September 6, 2026
Mumbai News Kannada
ಮುಂಬಯಿ

ಮುಂಬೈ ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣ : ಗ್ಯಾಂಗ್ ಸ್ಟರ್ ಛೋಟಾ ರಾಜನ್ ಗೆ ಜಾಮೀನು





ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್​ಸ್ಟರ್ ಛೋಟಾ ರಾಜನ್​ಗೆ ಜಾಮೀನು ಮಂಜೂರು ಮಾಡಲಾಗಿದೆ. 2001ರಲ್ಲಿ ಮುಂಬೈಯ ಹೋಟೆಲ್ ಉದ್ಯಮಿ ಜಯ್​ಶೆಟ್ಟಿ ಕೊಲೆಯಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲವು ಕಳೆದ ಮೇ 30ರಂದು ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್​ಗೆ ಛೋಟಾ ರಾಜನ್ ಮೇಲ್ಮನವಿ ಸಲ್ಲಿಸಿದ್ದ, ಜಾಮೀನು ಮಂಜೂರು ಮಾಡಿ ಅಧೀನ ನ್ಯಾಯಾಲಯದ ಶಿಕ್ಷೆಯನ್ನು ರದ್ದುಪಡಿಸುವಂತೆ ಅರ್ಜಿಯಲ್ಲಿ ಛೋಟಾ ರಾಜನ್ ಕೋರಿದ್ದ. ಸಧ್ಯಕ್ಕೆ ಛೋಟಾ ರಾಜನ್​ಗೆ ಬಾಂಬೆ ಹೈಕೋರ್ಟ್​ನ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ. ಜಾಮೀನಿಗಾಗಿ ಒಂದು ಲಕ್ಷ ರೂ. ಭದ್ರತಾ ಬಾಂಡ್ ನೀಡಲು ಆದೇಶಿಸಲಾಗಿದೆ.

ಆದರೆ ಛೋಟಾ ರಾಜನ್ ಜೈಲಿನಿಂದ ಹೊರ ಬರಲು ಸಾಧ್ಯವಿಲ್ಲ. ಏಕೆಂದರೆ ಉಳಿದ ಪ್ರಕರಣಗಳಲ್ಲೂ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಜಯ ಶೆಟ್ಟಿ ಅವರು ಕೇಂದ್ರೀಯ ಮುಂಬೈನ ಗಾಂಧೇವಿಯಲ್ಲಿ ಗೋಲ್ಡನ್​ ಕ್ರೌನ್ ಎನ್ನುವ ಹೋಟೆಲ್​ನ್ನು ನಡೆಸುತ್ತಿದ್ದರು. 2001ರ ಮೇ 4 ರಂದು ಛೋಟಾ ರಾಜನ್ ಗ್ಯಾಂಗ್​ನ ಇಬ್ಬರು ಶೂಟರ್​ಗಳು ಜಯ್​ಶೆಟ್ಟಿಯನ್ನು ಕೊಲೆ ಮಾಡಿದ್ದರು ಎನ್ನುವ ಆರೋಪವಿದೆ. ಇದಕ್ಕೂ ಮುನ್ನ ಛೋಟಾ ರಾಜನ್ ಗ್ಯಾಂಗ್​ಗೆ ಸೇರಿದ ಹೇಮಂತ್ ಪೂಜಾರಿ ಎನ್ನುವ ವ್ಯಕ್ತಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಜಯ್​ಶೆಟ್ಟಿ ಹಣವನ್ನು ನೀಡದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎನ್ನುವುದು ಪೊಲೀಸರ ವಾದವಾಗಿದೆ. ಸಧ್ಯಕ್ಕೆ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ಖ್ಯಾತ ಪತ್ರಕರ್ತ ಜೇ ಡೇ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.



Related posts

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ

Mumbai News Desk

ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ: ಕನ್ನಡಿಗ ಡಾ. ಕೆ. ಎಚ್. ಗೋವಿಂದರಾಜ್ (ಐಎಎಸ್) ಅವರಿಗೆ ಒಕ್ಕಲಿಗರ ಸಂಘ ಮಹಾರಾಷ್ಟ್ರ ವತಿಯಿಂದ ಗೌರವ

Mumbai News Desk

ಡೊಂಬಿವಲಿಯಲ್ಲಿ ಮಹಿಳೆಯರ ಹಳದಿ-ಕುಂಕುಮ ಸಂಭ್ರಮ: ಸಾಂಪ್ರದಾಯಿಕ ಉಡುಗೆ, ನೃತ್ಯದ ಮೆರುಗು

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ ದೇವಸ್ಥಾನದ  ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಬಂಟರ ಭವನದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 25ನೇ ಸಂಸ್ಮರಣೆ.

Mumbai News Desk

ಕನಕದಾಸ ಜಯಂತಿ-ಕುವೆಂಪು ಜಯಂತಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಕರುನಾಡ ಡಿಂಡಿಮ ಸಮಾರೋಪ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಘ ಸಂಸ್ಥೆಗಳಿಗೆ, ಪ್ರಶಸ್ತಿ ಸನ್ಮಾನ

Mumbai News Desk