April 2, 2025
ಸುದ್ದಿ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ – ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ, ಧಾರ್ಮಿಕ ಸಭೆ.


ಪರಬ್ರಹ್ಮ ನಿತ್ಯಾನಂದರ ಭಕ್ತಿಯಿಂದ ಜೀವನ ಪಾವನ – ಕೆ. ಕೆ.ಆವರ್ಸೆಕರ್
ಉಡುಪಿ ಮತ್ತೆ, ಮತ್ತೆ ನನ್ನನ್ನು ಸೆಳೆಯುತಿದೆ, ಏಕೆ ಎಂದು ತಿಳಿಯುತ್ತಿಲ್ಲ, ಶ್ರೀ ನಿತ್ಯಾನಂದ ಸ್ವಾಮಿಯ ಮನಸಿನ್ನಲ್ಲಿ ಉಡುಪಿಯನ್ನು ಒಂದು ದೊಡ್ಡ ಪುಣ್ಯ ಕ್ಷೇತ್ರವನ್ನಾಗಿ ಮಾಡುವ ಇಚ್ಛೆಯಿದೆ ಎಂದು ಕಾಣುತ್ತದೆ. ನನ್ನ ಜೀವನ ಅತೀ ಕಠಿಣ ಪರಿಸ್ಥಿಯಲ್ಲಿ ಸಾಗುತ್ತಿದ್ದ ಸಮಯದಲ್ಲಿ
ಸ್ವಾಮಿ ನಿತ್ಯಾನಂದರ ದರುಶನದ ಬಳಿಕ ನನ್ನ ಜೀವನದಲ್ಲಿ ಪರಿವರ್ತನೆ ಆಯಿತು. ಬಿಡುವಿಲ್ಲದಷ್ಟು ಕೆಲಸ, ದೊಡ್ಡ ಯೋಜನೆ ಗಳು ಹೀಗೆ ನಾನು ಯಶಸ್ಸು ಗಳಿಸಿದೆ. ಇದೆಲ್ಲಾ ಸಾಧ್ಯವಾದದ್ದು ಸ್ವಾಮಿ ನಿತ್ಯಾನಂದರ ಅನುಗ್ರಹದಿಂದಲೇ ಎಂದು ನನಗೆ ಮನವರಿಕೆಯಾಯಿತು. ಉಡುಪಿಗೆ ಮೊದಲ ಬಾರಿ ಬಂದಾಗಲೇ ನನಗೆ ಅನಿಸಿತ್ತು ಇಲ್ಲಿಯ ಮಂದಿರದ ಕಾರ್ಯ ನಿತ್ಯಾನಂದ ಸ್ವಾಮಿ ನನಗಾಗಿ ಮಿಸಾಲಿಟ್ಟಿದ್ದಾರೆ, ಎಂದು. ಮಂದಿರದ ಜೀರ್ಣೋದ್ಧಾರ, ಇದೀಗ ಬಾಲಾಭೋಜನಾಲಯ ಮತ್ತು ಧ್ಯಾನ ಮಂದಿರದ ನಿರ್ಮಾಣ, ಎಲ್ಲವೂ ನಿತ್ಯಾನಂದರೆ ಮಾಡಿಸಿದ್ದು, ನಾವು ನೆಪ ಮಾತ್ರ. ನಿತ್ಯಾನಂದರು ಪರಬ್ರಹ ನಿಗಿಂತ ಕಡಿಮೆಯಿಲ್ಲ, ಅವರ ಭಕ್ತಿಯಿಂದ ಜೀವನ ಪಾವನವಾಗುತ್ತದೆ, ಎಂಬ ಸಂದೇಶವನ್ನು ನಾನು ಈ ವೇದಿಕೆಯಿಂದ ನೀಡುತಿದ್ದೇನೆ, ಎಂದು ಉಡುಪಿ ಶ್ರೀ ನಿತ್ಯಾನಂದ ಮಂದಿರ ಮಠದ ಮ್ಯಾನೇಜಿಂಗ್ ಟ್ರಸ್ಟಿ ಮುಂಬಯಿಯ ಉದ್ಯಮಿ ಕೆ. ಕೆ. ಆವರ್ಸೆಕರ್ ನುಡಿದರು.


