
ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ನವಿ ಮುಂಬಯಿ ಶಾಖೆಯ ನೂತನ ಕಾರ್ಯಾಲಯವನ್ನು ರವಿವಾರ ದಿನಾಂಕ
12/5/2024 ರಂದು ನ್ಯೂ ಪನ್ವೇಲ್ ಖಾಂದಾ ಕಾಲನಿಯ ಸೆಕ್ಟರ್ 1ರಲ್ಲಿರುವ ಶಿಪಕೃಪಾ ಅಪಾರ್ಟ್‌ಮೆಂಟ್‌ನಲ್ಲಿ ಉದ್ಘಾಟಿಸಲಾಯ್ತು.
ಬೆಳಗ್ಗೆ ಗಂಟೆ 8:30ಕ್ಕೆ ಗಣಹೋಮವನ್ನು ನೆರವೇರಿಸಲಾಗಿ ನಾರಾಯಣ ಕೋಟ್ಯಾನ್ ಮತ್ತು ಹೇಮಲತಾ ಕೋಟ್ಯಾನ್ ದಂಪತಿ ಪೂಜೆಯಲ್ಲಿ ಭಾಗವಹಿಸಿದರು. ಆ ಬಳಿಕ ಸದಸ್ಯರಿಂದ ಭಜನಾ ಕಾರ್ಯಕ್ರಮವು ಜರಗಿ ನೆರೆದವರಿಗೆ ಪ್ರಸಾದ ವಿತರಣೆ ಮಾಡಲಾಯ್ತು.
ತದ ನಂತರ ಸಭಾ ಕಾರ್ಯಕ್ರವು ಜರಗಿತು. ಶಾಖೆಯ ಕಾರ್ಯದರ್ಶಿ ಶೇಖರ ಮೈಂದನ್, ಉಪಾಧ್ಯಕ್ಷರಾದ ನಾರಾಯಣ ಕೋಟ್ಯಾನ್, ಕೋಶಾಧಿಕಾರಿ ಬಾಬು ಮೊಗವೀರ, ಮಹಿಳಾ ವಿಭಾಗದ ಅದ್ಯಕ್ಷೆ ಜಾನಕಿ ಬಂಗೇರ, ಹಿರಿಯ ಸದಸ್ಯ ಸಿದ್ಧಾರ್ಥ ಕೋಟ್ಯಾನ್ ಮತ್ತು ಸಲಹೆಗಾರರಾದ ಸೋಮನಾಥ ಎಸ್.ಕರ್ಕೇರರು ವೇದಿಕೆಯಲ್ಲಿದ್ದರು.



ಮೊದಲಾಗಿ ಶೇಖರ ಮೈಂದನ್‌ರು ಎಲ್ಲರಿಗೂ ಸ್ವಾಗತಕೋರಿ ನೂತನ ಕಾರ್ಯಾಲಯವನ್ನು ದೊರಕಿಸಿ ಕೊಡುವಲ್ಲಿ ಅನೇಕ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು. ಸಿದ್ದಾರ್ಥ ಕೋಟ್ಯಾನರು ಮಾತನಾಡುತ್ತಾ ಈ ನೂತನ ಕಾರ್ಯಾಲಯವು ಅನುಕೂಲಕರ ಜಾಗದಲ್ಲಿರುವುದರಿಂದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಾಖೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಕೇಳಿಕೊಂಡರು. ಬಳಿಕ ಮಾತನಾಡಿದ ನಾರಾಯಣ ಕೋಟ್ಯಾನರು ಒಂದು ಸಂಸ್ಥೆಗೆ ಸದಸ್ಯರ ಬಲವೇ ಮುಖ್ಯವಾಗಿದೆ. ಹಾಗಾಗಿ ಸದಸ್ಯರೆಲ್ಲರೂ ಶಾಖೆಯ ಕಾರ್ಯಕ್ರಮಗಳಲ್ಲಿ ಮುತುವರ್ಜಿ ವಹಿಸಬೇಕೆಂದು ಕೇಳಿಕೊಂಡರು. ಜಾನಕಿ ಬಂಗೇರರು ಹೊಸ ಕಾರ್ಯಾಲದ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೊಡಿಸಿದ ಎಲ್ಲಾ ಸದಸ್ಯರ ಉಪಕಾರ ಸ್ಮರಣೆ ಮಾಡಿದರು. ಬಳಿಕ ಸೋಮನಾಥ ಎಸ್.ಕರ್ಕೇರರು ಮಾತನಾಡುತ್ತಾ ಮಂಡಳಿಯ ನವಿ ಮುಂಬಯಿ ಶಾಖೆಯು ಈ ಪರಿಸರದ ತುಳು-ಕನ್ನಡಿಗರ ಇತರ ಸಂಘಟನೆಗಳಷ್ಟೆ ಕ್ರಿಯಾಶೀಲವಾಗಿದ್ದು ಸದಾ ಸಮಾಜಮುಖಿ ಸೇವೆಯಲ್ಲಿ ನಿರತವಾಗಿರುವುದು ಸಂತೋಷದ ಸಂಗತಿ ಎಂದರು.
ಸದಸ್ಯರ ಪೈಕಿ ತೇಜಸ್ವಿ ಮಲ್ಪೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ನೆರೆದವರಿಗಾಗಿ ಬೆಳಗ್ಗೆ ಲಘು ಉಪಾಹಾರ ಮತ್ತು ಮಧ್ಯಾಹ್ನ ಶಾಖೆಯ ಸಕ್ರಿಯ ಸದಸ್ಯೆ ವಿನೋದಾ ಅಮೀನ್‌ರ ಪ್ರಾಯೋಜಕತ್ವದಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಸೋಮನಾಥ ಎಸ್.ಕರ್ಕೇರ, 9819321186