ಹಿರಿಯರಿಂದ ಅಭಿಮಾನಿಗಳಿಂದ ಗೌರವವನ್ನು ಸ್ವೀಕರಿಸಿದ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ, ಸಮಾಜದ ಜೊತೆಗೆ ಒಡನಾಟದಲ್ಲಿಟ್ಟುಕೊಂಡೇ ಅವರ ಆಶಯಗಳಿಗೆ ಸ್ಪಂದಿಸತ್ಢ ಜನಸೇವೆಯನ್ನು ಮಾಡುತ್ತಿದ್ದೇನೆ. ತಂದೆ ಮಾಡಿದ ಸಮಾಜ ಸೇವೆಯ ಒಂದಿಷ್ಟಾದರೂ ಮಾಡಲು ಸಾಧ್ಯವಾದರೆ ನನ್ನ ಜೀವನ ಸಾರ್ಥಕ, ವ್ಯಕ್ತಿ ಹಣದಲ್ಲಿ ಶ್ರೀಮಂತನಾಗುವುದಕ್ಕಿಂತ ಗುಣದಲ್ಲಿ ಶ್ರೇಷ್ಠನಾಗಿರಬೇಕು ಎನ್ನುವ ಸಿದ್ಧಾಂತದಲ್ಲಿ ಬೆಳೆದವನು ನಾನು. ಸಮಾಜ ಬಾಂಧವರು ನನ್ನ ಮೇಲಿಟ್ಟಿರುವ ಪ್ರೀತಿ ಗೌರವವನ್ನು ಸದಾ ಉಳಿಸುತ್ತೇನೆ. ಬ್ಯಾಂಕಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಸಮಯವನ್ನು ನೀಡುತ್ತಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಸುಭಾಶ್ ಜಯ ಸುವರ್ಣ.ದಿನೇಶ ಜಯ ಸುವರ್ಣ. ಯೋಗೀಶ್ ಜಯ ಸುವರ್ಣ,
ಭಾರತ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ್ ಜೆ ಪೂಜಾರಿ, ಭಾಸ್ಕರ್ ಎಂ ಸಾಲಿಯಾನ್. ಗಂಗಾಧರ್ ಎನ್ ಅಮೀನ್ ಕರ್ನಿರೆ, ಮೋಹನ್ ಕೋಟ್ಯಾನ್. ಸದಾಶಿವ ಕರ್ಕೇರ. ರವಿ ಎಂ ಸಾಲಿಯಾನ್,ಗಣೇಶ್ ಪೂಜಾರಿ (ಸೇವಾದಳ), ಬಬಿತ ಕೋಟ್ಯಾನ್, ಕೇಶವ ಪೂಜಾರಿ, ರವಿಂದ್ರ ಕೋಟ್ಯಾನ್, ಶಶಿಧರ್ ಬಂಗೇರ,ಕಮಲೇಶ್ ಕರ್ಕೆರ. ಸಚಿನ್ ಆರ್ ಪೂಜಾರಿ. ಚಿಂತನ್ ಎಸ್ ಶೆಟ್ಟಿ. ಅಕ್ಷಯ ಪೂಜಾರಿ, ದಿನೇಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.