ಅವರು ಮೇ 10ರಂದು ಉಡುಪಿಯ ಕವಿ ಮುದ್ದಣ್ಣ ಮಾರ್ಗದಲ್ಲಿರುವ, ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠದ ನೂತನ ಬಾಲಭೋಜನಾಲಯ ಮತ್ತು ಧ್ಯಾನ ಮಂದಿರದ ಲೋಕಾರ್ಪಣ ಸಮಾರಂಭದಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತಿದ್ದರು.
ಮಂದಿರ ಮಠದ ಎಕ್ಸಿಕೂಟಿವ್ ಟ್ರಸ್ಟಿ ಕೆ. ದಿವಾಕರ ಶೆಟ್ಟಿ ತೋಟದಮನೆ ಮಾತನಾಡುತ್ತಾ “ನಾವು ಬಾಲಾಭೋಜನಲಯ ಮತ್ತು ಧ್ಯಾನ ಮಂದಿರ ನಿರ್ಮಿಸಲು ನಿರ್ಧಾರ ಮಾಡಿದ್ದಾಗ ಆವರ್ಸೆಕರ್ ಅವರು ಈ ಕೆಲಸ ನಾನು ಮಾಡುತ್ತೇನೆ ಎಂದು ಮುಂದೆ ಬಂದರು. ಕೇವಲ ಎರಡು ತಿಂಗಳಲ್ಲಿ ಒಳ್ಳೆ ರೀತಿಯಲ್ಲಿ ಸಭಾಗ್ರಹ ನಿರ್ಮಾಣ ಆಗಿದೆ, ಎಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು. ಮಂದಿರ ನಿರ್ಮಾಣ ಆಗುವವಾಗಲೂ
ಆವರ್ಸೆಕರ್, ಸುರೇಂದ್ರ ಕಲ್ಯಾಣಪುರ, ಕಾಂಜ್ಞನಗಾಡ್ ನ ಟ್ರಸ್ಟಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಇಲ್ಲಿ ಬಾಲಾಭೋಜನ ನಿರಂತರ ನಡೆಸುವ ಸಂಕಲ್ಪವಿದೆ, ನಮ್ಮ ಎಲ್ಲಾ ಸಂಕಲ್ಪಗಳು ನೆರವೆರಿದೆ, ಈ ಎಲ್ಲಾ ಕಾರ್ಯಗಳೂ ನಿತ್ಯಾನಂದರು ಆವರ್ಸೆಕರ್ ಅವರಿಗೆ ಪ್ರೇರಣೆ ನೀಡಿ ಮಾಡಿಸಿದ್ದಾರೆ. ಮುಂದೆ ವಿದ್ಯಾ ಸಂಸ್ಥೆ ಸ್ಥಾಪನೆ , ವೈದಕೀಯ ನೆರವು ನೀಡುವ ಯೋಜನೆಯಿದೆ.ಆಡಳಿತ ಸಮಿತಿಯವರು, ಸೇವಾ ಸಮಿತಿಯವರು, ಭಕ್ತರು ಒಳ್ಳೆ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಂದಿರಕ್ಕೆ ನಿರಂತರ ಸಹಾಯ ಮಾಡುತ್ತಿರುವ ಕೆ.ಕೆ.ಆವರ್ಸೆಕರ್, ಮುಂಬೈಯ ಉದ್ಯಮಿಗಳಾದ ಸುರೇಂದ್ರ ಕಲ್ಯಾಣಪುರ, ಮಾಧವ ನಾಡಕರ್ಣಿ ಹಾಗೂ ನಾಗೇಶ್ ಪಾಂಡೆ ಅವರನ್ನು ಸನ್ಮಾನಿಸಲಾಯಿತು.
