
ಮುಂಬಯಿ : ಹೆಸರಾಂತ ಕ್ರೀಡಾಪಟು, ಸಮಾಜ ಸೇವಕ ಪುರುಷೋತ್ತಮ ಕೆ. ಐಲ್ (79) ಅಲ್ಪಕಾಲದ ಅನಾರೋಗ್ಯದಿಂದಾಗಿ ಮೇ. 8 ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಸಂಬಂಧಿಕರನ್ನು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಮೂಲತ: ಕಾಸರಗೋಡು ಜಿಲ್ಲೆಯ ಉಪ್ಪಳದ ಐಲ ದವರಾದ ಇವರು ಸುಮಾರು 5 ದಶಯಗಳ ದಶಕಗಳ ಕಾಲ ದಿ ಯಂಗ್ ಎಂಗ್ ಮೆನ್ಸ್ ಬೋವಿ ಅಸೋಸಿಯೇಷನ್ (ವೈ. ಎಂ. ಬಿ. ಎ.) ಮುಂಬಯಿ ಇದರಲ್ಲಿ ಕ್ರೀಯಾಶೀಲರಾಗಿದ್ದು ಇದರ ಮಾಜಿ ಅಧ್ಯಕ್ಷರು. ಮೊಯಾ ಸಮುದಾಯದ ಏಕೈಕ ಕ್ರೀಡಾ ಸಂಘಟನೆ ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ 40 ವರ್ಷಗಳಿಂದ ಸೇವೆ ಮಾಡುತ್ತಿದ್ದ ಇವರು ಪ್ರಸ್ತುತ ಕಳೆದ ೧೫ ವರ್ಷಗಳಿಂದ ಇದರ ಅಧ್ಯಕ್ಷರಾಗಿ ಸಮಾಜದ ಯುವ ಕ್ರೀಡಾ ಪಟುಗಳಿಗೆ ಸ್ಪೂರ್ತಿಯಾಗಿದ್ದರು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಬಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮುಂಬಯಿಯ ಎಲ್ ಆಂಡ್ ಟಿ ಸಂಸ್ಥೆಯಲ್ಲಿ ದೀರ್ಘ್ ಕಾಲ ಸೇವೆ ಸಲ್ಲಿಸಿ ಸ್ವಂಥ ಉದ್ದಿಮೆಯನ್ನು ಹೊಂದಿದ್ದರು. ವಾಮಂಜೂರು ಹದಿನಾರು ಸಮಸ್ಥರ ಸಭೆ ಮಾಟುಂಗಾ, ನೇತಿಲ ಗುತ್ಯಮ್ಮ ಭಗವತೀ ಭಂಡಾರ, ಮೋಯಾ ಕ್ರೆಡಿಟ್ ಸೊಸೈಟಿ, ಗೋರೆಗಾಂವ್ ಕರ್ನಾಟಕ ಸಂಘ ಹೀಗೆ ಹಲವಾರು ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಉತ್ತಮ ಸಮಾಜ ಸೇವಕರಾಗಿದ್ದು ಇವರ ನಿಧನಕ್ಕೆ ದಿ ಯಂಗ್ ಎಂಗ್ ಮೆನ್ಸ್ ಬೋವಿ ಅಸೋಸಿಯೇಷನ್, ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್, ವಾಮಂಜೂರು ಹದಿನಾರು ಸಮಸ್ಥರ ಸಭೆಯ ಕಾರ್ಯಕಾರಿ ಸಮಿತಿ ಹಾಗೂ ಎಲ್ಲಾ ಸದಸ್ಯರುಗಳು ಸಂತಾಪ ಸೂಚಿಸಿದ್ದಾರೆ.