ಕರಾವಳಿಯಲ್ಲಿ ಭಜನಾ ಕಮ್ಮಟ, ಕುಣಿತ ಭಜನೆಗೆ ತರಬೇತಿ ನೀಡುತ್ತಿರುವ ಪ್ರಕಾಶ್ ಮಂದಾರ್ತಿ, ವಿಜಯ ಕೊಂಡಾಡಿ, ರಾಮ ನಾಯರ್ ಪೆರ್ನಾನಂಕಿಲ, ಪೂರ್ಣಿಮಾ ಪೆರ್ಡೂರು, ಪ್ರವೀಣ್ ಪಡುಕೆರೆ, ನಾರಾಯಣ ಆಚಾರ್ಯ, ಭವಾನಿ ಶೆಟ್ಟಿ ಮಣಿಪುರ, ವಿಶ್ವಾನಾಥ್ ಕಡೆಕಾರ್, ರೇಣುಕಾ ಜೋಗಿ, ಇವರನ್ನು ಗೌರವಿಸಲಾಯಿತು.
ಮಕ್ಕಳ ಕುಣಿತ ಭಜನೆಯಲ್ಲಿ ಸೇವಾ ಭಾರತಿ ಭಜನಾ ಮಂಡಳಿ ಮುಂಡ್ಕೂರು, ಸಚ್ಚರಿಪೇಟೆ ತಂಡ ರೂಪಾಯಿ 20,000 ದೊಂದಿಗೆ ಪ್ರಥಮ, ಶ್ರೀ ಆಂಜನೇಯ ಭಜನಾ ಮಂದಿರ ಸಾಣೂರು,(15,000 ರೂಪಾಯಿ )ದ್ವಿತೀಯ, ಬ್ರಹ್ಮ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಪಾಲಡ್ಕ, ಮೂಡಬಿದ್ರಿ (ರೂಪಾಯಿ 10,000)ತೃತೀಯ ಸ್ಥಾನ ಪಡೆಯಿತು.
ಬಂಟ್ವಳಾ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ, ಬೈಲಹೊಂಗಲ ಬೇವಿನಕೊಪ್ಪ ಆನಂದಶ್ರಮದ ಶ್ರೀ ವಿಜಯಾನಂದ ಸ್ವಾಮಿ, ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ಮಂದಿರ ಮಠದ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಕೆ. ಮೋಹನ್ಚಂದ್ರ ನಂಬಿಯಾರ್, ಮುಂಬೈಯ ಉದ್ಯಮಿಗಳಾದ ಸುರೇಂದ್ರ ಕಲ್ಯಾಣಪುರ, ನಾಗೇಶ್ ಪಾಂಡೆ, ಮಾಧವ ನಾಡಕರ್ಮಿ, ಪುರುಷೋತ್ತಮ ಶೆಟ್ಟಿ, ಆಡಳಿತ ಮಂಡಳಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಬನ್ನಂಜೆ ವೇದಿಯಲ್ಲಿ ಉಪಸ್ಥಿತರಿದ್ದರು.
ಉದಯ ಕುಮಾರ್ ಶೆಟ್ಟಿ ಬನ್ನಂಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಈಶ್ವರ್ ಚಿತ್ಪಾಡಿ ವಂದಿಸಿದರು. ರಾಮಚಂದ್ರ ಮಿಜಾರು ಕಾರ್ಯಕ್ರಮ ನಿರೂಪಿಸಿದರು.

ಬೆಳ್ಳಿಗೆ ಮಂದಿರದ ಮೊದಲ ಮಹಡಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ದಿ. ಉಮಾ ಕೃಷ್ಣ ರಾವ್ ಅವರ ಸ್ಮರಣಾರ್ಥ ಅವರ ಪುತ್ರ ಕೆ. ಕೆ.ಆವರ್ಸೆಕರ್ ನಿರ್ಮಿಸಿದ ಬಾಲಭೋಜನಾಲಾಯ, ಧ್ಯಾನ ಮಂದಿರವನ್ನು ಕೆ.ಕೆ.ಆವರ್ಸೆಕರ್ ಉದ್ಘಾಟಿಸಿದರು. ಶಾಸಕ ಯಶಪಾಲ್ ಸುವರ್ಣ, ಉದ್ಯಮಿ ನಾಡೋಜ ಜಿ. ಶಂಕರ್,ಡಾ ತಲ್ಲೂರು ಶಿವರಾಮ್ ಶೆಟ್ಟಿ ಉಪಸ್ಥಿತರಿದ್ದರು.

ಕಲಿಯುಗದಲ್ಲಿ ಗುರುಭಕ್ತಿಗೆ ಪ್ರೇರಣೆಯಾದ ಸಾನಿಧ್ಯ – ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಆಶೀರ್ವಚನ ನೀಡಿದ ಮೋಹನದಾಸ ಪರಮಹಂಸ ಸ್ವಾಮೀಜಿ “ಉಡುಪಿಯ ಶ್ರೀ ನಿತ್ಯಾನಂದ ಮಂದಿರ ಮಠವು ಕಲಿಯುಗದಲ್ಲಿ ಗುರುಭಕ್ತಿಗೆ ಪ್ರೇರಣೆಯಾದ ಸಾನಿಧ್ಯ. ಸಮಾಜದಲ್ಲಿ ಸತ್ ಚಿಂತನೆ, ಸತ್ಸಂಗ, ಸತ್ಕಾರ್ಯಗಳನ್ನು ಮಾಡಿ ಗುರುಭಕ್ತಿಯ ಮೂಲಕ ಸಾರ್ಥಕತೆಯನ್ನು ಕಂಡುಕೋಳ್ಳ ಬಹುದು ಎಂಬ ಸಂದೇಶವನ್ನು ಈ ಮಠ ನೀಡಿದೆ. ಇದು ಸಾಮಾನ್ಯ ಮಠ ಅಲ್ಲ, ಶೀಲಾನ್ಯಾಸದಿಂದ ಪ್ರಾರಂಬಿಸಿ, ಇಂದಿನ ತನಕ ಇಲ್ಲಿ ಚಮತ್ಕಾರಗಳೆ ನಡೆದಿವೆ. ನಾನು ದೇಶದ ವಿವಧ ಕಡೆ ಇರುವ ಗುರುಗಳ ಮೂರ್ತಿಯನ್ನು ಕಂಡಿದ್ದೇನೆ, ಆದರೆ ಉಡುಪಿಯ ಮಠದ ಮೂರ್ತಿಯ ಶೋಭೆ ವರ್ಣಿಸಲು ಅಸಾಧ್ಯ, ಮುಂದೆ ಜಗತ್ತಿಗೆ ಬೆಳಕನ್ನು ತೋರಿಸುವ ಪ್ರಭೆ ಇಲ್ಲಿಯ ಮೂರ್ತಿಯಲ್ಲಿದೆ. ಕೇವಲ 2 ತಿಂಗಳಲ್ಲಿ ಬಾಲಭೋಜನಾಲಾಯ ಸುಂದರವಾಗಿ ನಿರ್ಮಾಣಗೊಂಡಿದ್ದು ಗುರುಗಳ ಲೀಲೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಕ್ತರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಶ್ರೀ ಕ್ಷೇತ್ರಕ್ಕೆ ಬಂದು ಬಾಲಾಭೋಜನ ನೀಡುವ ಸತ್ಕರ್ಮದಲ್ಲಿ ಪಾಲ್ಗೊಂಡರೆ ವಿಶೇಷವಾದಂತಹ ದೈವಿಕ ಶಕ್ತಿ ಮಕ್ಕಳಲ್ಲಿ ಅನಾವರಣಗೊಳ್ಳಬಹುದು. ಬಾಲಾಭೋಜನ ನಿರಂತರವಾಗಿ ನಡೆಯಲು ಶಾಶ್ವತ ನಿಧಿಯ ಸ್ಥಾಪನೆ ಅಗತ್ಯ, ಅದಕ್ಕಾಗಿ ನಾನು ಮಹಾಲಕ್ಷ್ಮಿ ಪ್ರತಿಷ್ಠಾನದಿಂದ ಒಂದು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಮಾಣಿಲ ಶ್ರೀ ನುಡಿದರು.

ನಿತ್ಯಾನಂದರು ಪರಬ್ರಹ್ಮ, ಪರಶಿವ – ಶ್ರೀ ವಿಜಯಾನಂದ ಸ್ವಾಮೀಜಿ ಬೇವಿನಕೊಪ್ಪ.
ನಿತ್ಯಾನಂದರು ಪರಬ್ರಹ್ಮ, ಪರಶಿವ, ಅವರ ಬಾಯಿಯಿಂದ ಬಂದ ಅಮೃತ ವಾಣಿಯೇ ಚಿದಕಾಶ ಗೀತೆ. ನಿತ್ಯಾನಂದರನ್ನು ವರ್ಣಿಸಲು ಅಸಾಧ್ಯ, ಅವರದ್ದು ಅಜಾತವಾದ ತತ್ವ, ಅವರು ಪರಬ್ರಹ್ಮ ಸ್ವರೂಪಿ. ಅವರು ಮಾಡಿದನ್ನೇ ಹೇಳು, ಹೇಳಿದ್ದನ್ನೇ ಮಾಡು ಎಂಬ ತತ್ವವನ್ನು ಸಾರಿದ್ದು, ಇದು ಎಲ್ಲರಿಗೂ ಅನ್ವಯಿಸುತ್ತದೆ. ನಾವು ಹಿಂದೂ, ನಾವು ಬಂಧು, ನಾವು ಒಂದು ಎಂದು ಹೇಳುತ್ತೇವೆ, ಆದರೆ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವ ವ್ಯವಸ್ಥೆ ಈಗಲೂ ನಮ್ಮಲ್ಲಿ ಇಲ್ಲ, ಇದಕ್ಕಾಗಿ ನಿತ್ಯಾನಂದರು ಬಾಲಭೋಜನ ಆರಂಭಿಸಿದರು. ಮಕ್ಕಳ್ಳಲ್ಲಿ ದೇವರಿದ್ದಾನೆ, ಆದ್ದರಿಂದ ಬಾಲಾಭೋಜನದಲ್ಲಿ ಶಕ್ತಿಯಿದೆ ಎಂದು ವಿಜಯಾನಂದ ಸ್ವಾಮಿ ಆಶೀರ್ವಚನ ನೀಡಿದರು.

Related posts

ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶ

Mumbai News Desk

ಒಕ್ಕೂಟದ ಮೂಲ್ಕಿಯ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಸರಕಾರದಿಂದ ಅನುಮತಿ

Mumbai News Desk

ಸಾಕ್ಷರತೆ ಆದರೆ ಸಾಲದು, ಜೀವನಕ್ಕೆ ಸ್ಪಂದಿಸುವ ಶಿಕ್ಷಣ ಮುಖ್ಯ: ಬಿ.ಕೆ.ಹರಿಪ್ರಸಾದ್.

Mumbai News Desk

ಯುಎಇ ಬಂಟ್ಸ್ ನ 47ನೇ ವರ್ಷದ “ಗಲ್ಫ್ ಬಂಟೋತ್ಸವ-2024″* ಡಾ.ಕೆ.ಪ್ರಕಾಶ್ ಶೆಟ್ಟಿಯವರಿಗೆ ಬಂಟ ವಿಭೂಷಣ” ಪ್ರಶಸ್ತಿ ಪ್ರಧಾನ

Mumbai News Desk

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸಭೆ.

Mumbai News Desk

ಮಂಜೇಶ್ವರ – ಉಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲ.ಕಮಲಾಕ್ಷ ಪಂಜ

Mumbai News Desk